ವಾರಾಣಸಿ: ಕಾಲಭೈರವನ ಸನ್ನಿಧಿಯಲ್ಲಿ ಮಹಿಳೆ ಕೇಕ್ ಕತ್ತರಿಸಿದ್ದ ಪ್ರಕರಣ, ದೇವಾಲಯದಿಂದ ಮಹತ್ವದ ನಿರ್ಧಾರ

|

Updated on: Dec 02, 2024 | 10:03 AM

ವಾರಾಣಸಿಯಲ್ಲಿರುವ ಕಾಶಿಯ ಕೊತ್ವಾಲ್ ಎಂದು ಕರೆಯಲ್ಪಡುವ ಬಾಬಾ ಕಾಲ ಭೈರವನ ದೇವಾಲಯಕ್ಕೆ ಸಂಬಂಧಿಸಿದಂತೆ ಹೊಸ ವಿವಾದ ಹುಟ್ಟಿಕೊಂಡಿದೆ. ಈ ಕಾರಣದಿಂದಾಗಿ, ದೇವಾಲಯದ ಆಡಳಿತ ಮಂಡಳಿಯು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಮತ್ತು ಕಾಲಭೈರವ ದೇವಾಲಯದಲ್ಲಿ ಕೇಕ್ ಕತ್ತರಿಸುವುದನ್ನು ನಿಷೇಧಿಸಿದೆ.

ವಾರಾಣಸಿ: ಕಾಲಭೈರವನ ಸನ್ನಿಧಿಯಲ್ಲಿ ಮಹಿಳೆ ಕೇಕ್ ಕತ್ತರಿಸಿದ್ದ ಪ್ರಕರಣ, ದೇವಾಲಯದಿಂದ ಮಹತ್ವದ ನಿರ್ಧಾರ
ಕೇಕ್
Follow us on

ವಾರಾಣಸಿಯಲ್ಲಿರುವ ಕಾಶಿಯ ಕೊತ್ವಾಲ್ ಎಂದು ಕರೆಯಲ್ಪಡುವ ಬಾಬಾ ಕಾಲ ಭೈರವನ ದೇವಾಲಯಕ್ಕೆ ಸಂಬಂಧಿಸಿದಂತೆ ಹೊಸ ವಿವಾದ ಹುಟ್ಟಿಕೊಂಡಿದೆ. ಈ ಕಾರಣದಿಂದಾಗಿ, ದೇವಾಲಯದ ಆಡಳಿತ ಮಂಡಳಿಯು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಮತ್ತು ಕಾಲಭೈರವ ದೇವಾಲಯದಲ್ಲಿ ಕೇಕ್ ಕತ್ತರಿಸುವುದನ್ನು ನಿಷೇಧಿಸಿದೆ. ಇಷ್ಟೇ ಅಲ್ಲ, ಈಗ ದೇವಸ್ಥಾನದ ಗರ್ಭಗುಡಿಯಲ್ಲಿ ಛಾಯಾಚಿತ್ರವಾಗಲೀ, ವಿಡಿಯೋಗ್ರಫಿಯಾಗಲೀ, ರೀಲ್ಸ್​ಗಳನ್ನಾಗಲೀ ಮಾಡುವಂತಿಲ್ಲ. ದೇವಾಲಯದ ಆಡಳಿತ ಮಂಡಳಿಯ ಈ ನಿರ್ಧಾರವನ್ನು ಕಾಶಿ ವಿದ್ವತ್ ಪರಿಷತ್ತು ಸ್ವಾಗತಿಸಿದೆ.

ಇತ್ತೀಚೆಗೆ ಮಹಿಳಾ ಇನ್​ಫ್ಲುಯೆನ್ಸರ್​ ಒಬ್ಬರು ಕಾಲ ಭೈರವ ದೇಗುಲದ ಗರ್ಭಗುಡಿಯಲ್ಲಿ ಕೇಕ್ ಕಟ್ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ. ಅದರ ನಂತರ ದೇವಾಲಯದ ಅರ್ಚಕರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಉತ್ತೇಜಿಸುತ್ತಿದ್ದಾರೆ ಮತ್ತು ಸನಾತನ ಸಂಪ್ರದಾಯವನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿದರು.

ದೇವಾಲಯದ ಆವರಣದಲ್ಲಿ ಯಾವಾಗಲೂ ಕೇಕ್ ಕತ್ತರಿಸಲಾಗುತ್ತದೆ ಎಂದು ಕಾಲಭೈರವ ದೇವಾಲಯದ ಮಹಂತ್ ಕುಟುಂಬದ ಸದಸ್ಯರು ಹೇಳಿದ್ದಾರೆ. ಕಳೆದ ಶನಿವಾರ, ಭೈರವ ಅಷ್ಟಮಿ ಹಬ್ಬವನ್ನು ಆಚರಿಸಲಾಯಿತು ಮತ್ತು ಈ ಹಬ್ಬದಂದು ಕೇಕ್ ಕತ್ತರಿಸಲಾಯಿತು. ಈ ಆಚರಣೆಯ ನಂತರ, ಒಬ್ಬ ಮಹಿಳಾ ರೂಪದರ್ಶಿ ಬಂದು ಬಾಬಾ ಕಾಲ ಭೈರವನಿಗೆ ಕೇಕ್ ಅರ್ಪಿಸಲು ವಿನಂತಿಸಿದ್ದಳು. ಬಳಿಕ ಅವರ ಮೇಲಿನ ಗೌರವಾರ್ಥವಾಗಿ ಗರ್ಭಗುಡಿಯಲ್ಲಿ ಕೇಕ್ ಕತ್ತರಿಸಲು ಅವಕಾಶ ನೀಡಲಾಯಿತು ಎಂದಿದ್ದಾರೆ.

ಮತ್ತಷ್ಟು ಓದಿ: ತಿರುಪತಿ ದೇವಸ್ಥಾನದ ಹುಂಡಿಯಿಂದ ಹಣ ಕದ್ದ ಭಕ್ತ; ಆಮೇಲೇನಾಯ್ತು?

ಆದರೆ ಆಕೆ ರೀಲ್ಸ್​ ಮಾಡುತ್ತಿರುವ ಬಗ್ಗೆ ತಮಗೆ ತಿಳಿದಿರಲಿಲ್ಲ, ಅಂದು ಆಕೆ ಹುಟ್ಟುಹಬ್ಬ ಕೂಡ, ವಿಡಿಯೋ ವೈರಲ್ ಆದಾಗ ದೇವಸ್ಥಾನದಲ್ಲಿ ಹಣ ತೆಗೆದುಕೊಂಡು ಇವೆಲ್ಲಕ್ಕೂ ಅವಕಾಶ ನೀಡುತ್ತಾರೆ ಎಂದು ಕೆಲವರು ಆರೋಪಿಸಿದ್ದಾರೆ.

ದೇವಾಲಯದ ಆಡಳಿತವು ಇನ್ನುಮುಂದೆ ಕಾಲಭೈರವ ದೇವಾಲಯದಲ್ಲಿ ಕೇಕ್ ಕತ್ತರಿಸಲು ಅವಕಾಶ ನೀಡದಂತೆ ಸಾಮೂಹಿಕ ನಿರ್ಧಾರ ತೆಗೆದುಕೊಂಡಿದೆ. ಇದೇ ವೇಳೆ ಮುಂದಿನ ದಿನಗಳಲ್ಲಿ ಇಡೀ ದೇವಸ್ಥಾನದ ಆವರಣದಲ್ಲಿ ಛಾಯಾಗ್ರಹಣಕ್ಕೆ ನಿಷೇಧ ಹೇರಲಾಗುತ್ತಿದ್ದು, ಗರ್ಭಗುಡಿಯಲ್ಲಿ ಈ ನಿರ್ಬಂಧ ಹೇರಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ