ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯ ವಿಷಯಗಳನ್ನು ತಡೆಯಲು ಕಠಿಣ ಕಾನೂನು ಅಗತ್ಯ: ಸಚಿವ ಅಶ್ವಿನಿ ವೈಷ್ಣವ್
ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯ ವಿಷಯಗಳನ್ನು ಹಂಚುವವರಿಗೆ ಸಚಿವ ಅಶ್ವಿನಿ ವೈಷ್ಣವ್ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಕಠಿಣ ಕ್ರಮದ ಅಗತ್ಯ ಇದೆ. ಇದನ್ನು ತಕ್ಷಣ ನಾವು ಜಾರಿಗೆ ತರುತ್ತೇವೆ. . ಸಂಸತ್ತಿನಲ್ಲಿ ಇಂದು ಗದ್ದಲ ನಡುವೆಯೂ ಈ ವಿಚಾರವನ್ನು ಅಶ್ವಿನಿ ವೈಷ್ಣವ್ ಪ್ರಸ್ತಾಪಿಸಿದ್ದಾರೆ.
ದೆಹಲಿ, ನ.27: ಸಂಸತ್ತು ಚಳಿಗಾಲ ಅಧಿವೇಶನ ಮಂಗಳವಾರದಿಂದ ಪ್ರಾರಂಭವಾಗಿದೆ. ಅನೇಕ ವಿಚಾರಗಳನ್ನು ಮಂಡಿಸಲು ಹಾಗೂ ಮಸೂದೆಯನ್ನು ಅನುಮೋದಿಸಲು ಸರ್ಕಾರ ಸಿದ್ಧವಾಗಿದೆ. ಇಂದು (ನ.27) ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತ ಮತ್ತು ಸಾಮಾಜಿಕ ವಿಚಾರಗಳ ಬಗ್ಗೆ ಅಶ್ಲೀಲ ಹಾಗೂ ವಿವಾದತ್ಮಕ ವಿಚಾರಗಳನ್ನು ಹರಡುವುದನ್ನು ತಪ್ಪಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಸಂಸತ್ತಿನಲ್ಲಿ ಇಂದು ಗದ್ದಲ ನಡುವೆಯೂ ಈ ವಿಚಾರವನ್ನು ಅಶ್ವಿನಿ ವೈಷ್ಣವ್ ಪ್ರಸ್ತಾಪಿಸಿದ್ದಾರೆ.
ಈ ಇದರ ಜತೆಗೆ ಸಂಸದೀಯ ಸ್ಥಾಯಿ ಸಮಿತಿಯು ಸಮಸ್ಯೆಯನ್ನು ಕೈಗೆತ್ತಿಕೊಳ್ಳಬೇಕು ಮತ್ತು ಈ ನಿಟ್ಟಿನಲ್ಲಿ ಹೆಚ್ಚು ಕಠಿಣ ಕಾನೂನುಗಳನ್ನು ರೂಪಿಸಲು ಸಹಾಯ ಮಾಡಬೇಕು ಎಂದು ಹೇಳಿದರು. ಹಿಂದೆ, ಸಂಪಾದಕೀಯ ಪರಿಶೀಲನೆಗಳು ಇದ್ದವು, ಅಲ್ಲಿ ಏನಾದರೂ ಸರಿ ಅಥವಾ ತಪ್ಪಾಗಿದೆಯೇ ಎಂಬುದನ್ನು ಚರ್ಚಿಸಲಾಗುತ್ತಿತ್ತು. ಆದರೆ ಇದೀಗ ಆ ಕ್ರಮ ಇಲ್ಲ, ಇಂದು ಸಾಮಾಜಿಕ ಮಾಧ್ಯಮಗಳ ದರ್ಬಾರ್ ಶುರುವಾಗಿದೆ. ಹಾಗೂ ಇಂದು ಹಲವು ವಿಚಾರಗಳು ಸಾಮಾಜಿಕ ಮಾಧ್ಯಮಗಳು ಪತ್ರಿಕಾ ಸ್ವಾತಂತ್ರ್ಯಕ್ಕೆ ವೇದಿಕೆಯಾಗಿದೆ. ಈ ಕಾರಣದಿಂದ ಸಾಮಾಜಿಕ ಮಾಧ್ಯಮದ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಈ ವೇದಿಕೆಯ ಮೂಲಕ ಅಶ್ಲೀಲ ವಿಚಾರಗಳನ್ನು ಹರಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚಂದಾದಾರಿಕೆ ಯೋಜನೆಗೆ ಕೇಂದ್ರ ಅನುಮೋದನೆ, ವಿದ್ಯಾರ್ಥಿಗಳಿಗೇನು ಪ್ರಯೋಜನ?
ವಿಡಿಯೋ ಇಲ್ಲಿದೆ ನೋಡಿ:
#WATCH | On the laws to check vulgar content on social media, Union I&B Minister Ashwini Vaishnaw says “This topic is indeed very important. Today, the way editorial content used to be, the editorial check used to be done, whether something is right or wrong, a complete decision… pic.twitter.com/UgB2Yj1kKZ
— ANI (@ANI) November 27, 2024
ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ವಿಚಾರಗಳನ್ನು ಹರಡುವುದನ್ನು ತಡೆಯಲು ಕಾನೂನುಗಳನ್ನು ತರಲಾಗಿದೆ. ಅದನ್ನು ಮತ್ತಷ್ಟು ಕಠಿಣ ಮಾಡಬೇಕಿದೆ ಎಂದು ಹೇಳಿದರು. ಅಕ್ರಮವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಅಸಭ್ಯ ಮತ್ತು ಲೈಂಗಿಕ ವಿಷಯಗಳ ಪ್ರಸಾರವನ್ನು ಪರಿಶೀಲಿಸಲು ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳ ಬಗ್ಗೆ ಬಿಜೆಪಿ ಸದಸ್ಯ ಅರುಣ್ ಗೋವಿಲ್ ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಕಾನೂನುಗಳನ್ನು ಗಮನದಲ್ಲಿಟ್ಟುಕೊಂಡು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸಲು ಸರ್ಕಾರವು ಪ್ರಸ್ತಾಪಿಸುತ್ತದೆ ಎಂದು ಹೇಳಿದರು. ಈ ವೇಳೆ ವಿರೋಧ ಪಕ್ಷಗಳು ಗದ್ದಲವನ್ನು ಸೃಷ್ಟಿಸಿದ ಕಾರಣ ಅಧಿವೇಶವನ್ನು ಮುಂದೂಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ