ಚುನಾವಣೆಯಲ್ಲಿ ನಿಂತಿರೋದು ಹೆಬ್ಬಾಳ್ಕರ್ ಮಗ ಅಲ್ಲ, ನಾನು ಅಂದುಕೊಂಡು ಮತ ಹಾಕಿ ಎಂದ ಸಿದ್ದರಾಮಯ್ಯ
ಚುನಾವಣೆಯಲ್ಲಿ ನಿಂತಿರುವುದು ಲಕ್ಷ್ಮೀ ಹೆಬ್ಬಾಳ್ಕರ್ ಮಗ ಅಲ್ಲ ನಾನು ಅಂದುಕೊಂಡು ಮತ ಹಾಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಮನವಿ ಮಾಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾ ಅಥವಾ ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಮೋದಿ ಸರ್ಕಾರ ಅಧಿಕಾರಕ್ಕೆ ಬರಬೇಕಾ ಎಂಬುದುನ್ನು ನೀವೇ ನಿರ್ಧರಿಸಿ ಎಂದು ಹೇಳಿದ್ದಾರೆ.

ನೀವು ಕಾಂಗ್ರೆಸ್ ಅಭ್ಯರ್ಥಿಗೆ ಆಶೀರ್ವಾದ ಮಾಡಿದರೆ ನನಗೆ ಮಾಡಿದಂತಾಗುತ್ತದೆ. ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಅಲ್ಲ ನಾನೇ ಅಭ್ಯರ್ಥಿಯಾಗಿ ನಿಂತಿದ್ದೇನೆ ಎಂದುಕೊಂಡು ಮತಹಾಕಿ ಎಂದಿದ್ದಾರೆ.
ಗ್ಯಾರಂಟಿಗಳನ್ನು ಜಾರಿ ಮಾಡಿದ್ರೆ ಅಭಿವೃದ್ಧಿ ಕೆಲಸ ನಿಂತೋಗುತ್ತೆ, ಖಜಾನೆ ಖಾಲಿಯಾಗುತ್ತದೆ, ಲೋಕಸಭಾ ಚುನಾವಣೆ ಮುಗಿದ ಬಳಿಕ ಎಲ್ಲಾ ಗ್ಯಾರಂಟಿಯೂ ನಿಂತು ಹೋಗುತ್ತದೆ ಎಂದು ಬಿಜೆಪಿ ಸುಳ್ಳು ಹೇಳಿಕೊಂಡು ಬರುತ್ತಿದೆ, ಆದರೆ ಕೊಟ್ಟ ಮಾತನ್ನು ತಪ್ಪಲು ನಾವು ಬಿಜೆಪಿಯವರಲ್ಲ, ಯಾವುದೇ ಕಾರಣಕ್ಕೂ ನೀಡಿದ ಭರವಸೆಯನ್ನು ಈಡೇರಿಸದೇ ಬಿಡುವುದಿಲ್ಲ, ನಮ್ಮ ಅವಧಿ ಮುಗಿಯುವವರೆ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ನಮಗೆ ಇನ್ನಷ್ಟು ಶಕ್ತಿ ಬರುತ್ತದೆ ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ