AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day: ಪ್ರೇಮಿಗಳ ದಿನದಂದು ನೊಯ್ಡಾದಲ್ಲಿ ನಿಷೇಧಾಜ್ಞೆ ಜಾರಿ; ಕಾರಣ ಇಲ್ಲಿದೆ

ನೊಯ್ಡಾದಲ್ಲಿ ಫೆಬ್ರವರಿ ಅಂತ್ಯದವರೆಗೆ ಧಾರ್ಮಿಕ ಸ್ಥಳಗಳು ಮತ್ತು ಕ್ಲಬ್‌ಗಳಲ್ಲಿ ಧ್ವನಿವರ್ಧಕಗಳು, ಡಿಜೆಗಳನ್ನು ಪ್ಲೇ ಮಾಡಲು ಅನುಮತಿ ನೀಡಲಾಗುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ಸಹ ನಿಷೇಧಿಸಲಾಗಿದೆ.

Valentine’s Day: ಪ್ರೇಮಿಗಳ ದಿನದಂದು ನೊಯ್ಡಾದಲ್ಲಿ ನಿಷೇಧಾಜ್ಞೆ ಜಾರಿ; ಕಾರಣ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on: Feb 06, 2023 | 7:04 PM

Share

ನೊಯ್ಡಾ: ಉತ್ತರ ಪ್ರದೇಶದ ನೊಯ್ಡಾ (Noida) ಜಿಲ್ಲೆಯಲ್ಲಿ ಫೆ. 14ರ ಪ್ರೇಮಿಗಳ ದಿನಾಚರಣೆಯಂದು (Valentine’s Day) ಗೌತಮ್ ಬುದ್ಧ ನಗರದ ಪೊಲೀಸರು ಸಿಆರ್‌ಪಿಸಿಯ ಸೆಕ್ಷನ್ 144ರ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸಿದ್ದಾರೆ. ಪ್ರೇಮಿಗಳ ದಿನ ಸೇರಿದಂತೆ ಮುಂಬರುವ ಹಲವಾರು ಹಬ್ಬಗಳ ದೃಷ್ಟಿಯಿಂದ ವಿಧಿಸಲಾಗಿರುವ ನಿರ್ಬಂಧಗಳು ಫೆಬ್ರವರಿ 28ರವರೆಗೆ ಜಾರಿಯಲ್ಲಿರುತ್ತವೆ.

ಮುಂಬರುವ ಹಬ್ಬಗಳು ಅಥವಾ ಕೊವಿಡ್-19 ಪ್ರೋಟೋಕಾಲ್ ದೃಷ್ಟಿಯಿಂದ ಹಾಗೂ ಭದ್ರತೆಯ ಕಾರಣದಿಂದ ಸೆಕ್ಷನ್-144 CrPC ಅಡಿಯಲ್ಲಿ ನೊಯ್ಡಾ ಜಿಲ್ಲೆಯಲ್ಲಿ ನಿಷೇಧಿತ ಆದೇಶಗಳು ಫೆ. 28ರವರೆಗೆ ಅನ್ವಯವಾಗಲಿದೆ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಸೆಕ್ಷನ್-188 IPC ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೌತಮ್ ಬುದ್ಧ ನಗರ ಪೊಲೀಸರು ಘೋಷಿಸಿದ್ದಾರೆ.

ಇದನ್ನೂ ಓದಿ: Love Story: ಪ್ರೀತಿ ಬ್ರೇಕ್​ಅಪ್ ಆಗಿ 43 ವರ್ಷಗಳ ಬಳಿಕ ಮದುವೆಯಾದ ಪ್ರೇಮಿಗಳು: ಎಂಥಾ ಪವಿತ್ರ ಪ್ರೀತಿ ಎಂದ ಜನರು

ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಅನಿಲ್ ಕುಮಾರ್ ಯಾದವ್ ಹೊರಡಿಸಿದ ನಿಷೇಧಾಜ್ಞೆಯಲ್ಲಿ ಫೆಬ್ರವರಿ 14ರಂದು ಪ್ರೇಮಿಗಳ ದಿನ ಮತ್ತು ಫೆಬ್ರವರಿ 18ರಂದು ಮಹಾಶಿವರಾತ್ರಿ ಸೇರಿದಂತೆ ಫೆಬ್ರವರಿಯಲ್ಲಿ ಹಲವಾರು ಹಬ್ಬದ ದಿನಗಳನ್ನು ಉಲ್ಲೇಖಿಸಲಾಗಿದೆ.

ಈ ಸಂದರ್ಭಗಳಲ್ಲಿ ಸಮಾಜ ವಿರೋಧಿ ಶಕ್ತಿಗಳಿಂದ ಶಾಂತಿ ಕದಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಪೊಲೀಸರು ಆದೇಶದಲ್ಲಿ ತಿಳಿಸಿದ್ದಾರೆ. ಸೆಕ್ಷನ್ 144 ಅನ್ವಯ 4 ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ.

ಇದನ್ನೂ ಓದಿ: Valentine’s Day: ಬ್ರೇಕಪ್ ಆದ ಲವರ್​ಗಳಿಗೆ ಸುವರ್ಣಾವಕಾಶ; ಬೆಕ್ಕಿನ ಮೂತ್ರದ ಬಾಕ್ಸ್​ಗೆ ನಿಮ್ಮ ಮಾಜಿ ಪ್ರೇಮಿಯ ಹೆಸರಿಡಬಹುದು!

ಆದೇಶದ ಪ್ರಕಾರ, ಫೆಬ್ರವರಿ ಅಂತ್ಯದವರೆಗೆ ಧಾರ್ಮಿಕ ಸ್ಥಳಗಳು ಮತ್ತು ಕ್ಲಬ್‌ಗಳಲ್ಲಿ ಧ್ವನಿವರ್ಧಕಗಳು, ಡಿಜೆಗಳನ್ನು ಪ್ಲೇ ಮಾಡಲು ಅನುಮತಿ ನೀಡಲಾಗುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ಸಹ ನಿಷೇಧಿಸಲಾಗಿದೆ. ನೋಯ್ಡಾ ಪೊಲೀಸರು ಈ ದಿನಗಳಲ್ಲಿ ಎಲ್ಲೆಡೆ ಗಸ್ತು ತಿರುಗಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ