ದೆಹಲಿ: ಭಾರತದ ಇತ್ತೀಚಿನ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ (INS Vikrant) ತನ್ನ ಫ್ಲೈಟ್ ಡೆಕ್‌ನಲ್ಲಿ ಫಿಕ್ಸ್ಡ್ ವಿಂಗ್ ವಿಮಾನವನ್ನು ಮೊದಲ ಬಾರಿಗೆ ಇಳಿಸುವುದರೊಂದಿಗೆ ಮೈಲಿಗಲ್ಲನ್ನು ದಾಟಿದೆ. ಭಾರತದ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ (LCA) ತೇಜಸ್‌ನ ನೌಕಾ ಆವೃತ್ತಿಯು ಸಮುದ್ರ ಪ್ರಯೋಗಗಳ ಭಾಗವಾಗಿ ಐಎನ್‌ಎಸ್ ವಿಕ್ರಾಂತ್‌ನಲ್ಲಿ ಯಶಸ್ವಿಯಾಗಿ ಇಳಿಯಿತು. ನೌಕಾ ಪೈಲಟ್‌ಗಳು ಐಎನ್‌ಎಸ್ ವಿಕ್ರಾಂತ್ ಹಡಗಿನಲ್ಲಿ ಎಲ್‌ಸಿಎ (ನೌಕಾಪಡೆ) ಇಳಿಯುತ್ತಿದ್ದಂತೆ ಭಾರತೀಯ ನೌಕಾಪಡೆಯು, ಆತ್ಮ ನಿರ್ಭರ್ ಭಾರತ್ (ಸ್ವಾವಲಂಬಿ ಭಾರತ) (Aatma Nirbhar Bharat) ಕಡೆಗೆ ಸಾಧಿಸಿದ ಐತಿಹಾಸಿಕ ಮೈಲಿಗಲ್ಲು. ಇದು ಸ್ವದೇಶಿ ಫೈಟರ್ ಏರ್‌ಕ್ರಾಫ್ಟ್‌ನೊಂದಿಗೆ ಸ್ವದೇಶಿ ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು, ನಿರ್ಮಿಸಲು ಮತ್ತು ನಿರ್ವಹಿಸಲು ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.
₹ 20,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 45,000 ಟನ್ ತೂಕದ ಐಎನ್‌ಎಸ್ ವಿಕ್ರಾಂತ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾರ್ಯಾರಂಭ ಮಾಡಿತ್ತು. 262 ಮೀಟರ್ ಉದ್ದ ಮತ್ತು 62 ಮೀಟರ್ ಅಗಲದ ಐಎನ್‌ಎಸ್ ವಿಕ್ರಾಂತ್ ಭಾರತದಲ್ಲಿ ನಿರ್ಮಿಸಲಾದ ಅತಿದೊಡ್ಡ ಯುದ್ಧ ನೌಕೆಯಾಗಿದೆ.
Historical milestone achieved towards #AatmaNirbharBharat by #IndianNavy as Naval Pilots carry out landing of LCA(Navy) on @IN_R11Vikrant. Demonstrates #India’s capability to design, develop, construct & operate #IndigenousAircraftCarrier with indigenous Fighter Aircraft. pic.twitter.com/3HuwuGrZtx
— SpokespersonNavy (@indiannavy) February 6, 2023
ಇದು MiG-29K ಫೈಟರ್ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳು ಸೇರಿದಂತೆ 30 ವಿಮಾನಗಳನ್ನು ಸಾಗಿಸಬಲ್ಲದು. ಯುದ್ಧನೌಕೆಯು ಸುಮಾರು 1,600 ಸಿಬ್ಬಂದಿಗೆ ಅವಕಾಶ ಕಲ್ಪಿಸುತ್ತದೆ.
ಇದನ್ನೂ ಓದಿ: ಮೋದಿಗೆ ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಲ್ಪಟ್ಟ ಹಾಫ್ ಕೋಟ್ ಉಡುಗೊರೆಯಾಗಿ ನೀಡಿದ ಇಂಡಿಯನ್ ಆಯಿಲ್ ಕಂಪನಿ
ಬಾಂಗ್ಲಾದೇಶದ ವಿಮೋಚನೆಗಾಗಿ ಪಾಕಿಸ್ತಾನದ ವಿರುದ್ಧ 1971 ರ ಯುದ್ಧದ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿದ ಯುದ್ಧ ವಿಮಾನದ ಹೆಸರನ್ನೇ INS ವಿಕ್ರಾಂತ್ ಗೆ ಇಡಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ