ಅಪ್ಪಾಜಿ ಅಪ್ಪಾಜಿ ಅನ್ನುತ್ತಾ ಕಾಲಿಗೆ ಬಿದ್ದರೆ ಅದನ್ನೇ ‘ಅಪ್ಪಾಜಿ’ ದೌರ್ಬಲ್ಯ ಅಂತ ಭಾವಿಸುತ್ತಾರೆ: ಬಸನಗೌಡ ಪಾಟೀಲ್ ಯತ್ನಾಳ್
ಹುಟ್ಟಿಸಿದವ ಮಾತ್ರ ನಮಗೆ ಅಪ್ಪಾಜಿ ಆಗುತ್ತಾನೆ, ಬೇರೆಯವರೆಲ್ಲ ಯಾಕಾಗುತ್ತಾರೆ ಎಂದ ಯತ್ನಾಳ್, ತಾನು ಎಲ್ ಕೆ ಅಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಿಟ್ಟರೆ ಬೇರೆ ಯಾರ ಕಾಲಿಗೆ ಬಿದ್ದಿಲ್ಲ ಅಂತ ಹೇಳಿದರು. ಒಂದಷ್ಟು ಜನರನ್ನು ಬೆನ್ನಿಗೆ ಕಟ್ಟಿಕೊಂಡು ತಾನು ಸಮಾಜದ ಉದ್ಧಾರಕ ಎಂದು ಹೇಳುವವ ನಾಯಕ ಅನಿಸಿಕೊಳ್ಳಲಾರ, ಲಿಂಗಾಯತರಲ್ಲಿ ಯಾವುದೇ ಉಪಜಾತಿಗಳಿಲ್ಲ, ಲಿಂಗಾಯತರೆಲ್ಲ ಒಂದೇ ಎಂದು ಅವರು ಹೇಳಿದರು.
ಕಲಬುರಗಿ: ಬಸವರಾಜ ಬೊಮ್ಮಾಯಿ ಸರಕಾರದಲ್ಲಿ (Basavaraj Bommai) ತಾನು ಮಂತ್ರಿ ಸ್ಥಾನದಿಂದ ವಂಚಿತನಾಗಿದ್ದಕ್ಕೆ ನಿಕಟ ಪೂರ್ವ ಮುಖ್ಯಮಂತ್ರಿಯೇ ಕಾರಣವೆಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿ (Basangouda Patil Yatnal), ಬಿಎಸ್ ಯಡಿಯೂರಪ್ಪ (BS Yediyurappa) ಮತ್ತವರ ಕುಟುಂಬದ ವಿರುದ್ಧ ತಮಗಿರುವ ಕೋಪ-ತಾಪ ಅಸಮಾಧಾನವನ್ನು ಮತ್ತೊಮ್ಮೆ ಹೊರಹಾಕಿದರು. ಕಲಬುರಗಿಯಲ್ಲಿ ನಿನ್ನೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಯತ್ನಾಳ್ ಅವರಿಗೆ ಮಾತಾಡುವಾಗ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸದಿದ್ದರೆ ಸಮಾಧಾನವಿರಲ್ಲ. ಯಡಿಯೂರಪ್ಪ ಕಂಡಾಗಲೆಲ್ಲ ಎಲ್ಲರೂ ಅಪ್ಪಾಜಿ ಅಪ್ಪಾಜಿ ಎನ್ನುತ್ತಾ ಅವರನ್ನು ಸುತ್ತುವರಿಯುವುದು, ಪಾದಗಳಿಗೆ ನಮಸ್ಕರಿಸುವುದನ್ನು ಮಾಡುತ್ತಿರುತ್ತಾರೆ. ಹುಟ್ಟಿಸಿದವ ಮಾತ್ರ ನಮಗೆ ಅಪ್ಪಾಜಿ ಆಗುತ್ತಾನೆ, ಬೇರೆಯವರೆಲ್ಲ ಯಾಕಾಗುತ್ತಾರೆ ಎಂದ ಯತ್ನಾಳ್, ತಾನು ಎಲ್ ಕೆ ಅಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಿಟ್ಟರೆ ಬೇರೆ ಯಾರ ಕಾಲಿಗೆ ಬಿದ್ದಿಲ್ಲ ಅಂತ ಹೇಳಿದರು. ಒಂದಷ್ಟು ಜನರನ್ನು ಬೆನ್ನಿಗೆ ಕಟ್ಟಿಕೊಂಡು ತಾನು ಸಮಾಜದ ಉದ್ಧಾರಕ ಎಂದು ಹೇಳುವವ ನಾಯಕ ಅನಿಸಿಕೊಳ್ಳಲಾರ, ಲಿಂಗಾಯತರಲ್ಲಿ ಯಾವುದೇ ಉಪಜಾತಿಗಳಿಲ್ಲ, ಲಿಂಗಾಯತರೆಲ್ಲ ಒಂದೇ, ರಾಜ್ಯದಲ್ಲಿ ಎಲ್ಲ ಲಿಂಗಾಯತರ ಜನಸಂಖ್ಯೆ ಒಂದೂವರೆ ಕೋಟಿ ಮೀರುತ್ತದೆ ಎಂದು ಯತ್ನಾಳ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಸವರಾಜ ಬೊಮ್ಮಾಯಿಯನ್ನು ಸೋಲಿಸಲು ಹಣ ಕಳುಹಿಸಿದ್ದ ವಿಜಯೇಂದ್ರ: ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ