AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಹೇಳದೆ ಆ ಯವ್ವ ಏನೇನೋ ಮಾತಾಡ್ತಾರೆ ಎಂದು ಟೀಕಿಸಿದ ರಮೇಶ್ ಜಾರಕಿಹೊಳಿ

ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಹೇಳದೆ ಆ ಯವ್ವ ಏನೇನೋ ಮಾತಾಡ್ತಾರೆ ಎಂದು ಟೀಕಿಸಿದ ರಮೇಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 30, 2024 | 11:43 AM

Share

ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪಿಕ್ ಪಾಕೆಟ್ ಮತ್ತು ಲೂಟಿಕೋರರಿಗೆ ಹೋಲಿಸಿದ ಅವರು ದೇಶ ಮತ್ತು ರಾಜ್ಯ ಸುಸ್ಥಿರವಾಗಿರಬೇಕಾದರೆ, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಮತ್ತು ಅದಕ್ಕಾಗಿ ಕ್ಷೇತ್ರದಿಂದ ಶೆಟ್ಟರ್ ಅವರನ್ನು ಅರಿಸಬೇಕು ಎಂದು ಜಾರಕಿಹೊಳಿ ಜನರಿಗೆ ಮನವಿ ಮಾಡಿದರು.

ಬೆಳಗಾವಿ: ತಮ್ಮದೇ ಆದ ಕಾರಣಗಳಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕಿಳಿಯದ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಇಂದು ತಮ್ಮ ಕ್ಷೇತ್ರದಲ್ಲಿ ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ (Jagadish Shettar) ಪರ ಪ್ರಚಾರ ಮಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪಿಕ್ ಪಾಕೆಟ್ ಮತ್ತು ಲೂಟಿಕೋರರಿಗೆ ಹೋಲಿಸಿದ ಅವರು ದೇಶ ಮತ್ತು ರಾಜ್ಯ ಸುಸ್ಥಿರವಾಗಿರಬೇಕಾದರೆ, ನರೇಂದ್ರ ಮೋದಿಯವರು (Narendra Modi) ಮತ್ತೊಮ್ಮೆ ಪ್ರಧಾನಿಯಾಗಬೇಕು ಮತ್ತು ಅದಕ್ಕಾಗಿ ಕ್ಷೇತ್ರದಿಂದ ಶೆಟ್ಟರ್ ಅವರನ್ನು ಅರಿಸಬೇಕು ಎಂದು ಜಾರಕಿಹೊಳಿ ಜನರಿಗೆ ಮನವಿ ಮಾಡಿದರು. ರಾಜಕಾರಣದಲ್ಲಿ ತಳಮಟ್ಟದಿಂದ ರಾಜ್ಯದ ಮುಖ್ಯಮಂತ್ರಿಯಾಗುವರೆಗೆ ಬೆಳೆದ ಶೆಟ್ಟರ್ ಅತ್ಯಂತ ಸಂಭಾವಿತ ಮತ್ತು ಶಿಸ್ತಿನ ವ್ಯಕ್ತಿ, ಬಿಜೆಪಿ ಇವರ ರಕ್ತದಲ್ಲಿ ಹರಿಯುತ್ತಿದೆ, ಇವರ ತಂದೆ ಜನಸಂಘದ ಕಾರ್ಯಕರ್ತರಾಗಿದ್ದರು ಎಂದು ಜಾರಕಿಹೊಳಿ ಹೇಳಿದರು. ಬಳಿಕ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ತಾಯಿ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಟೀಕಿಸಿದ ಜಾರಕಿಹೊಳಿ, ಅವರ ಹೆಸರನ್ನು ಹೇಳದೆ, ಆ ಯವ್ವ ಏನೇನೋ ಮಾತಾಡುತ್ತಾರೆ, ಅವರ ಮಾತು ಕೇಳಿದರೆ ರಕ್ತ ಕುದಿಯುತ್ತದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವಂಚನೆ ಕೇಸ್: ರಮೇಶ್ ಜಾರಕಿಹೊಳಿಯನ್ನು ಅರೆಸ್ಟ್ ಮಾಡದಂತೆ ಹೈಕೋರ್ಟ್ ಸೂಚನೆ