ತಿರುಪತಿ ದೇವಸ್ಥಾನದ ಹುಂಡಿಯಿಂದ ಹಣ ಕದ್ದ ಭಕ್ತ; ಆಮೇಲೇನಾಯ್ತು?

ತಿರುಮಲ ತಿರುಪತಿಯಲ್ಲಿ ಭಕ್ತನಾಗಿ ಬಂದ ವ್ಯಕ್ತಿಯೊಬ್ಬ ಕಾಣಿಕೆ ಹುಂಡಿಯಿಂದ ಹಣ ಕದ್ದಿರುವ ಘಟನೆ ನಡೆದಿದೆ. ಕಲಿಯುಗ ವೆಂಕಟೇಶ್ವರ ಸ್ವಾಮಿಯ ಪುಣ್ಯಕ್ಷೇತ್ರವಾಗಿರುವ ತಿರುಮಲ ತಿರುಪತಿ ಕ್ಷೇತ್ರಕ್ಕೆ ದಿನವೂ ಲಕ್ಷಾಂತರ ಭಕ್ತರು ಬರುತ್ತಾರೆ. ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ವಿದೇಶದಿಂದಲೂ ಬರುತ್ತಾರೆ. ಅಲ್ಲಿ ಈ ರೀತಿಯ ಕಳ್ಳತನ ನಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ತಿರುಪತಿ ದೇವಸ್ಥಾನದ ಹುಂಡಿಯಿಂದ ಹಣ ಕದ್ದ ಭಕ್ತ; ಆಮೇಲೇನಾಯ್ತು?
ತಿರುಪತಿ ದೇವಸ್ಥಾನ
Follow us
ಸುಷ್ಮಾ ಚಕ್ರೆ
|

Updated on:Nov 27, 2024 | 3:04 PM

ತಿರುಮಲ: ವೆಂಕಟೇಶ್ವರ ಸ್ವಾಮಿಯ ಪುಣ್ಯಕ್ಷೇತ್ರವಾಗಿರುವ ತಿರುಮಲ ತಿರುಪತಿ ಕ್ಷೇತ್ರ ಬಹಳ ಪ್ರಸಿದ್ಧವಾದ ಹಿಂದೂ ದೇವಾಲಯವಾಗಿದೆ. ಭಾರತದ ಶ್ರೀಮಂತ ದೇವಸ್ಥಾನವಾಗಿರುವ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ನಿತ್ಯ ಲಕ್ಷಾಂತರ ಭಕ್ತರು ವಿದೇಶದಿಂದಲೂ ಬರುತ್ತಾರೆ. ಭಕ್ತರಿಗೆ ಅನುಕೂಲವಾಗಲೆಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಕಾಲಕಾಲಕ್ಕೆ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಇರುತ್ತದೆ. ಇಂತಹ ತಿರುಮಲ ಕ್ಷೇತ್ರದಲ್ಲಿ ಭಕ್ತರೊಬ್ಬರು ಕಾಣಿಕೆ ಹುಂಡಿಗೆ ಕನ್ನ ಹಾಕಿದ್ದಾರೆ. ಈ ಘಟನೆ ಚರ್ಚೆಗೆ ಗ್ರಾಸವಾಗಿದೆ.

ತಿರುಮಲ ದೇವರ ದರ್ಶನಕ್ಕೆ ಬಂದ ತಮಿಳುನಾಡಿನ ಭಕ್ತನೊಬ್ಬ ಕಳ್ಳತನ ಮಾಡಿದ್ದಾನೆ. ದೇವರ ಹುಂಡಿಯಲ್ಲಿದ್ದ ಹಣವನ್ನು ಆತ ಕಳ್ಳತನ ಮಾಡಿದ್ದಾನೆ. ಸಿಸಿ ಕ್ಯಾಮರಾ ಮೇಲೆ ನಿಗಾ ಇಟ್ಟಿದ್ದ ಆಡಳಿತ ಸಿಬ್ಬಂದಿಯಾದ ಜ್ಞಾನೇಂದ್ರ ಎಂಬುವವರು ಇದನ್ನು ಪತ್ತೆ ಹಚ್ಚಿ ವಿಜಿಲೆನ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಭಕ್ತನ ಸೋಗಿನಲ್ಲಿ ಬಂದಿದ್ದ ಕಳ್ಳನ ಪ್ರಕರಣ ಬಯಲಾಗಿದೆ. ಹುಂಡಿ ಕಳ್ಳತನ ಮಾಡಿದ ಭಕ್ತನನ್ನು ಹಿಡಿದು ಆತನಿಂದ 15 ಸಾವಿರ ರೂ. ವಸೂಲಿ ಮಾಡಲಾಗಿದೆ.

ಇದನ್ನೂ ಓದಿ: ತಿರುಪತಿ ದೇವಸ್ಥಾನದ ಆಡಳಿತದಿಂದ ಹಿಂದೂಯೇತರರು ಹೊರಕ್ಕೆ: ಟಿಟಿಡಿ ನಿರ್ಧಾರ

ಆತನನ್ನು ತಮಿಳುನಾಡು ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದ್ದು. ನಂತರ ವಿಜಿಲೆನ್ಸ್ ಅಧಿಕಾರಿಗಳು ತಿರುಮಲ ಒನ್ ಟೌನ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಇದೇ ತಿಂಗಳ 23ರಂದು ಮಧ್ಯಾಹ್ನ 2 ಗಂಟೆಗೆ ಘಟನೆ ನಡೆದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ದೇವಸ್ಥಾನದಲ್ಲಿದ್ದ ಕಬ್ಬಿಣದ ಹುಂಡಿಯಲ್ಲಿದ್ದ ಹಣವನ್ನು ತಮಿಳುನಾಡಿನ ವೇಣುಲಿಂಗ ಎಂಬಾತ ಕದ್ದು ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಭದ್ರತಾ ಸಿಬ್ಬಂದಿ ಈ ಕಳ್ಳತನವನ್ನು ಗುರುತಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:56 pm, Wed, 27 November 24