ರಾಹುಲ್ ಗಾಂಧಿ ಶಿವಮೊಗ್ಗ ಕಾರ್ಯಕ್ರಮ ಸಿದ್ದತೆಯಲ್ಲಿರುವ ಮಧು ಬಂಗಾರಪ್ಪ 1993ರಲ್ಲಿ ಇಂದಿರಾಗಾಂಧಿ ಅಲ್ಲಿಗೆ ಬಂದಿದ್ದರು ಎಂದರು!
ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಇನ್ನೂ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಬೇಕಿರುವುದರಿಂದ ಅ ಎಲ್ಲ ಕ್ಷೇತ್ರಗಳಿಗೆ ರಾಹುಲ್ ಅವರ ಸಂದೇಶ ಶಿವಮೊಗ್ಗದಿಂದಲೇ ಹೋಗಲಿ ಎಂಬ ಉದ್ದೇಶ ರಾಜ್ಯ ಕಾಂಗ್ರೆಸ್ ನಾಯಕರರು ಇಟ್ಟುಕೊಂಡಿದ್ದಾರೆ ಎಂದು ಮಧು ಹೇಳಿದರು.
ಶಿವಮೊಗ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನಾಳೆ ಶಿವಮೊಗ್ಗಗೆ ಆಗಮಿಸಿ ಇಲ್ಲಿನ ಅಲ್ಲಮಪ್ರಭು ಫ್ರೀಡಂ ಪಾರ್ಕ್ ನಲ್ಲಿ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜಕುಮಾರ್ (Geetha Shivaraj Kumar) ಅವರಿಗಾಗಿ ಮತ ಯಾಚಿಸಲಿದ್ದಾರೆ. ಕಾರ್ಯಕ್ರಮದ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಟಿವಿ9 ಶಿವಮೊಗ್ಗ ವರದಿಗಾರನೊಂದಿಗೆ ಮಾತಾಡಿದ್ದು, ನಾಳೆ 11.30 ಕ್ಕೆ ರಾಹುಲ್ ಆಗಮಿಸುತ್ತಾರೆ ಮತ್ತು ಅವರ ಭಾಷಣ 12 ಗಂಟೆಗೆ ಶುರುವಾಗಲಿದೆ ಎಂದು ಹೇಳಿದರು. ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಇನ್ನೂ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಬೇಕಿರುವುದರಿಂದ ಅ ಎಲ್ಲ ಕ್ಷೇತ್ರಗಳಿಗೆ ರಾಹುಲ್ ಅವರ ಸಂದೇಶ ಶಿವಮೊಗ್ಗದಿಂದಲೇ ಹೋಗಲಿ ಎಂಬ ಉದ್ದೇಶ ರಾಜ್ಯ ಕಾಂಗ್ರೆಸ್ ನಾಯಕರರು ಇಟ್ಟುಕೊಂಡಿದ್ದಾರೆ ಎಂದು ಮಧು ಹೇಳಿದರು. ಅದು ಸರಿ, ಮಾತಾಡುವ ಭರದಲ್ಲಿ ಅವರು 1993 ರಲ್ಲಿ ಇಂದಿರಾ ಗಾಂಧಿಯವರು ಇಲ್ಲಿಗೆ ಬಂದಿದ್ದರು ಅನ್ನುತ್ತಾರೆ. ಅವರ ಹತ್ಯೆಯಾಗಿದ್ದು 1984 ರಲ್ಲಿ ಶಿಕ್ಷಣ ಸಚಿವರೇ! ದೇಶದಾದ್ಯಂತ ಚರ್ಚೆಯಾಗುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ಟೇಪ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಮಧು ಬಂಗಾರಪ್ಪ ನಿರಾಕರಿಸಿದರು. ನಾಡಿನ ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದಷ್ಟೇ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ಜಾತಿ ಗಣತಿ: ರಾಹುಲ್ ಗಾಂಧಿ ಭರವಸೆ