ಬಂಗಾರದಂಥಾ ಮಗನನ್ನು ಕೊಟ್ಟಿದ್ದೀನಿ, ಸೆರಗೊಡ್ಡಿ ಕೇಳ್ತಿದೀನಿ ಮತಭಿಕ್ಷೆ ಹಾಕಿ: ಲಕ್ಷ್ಮಿ ಹೆಬ್ಬಾಳ್ಕರ್
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಗ ಮೃಣಾಲ್ ಪರವಾಗಿ ಮತಯಾಚನೆ ಮಾಡಿದ್ದಾರೆ. ನನ್ನ ಬಂಗಾರದಂಥಾ ಮಗನನ್ನು ನಿಮ್ಮೆಲ್ಲರ ಸೇವೆಗೆ ಧಾರೆ ಎರೆಯುತ್ತೇನೆ, ಸೆರಗೊಡ್ಡಿ ಕೇಳುತ್ತೇನೆ ಮತಭಿಕ್ಷೆಯನ್ನು ಹಾಕಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಮನವಿ ಮಾಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಮ್ಮ ಮನೆಯ ಮಗಳು, ನಿಮ್ಮ ಮನೆಯ ಬಾಗಿಲಿಗೇ ಬಂದಿದ್ದೀನಿ ಭಿಕ್ಷೆ ಹಾಕಿ ಎಂದು ಕೇಳಿದ್ದಾರೆ.
ನನ್ನ ಬಂಗಾರದಂಥಾ ಮಗನನ್ನು ನಿಮ್ಮೆಲ್ಲರ ಸೇವೆಗೆ ಧಾರೆ ಎರೆಯುತ್ತೇನೆ, ಸೆರಗೊಡ್ಡಿ ಕೇಳುತ್ತೇನೆ ಮತಭಿಕ್ಷೆಯನ್ನು ಹಾಕಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಮನವಿ ಮಾಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಮ್ಮ ಮನೆಯ ಮಗಳು, ನಿಮ್ಮ ಮನೆಯ ಬಾಗಿಲಿಗೇ ಬಂದಿದ್ದೀನಿ ಭಿಕ್ಷೆ ಹಾಕಿ ಎಂದು ಕೇಳಿದ್ದಾರೆ.
ಹೆಬ್ಬಾಳ್ಕರ್ ಕುಟುಂಬಕ್ಕೆ ರಾಜಕೀಯ ಶಕ್ತಿಯನ್ನು ತುಂಬಿ, ನನ್ನ ಕೊನೆಯ ಉಸಿರಿರುವವರೆಗೂ ನಿಮ್ಮೆಲ್ಲರ ಸೇವೆ ಮಾಡಿ ಋಣ ತೀರಿಸುತ್ತೇನೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ನಮ್ಮ ಸಂವಿಧಾನವನ್ನು ಬದಲಾಯಿಸಿಬಿಡುತ್ತೇನೆ ಎನ್ನುವ ಭಾಷಣವನ್ನು ಮಾಡುತ್ತಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದುಕೊಟ್ಟಂತಹ ಸಂವಿಧಾನವನ್ನು ನಾವೆಲ್ಲರೂ ಭಗವದ್ಗೀತೆ ಎಂದು ಹಣೆಗೆ ಹಚ್ಚಿಕೊಳ್ಳುತ್ತೇವೆ. ಪ್ರಜಾಪ್ರಭುತ್ವ ಈ ದೇಶದಲ್ಲಿ ಉಳಿಯಬೇಕಾದರೆ ಅದಕ್ಕೆ ಯಾರಾದ್ರೂ ಕಾರಣ ಅಂದ್ರೆ ಅದು ಅಂಬೇಡ್ಕರ್ ಬರೆದ ಸಂವಿಧಾನವೇ ಕಾರಣ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ