Love Story: ಪ್ರೀತಿ ಬ್ರೇಕ್ಅಪ್ ಆಗಿ 43 ವರ್ಷಗಳ ಬಳಿಕ ಮದುವೆಯಾದ ಪ್ರೇಮಿಗಳು: ಎಂಥಾ ಪವಿತ್ರ ಪ್ರೀತಿ ಎಂದ ಜನರು
ಪ್ರೀತಿ ಎಲ್ಲರಿಗೂ ಆಗಬಹುದು ಆದರೆ ಪ್ರೀತಿ ಮಾಡಿದವರನ್ನು ಮದುವೆಯಾಗುವ ಅದೃಷ್ಟ ಎಲ್ಲರಿಗಿರುವುದಿಲ್ಲ. ಪ್ರೀತಿಯಲ್ಲಿ ಬೀಳುವುದು ಸಹಜ ಆದರೆ ನಿಭಾಯಿಸುವ ಶಕ್ತಿ ಎಲ್ಲರಿಗೂ ಇರುವುದಿಲ್ಲ, ಕೆಲವೊಮ್ಮೆ ಮನೆಯವರ ಕಾರಣಗಳಿಂದ ಇನ್ನೂ ಕೆಲವು ಬಾರಿ ವೈಯಕ್ತಿಕ ಕಾರಣಗಳಿಂದ ಪ್ರೇಮಿಗಳು ದೂರವಾಗಿಬಿಡುತ್ತಾರೆ.
ಪ್ರೀತಿ ಎಲ್ಲರಿಗೂ ಆಗಬಹುದು ಆದರೆ ಪ್ರೀತಿ ಮಾಡಿದವರನ್ನು ಮದುವೆಯಾಗುವ ಅದೃಷ್ಟ ಎಲ್ಲರಿಗಿರುವುದಿಲ್ಲ. ಪ್ರೀತಿಯಲ್ಲಿ ಬೀಳುವುದು ಸಹಜ ಆದರೆ ನಿಭಾಯಿಸುವ ಶಕ್ತಿ ಎಲ್ಲರಿಗೂ ಇರುವುದಿಲ್ಲ, ಕೆಲವೊಮ್ಮೆ ಮನೆಯವರ ಕಾರಣಗಳಿಂದ ಇನ್ನೂ ಕೆಲವು ಬಾರಿ ವೈಯಕ್ತಿಕ ಕಾರಣಗಳಿಂದ ಪ್ರೇಮಿಗಳು ದೂರವಾಗಿಬಿಡುತ್ತಾರೆ. ದಂಪತಿಯ ಪ್ರೇಮಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರು 43ವರ್ಷಗಳ ಹಿಂದೆ ಬೇರ್ಪಟ್ಟಿದ್ದರು. ಈಗ ನಾಲ್ಕು ದಶಕಗಳ ನಂತರ ಅವರು ವಿವಾಹವಾಗಿದ್ದಾರೆ. ಅವರ ಮೊದಲ ಭೇಟಿ 1971 ರಲ್ಲಿ ಆಗಿತ್ತು. 7 ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದರು.
ಅಮೆರಿಕನ್ ಮ್ಯಾಗಜೀನ್ ಪೀಪಲ್ ಪ್ರಕಾರ, ದಂಪತಿಗಳ ಹೆಸರು ಸ್ಟೀಫನ್ ವಾಟ್ಸ್ ಮತ್ತು ಜೀನ್ ವಾಟ್ಸ್. ಅವರು ಅಮೆರಿಕದ ನಿವಾಸಿ. ಜೀನ್ ಈಗಷ್ಟೇ 69ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೆ ಸ್ಟೀಫನ್ 73 ವರ್ಷ ವಯಸ್ಸಿನವರಾಗಿದ್ದಾರೆ. ಕಾಲೇಜು ದಿನಗಳಲ್ಲಿ ಜೀನ್ ಸ್ಟೀಫನ್ ಅವರನ್ನು ಭೇಟಿಯಾಗಿದ್ದರು. ನಂತರ ಅವರು ಸ್ನೇಹಿತರಾಗಿ ಸ್ನೇಹವು ಪ್ರೀತಿಗೆ ತಿರುಗಿತ್ತು.
ಜೀನ್ ಪ್ರೀತಿಯನ್ನು ಮನೆಗೆ ಹೇಳುತ್ತಾರೆ ಆದರೆ ಸ್ಟೀಫನ್ ಕಪ್ಪಗಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಅವರ ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ. ಇದು ಇಬ್ಬರಿಗೂ ತೀವ್ರ ಆಘಾತವನ್ನು ಉಂಟು ಮಾಡಿತ್ತು. ಆದರೂ ಅವರು ಬಿಟ್ಟಿರಲಿಲ್ಲ 7 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು, ಆದರೆ ಕೆಲಸಕ್ಕೆಂದು ಬೇರೆ ಊರುಗಳಿಗೆ ತೆರಳಿದ ಬಳಿಕ ಸಂಬಂಧವನ್ನು ಮುಂದುವರೆಸಲು ಕಷ್ಟವಾಗಿತ್ತು.
ಮತ್ತಷ್ಟು ಓದಿ: ಬೈಕ್ ಮೇಲೆ ಬೆಕ್ಕಿನ ಸವಾರಿ ಆಯಿತು ಈಗ ಕಾರ್ ಮೇಲೆ ನಾಯಿಯ ಸರದಿ; ಆಕ್ರೋಶಗೊಂಡ ನೆಟ್ಮಂದಿ
ಒಂದ ದಿನ ಜೀನ್ ಕರೆ ಮಾಡಿ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಆದರೆ ಅಪ್ಪ ಅಮ್ಮನ ನಿರ್ಧಾರದ ವಿರುದ್ಧವಾಗಿ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದರು, ಆಗ ಸ್ಟೀಫನ್ ಒಲ್ಲದ ಮನಸ್ಸಿನಿಂದಲೇ ಆಕೆಯಿಂದ ಬೇರೆಯಾಗುವ ನಿರ್ಧಾರ ಮಾಡಿದ್ದರು. ನಾಲ್ಕು ದಶಕಗಳ ಕಾಲ ಪ್ರತ್ಯೇಕವಾಗಿಯೇ ಜೀವನ ನಡೆಸುತ್ತಿದ್ದರು.
2021ರಲ್ಲಿ ಅವರ ಜೀವನದಲ್ಲಿ ಮಹತ್ವದ ತಿರುವು ಸಂಭವಿಸಿತ್ತು,ಆಗ ಜೀನ್ ತನ್ನ ಪತಿಯಿಂದ ವಿಚ್ಛೇದನ ಪಡೆದಿದ್ದರು. ಒಂಟಿಯಾಗಿ ವಾಸಿಸುತ್ತಿದ್ದರು. ಅಷ್ಟರಲ್ಲಿ ಸ್ಟೀಫನ್ ವಿಳಾಸ ಸಿಕ್ಕಿತ್ತು, ಸ್ಟೀಫನ್ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಮಾಹಿತಿ ದೊರೆತಿತ್ತು. ಜೀನ್ನನ್ನು ಕಂಡು ಸ್ಟೀಫನ್ ಭಾವುಕರಾಗಿ ಅಳಲು ಶುರು ಮಾಡಿದ್ದರು.
ಸ್ಟೀಫನ್ಗೆ ಬ್ರೇಕ್ ಸ್ಟ್ರೋಕ್ ಆಗಿ, ಗಾಲಿ ಕುರ್ಚಿಯಲ್ಲೇ ಇರುವ ಪರಿಸ್ಥಿತಿ ಇತ್ತು. ನಂತರ ಜೀನ್ ಸ್ಟೀಫನ್ನನ್ನು ತನ್ನ ಮನೆಗೆ ಕರೆದೊಯ್ದರು, ಇಬ್ಬರೂ ವಿವಾಹವಾದರು. ಕೊನೆಯ ಉಸಿರಿರುವವರೆಗೂ ಒಟ್ಟಿಗೆ ಜೀವಿಸುತ್ತೇವೆ ಎಂದು ಪ್ರಮಾಣ ಮಾಡಿದರು.
ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ