ದಿಂಗಾಲೇಶ್ವರ ಸ್ವಾಮೀಜಿ ಮೂಲಕ ಪ್ರಲ್ಹಾದ್ ಜೋಶಿ ವಿರುದ್ಧ ಯಾರು ಹೇಳಿಕೆ ನೀಡಿಸುತ್ತಿದ್ದಾರೆ ಅಂತ ಗೊತ್ತಿದೆ: ಬಸನಗೌಡ ಯತ್ನಾಳ್
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಲ್ಹಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ನೀಡುತ್ತಿರುವ ಕಾಮೆಂಟ್ ಗಳ ಬಗ್ಗೆ ಮಾತಾಡಿದ ಶಾಸಕ, ಅವರ ಮೂಲಕ ಯಾರು ಜೋಶಿ ಅವರ ವಿರುದ್ಧ ಹೇಳಿಕೆಗಳನ್ನು ನೀಡಿಸುತ್ತಿದ್ಧಾರೆ ಅಂತ ಚೆನ್ನಾಗಿ ಗೊತ್ತಿದೆ, ಆದರೆ ದೇಶದ ಜನರಿಗೆ ನರೇಂದ್ರ ಮೋದಿಯವರು ಪುನಃ ಪ್ರಧಾನ ಮಂತ್ರಿ ಅಗುವುದು ಬೇಕಿದೆ, ಹಾಗಾಗಿ ಯಾರೇನೇ ಅಪಪ್ರಚಾರ ಮಾಡಿದರೂ ಜೋಶಿ ಗೆಲ್ಲುತ್ತಾರೆ ಎಂದರು.
ವಿಜಯಪುರ: ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ಇಂದು ಯುಗಾದಿ ಹಬ್ಬದ (Ugadi festival) ಪ್ರಯುಕ್ತ ನಗರದ ಶಿವಯೋಗಿ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ತೆರಳಿ ಸಮಸ್ತ ನಾಡಿನಲ್ಲಿ ಸುಖಶಾಂತಿ ಸಮೃದ್ಧಿ ನೆಲಸಲಿ, ಸಕಾಲಕ್ಕೆ ಮಳೆಬೆಳೆಯಾಗಲಿ ಮತ್ತು ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಲು ಮತ್ತು ವಿಶ್ವದ ಶ್ರೇಷ್ಠ ರಾಷ್ಟ್ರವಾಗಿ ಮಾಡಲು ಶಕ್ತನಾಗಿರುವ ಏಕಮಾತ್ರ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಪುನಃ ಅದೇ ಸ್ಥಾನದಲ್ಲಿ ಮುಂದುವರಿದು ದೇಶದ ಚುಕ್ಕಾಣಿ ಹಿಡಿಯುವಂತಾಗಲೀ ಎಂದು ಹೋಮ ಹವನ ಮತ್ತು ಎಲ್ಲ ಬಗೆಯ ಪೂಜೆಗಳನ್ನು ಮಾಡಿರುವುದಾಗಿ ಹೇಳಿದರು. ಭಾರತೀಯ ಸಂಸ್ಕೃತಿಯ ಪ್ರಕಾರ ಯುಗಾದಿಯಂದು ಹೊಸ ವರ್ಷ ಅರಂಭವಾಗುತ್ತದೆ, ಈ ಶುಭ ಸಂದರ್ಭದಲ್ಲಿ ನಾಡಿನ ಜನತೆಗೆ ಶುಭವಾಗಲಿ ಎಂದು ಅವರು ಹೇಳಿದರು. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಲ್ಹಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ನೀಡುತ್ತಿರುವ ಕಾಮೆಂಟ್ ಗಳ ಬಗ್ಗೆ ಮಾತಾಡಿದ ಶಾಸಕ, ಅವರ ಮೂಲಕ ಯಾರು ಜೋಶಿ ಅವರ ವಿರುದ್ಧ ಹೇಳಿಕೆಗಳನ್ನು ನೀಡಿಸುತ್ತಿದ್ಧಾರೆ ಅಂತ ಚೆನ್ನಾಗಿ ಗೊತ್ತಿದೆ, ಆದರೆ ದೇಶದ ಜನರಿಗೆ ನರೇಂದ್ರ ಮೋದಿಯವರು ಪುನಃ ಪ್ರಧಾನ ಮಂತ್ರಿ ಅಗುವುದು ಬೇಕಿದೆ, ಹಾಗಾಗಿ ಯಾರೇನೇ ಅಪಪ್ರಚಾರ ಮಾಡಿದರೂ ಜೋಶಿ ಗೆಲ್ಲುತ್ತಾರೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಪ್ಪಾಜಿ ಅಪ್ಪಾಜಿ ಅನ್ನುತ್ತಾ ಕಾಲಿಗೆ ಬಿದ್ದರೆ ಅದನ್ನೇ ‘ಅಪ್ಪಾಜಿ’ ದೌರ್ಬಲ್ಯ ಅಂತ ಭಾವಿಸುತ್ತಾರೆ: ಬಸನಗೌಡ ಪಾಟೀಲ್ ಯತ್ನಾಳ್