ಪ್ರಜ್ವಲ್ ರೇವಣ್ಣ ಬಗ್ಗೆ ಬಿಜೆಪಿ ವರಿಷ್ಠರಿಗೆ ಯಾರೂ ಮಾಹಿತಿ ನೀಡಿರಲಿಲ್ಲ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ

ಪ್ರಜ್ವಲ್ ರೇವಣ್ಣ ಬಗ್ಗೆ ಬಿಜೆಪಿ ವರಿಷ್ಠರಿಗೆ ಯಾರೂ ಮಾಹಿತಿ ನೀಡಿರಲಿಲ್ಲ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: May 01, 2024 | 12:39 PM

ಪ್ರಜ್ವಲ್ ಎಸಗಿದ ಅಪರಾಧಗಳ ಬಗ್ಗೆ ಮಾಹಿತಿ ಇದ್ದರೂ ರಾಜ್ಯ ಸರ್ಕಾರ ಎಫ್ ಐ ಆರ್ ದಾಖಲಿಸಲಿಲ್ಲ, ಅವರು ವಿದೇಶಕ್ಕೆ ಹೋಗಕೂಡದೆಂದು ಸರ್ಕಾರ ತಾಕೀತು ಮಾಡಬೇಕಿತ್ತು ಯಾಕೆ ಮಾಡಲಿಲ್ಲ? ಪ್ರಜ್ವಲ್ ಎಸಗಿದ ಅಪರಾಧಗಳಲ್ಲಿ ಶೇಕಡಾ 50ರಷ್ಟು ಹೊಣೆಗಾರಿಕೆ ರಾಜ್ಯ ಸರ್ಕಾರದ್ದಿದೆ ಎಂದು ಜೋಶಿ ಹೇಳಿದರು. ಹೆಚ್ ಡಿ ರೇವಣ್ಣ ಮತ್ತು ಸರ್ಕಾರದ ನಡುವೆ ಅಂಡರ್ ಸ್ಟ್ಯಾಂಡಿಂಗ್ ಕೂಡ ಇರುವ ಸಾಧ್ಯತೆ ಇದೆ ಎಂದು ಜೋಶಿ ಹೇಳಿದರು.

ಹುಬ್ಬಳ್ಳಿ: ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣದ ಬಗ್ಗೆ ಮಾತಾಡುವಾಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಗೊಂದಲಮಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿ ನಾಯಕರು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಮಾತುಕತೆ ನಡೆದಾಗಲೇ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು (local BJP leader) ಪ್ರಜ್ವಲ್ ಬಗ್ಗೆ ನೀಡಿದ ಮಾಹಿತಿಯನ್ನು ಜೋಶಿ ಅಲ್ಲಗಳೆಯುತ್ತಾರೆ ಇಲ್ಲವೇ ಮರೆಮಾಚುತ್ತಾರೆ. ಕೇವಲ ರಾಜ್ಯ ಸರಕಾರವನ್ನು ದೋಷಿ ಸ್ಥಾನದಲ್ಲಿ ನಿಲ್ಲಿಸುವುದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ. ಪ್ರಜ್ವಲ್ ಎಸಗಿದ ಅಪರಾಧಗಳ ಬಗ್ಗೆ ಮಾಹಿತಿ ಇದ್ದರೂ ರಾಜ್ಯ ಸರ್ಕಾರ ಎಫ್ ಐ ಆರ್ ದಾಖಲಿಸಲಿಲ್ಲ, ಅವರು ವಿದೇಶಕ್ಕೆ ಹೋಗಕೂಡದೆಂದು ಸರ್ಕಾರ ತಾಕೀತು ಮಾಡಬೇಕಿತ್ತು ಯಾಕೆ ಮಾಡಲಿಲ್ಲ? ಪ್ರಜ್ವಲ್ ಎಸಗಿದ ಅಪರಾಧಗಳಲ್ಲಿ ಶೇಕಡಾ 50ರಷ್ಟು ಹೊಣೆಗಾರಿಕೆ ರಾಜ್ಯ ಸರ್ಕಾರದ್ದಿದೆ ಎಂದು ಜೋಶಿ ಹೇಳಿದರು.

ಹೆಚ್ ಡಿ ರೇವಣ್ಣ ಮತ್ತು ಸರ್ಕಾರದ ನಡುವೆ ಅಂಡರ್ ಸ್ಟ್ಯಾಂಡಿಂಗ್ ಕೂಡ ಇರುವ ಸಾಧ್ಯತೆ ಇದೆ ಎಂದು ಹೇಳುವ ಅವರು ಜೆಡಿಎಸ್ ಜೊತೆ ಬಿಜೆಪಿ ಸಂಬಂಧ ಇತ್ತೀಚಿನದು; ಅದರೆ ಕಾಂಗ್ರೆಸ್ ಅವರರೊಂದಿಗೆ 2018ರಲ್ಲೇ ದೋಸ್ತಿ ಬೆಳೆಸಿತ್ತು ಎಂದರು. ಜೆಡಿಎಸ್ ಜೊತೆ 2024ರ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡ ಬಳಿಕ ಆ ಪಕ್ಷದ ನಾಯಕ ಬಗ್ಗೆ ಕೇವಲ ಒಳ್ಳೇ ಮಾತಾಡುತ್ತಿದ್ದ ಪ್ರಲ್ಹಾದ್ ಜೋಶಿ ಪ್ರಜ್ವಲ್ ಪ್ರಕರಣದ ಬಳಿಕ ಎಲ್ಲ ತಪ್ಪನ್ನು ಕಾಂಗ್ರೆಸ್ ಮೇಲೆ ವರ್ಗಾಯಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದಿಂಗಾಲೇಶ್ವರ ಸ್ವಾಮೀಜಿ ಮೂಲಕ ಪ್ರಲ್ಹಾದ್ ಜೋಶಿ ವಿರುದ್ಧ ಯಾರು ಹೇಳಿಕೆ ನೀಡಿಸುತ್ತಿದ್ದಾರೆ ಅಂತ ಗೊತ್ತಿದೆ: ಬಸನಗೌಡ ಯತ್ನಾಳ್