AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೆಟ್ರೋದಲ್ಲಿ ಮಲಗಿ ಗಾಢನಿದ್ರೆಯಲ್ಲಿದ್ದ ಪ್ರಯಾಣಿಕನ ಮೇಲೆ ಏರಿದ ಇಲಿ ಆಮೇಲೇನಾಯ್ತು ನೀವೇ ನೋಡಿ

ಸಾಮಾನ್ಯವಾಗಿ ಕಚೇರಿಗೆ ಹೋಗಿ ಮನೆಗೆ ಹಿಂದಿರುಗುವ ಸಮಯದಲ್ಲಿ ಆಯಾಸ ಹೆಚ್ಚಿರುತ್ತದೆ, ಬಸ್​, ಮೆಟ್ರೋ ಏನೇ ಇರಲಿ ಸೀಟು ಸಿಕ್ಕರೆ ನಿದ್ರೆಗೆ ಜಾರಿಬಿಡುತ್ತೇವೆ.

Viral Video: ಮೆಟ್ರೋದಲ್ಲಿ ಮಲಗಿ ಗಾಢನಿದ್ರೆಯಲ್ಲಿದ್ದ ಪ್ರಯಾಣಿಕನ ಮೇಲೆ ಏರಿದ ಇಲಿ ಆಮೇಲೇನಾಯ್ತು ನೀವೇ ನೋಡಿ
ಮೆಟ್ರೋ
ನಯನಾ ರಾಜೀವ್
|

Updated on: Feb 05, 2023 | 11:07 AM

Share

ಸಾಮಾನ್ಯವಾಗಿ ಕಚೇರಿಗೆ ಹೋಗಿ ಮನೆಗೆ ಹಿಂದಿರುಗುವ ಸಮಯದಲ್ಲಿ ಆಯಾಸ ಹೆಚ್ಚಿರುತ್ತದೆ, ಬಸ್​, ಮೆಟ್ರೋ ಏನೇ ಇರಲಿ ಸೀಟು ಸಿಕ್ಕರೆ ನಿದ್ರೆಗೆ ಜಾರಿಬಿಡುತ್ತೇವೆ. ಆದರೆ ಇಲಿಯೊಂದು ಮೈಮೇಲೆ ಹತ್ತಿದರೂ ಎಚ್ಚರವಾಗದಷ್ಟು ನಿದ್ರೆಯೇ? ಹಾಗೆಯೇ ಪ್ರಯಾಣಿಕನೊಬ್ಬ ಮೆಟ್ರೋದಲ್ಲಿ ಗಾಢ ನಿದ್ರೆಯಲ್ಲಿರುವಾಗ ಇಲಿಯೊಂದು ಅವರ ಮೈಮೇಲೆ ಓಡಾಡಿದರೂ ಅವರಿಗೆ ಎಚ್ಚರವೇ ಆಗಲಿಲ್ಲ.

ಇಲಿಯು ಕಾಲಿನ ಮೂಲಕ ಅವರ ಮೈಮೇಲೆ ಏರಿ ಕೊನೆಗೆ ಕುತ್ತಿಗೆಯವರೆಗೂ ಓಡಾಡಿದರೂ ಅವರಿಗೆ ಎಚ್ಚರವೇ ಇರಲಿಲ್ಲ. ಆದರೆ ಇತರೆ ಪ್ರಯಾಣಿಕರ ಜೋರು ಧ್ವನಿ ಕೇಳಿ ಅವರಿಗೆ ಎಚ್ಚರವಾಗುತ್ತದೆ. ಕೈಯನ್ನು ಕುತ್ತಿಗೆ ಬಳಿ ತೆಗೆದುಕೊಂಡು ಹೋದಾಗ ಅಲ್ಲಿಯೇ ಇಲಿ ಕುಳಿತಿತ್ತು. ಬಳಿಕ ಭಯಗೊಂಡು ತಕ್ಷಣವೇ ಅಲ್ಲೇ ಎದ್ದು ನಿಲ್ಲುತ್ತಾರೆ.

ಮತ್ತಷ್ಟು ಓದಿ: ಕುರುಡುತನ ಕಣ್ಣಿಗೆ, ಕಂಠಕ್ಕಲ್ಲ; ‘ಕಚ್ಚೆ ಧಾಗೆ’ಯ ಈ ಹಾಡು ನೆನಪಿದೆಯೇ? ಬಾಲಕನ ಕಂಠಸಿರಿಯಲ್ಲಿ ಕೇಳಿ

ಕ್ಲಿಪ್ Twitter ನಲ್ಲಿ 141,500 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸಂಯಮ ಕಾಯ್ದುಕೊಂಡಿರುವ ವ್ಯಕ್ತಿಯ ಪ್ರತಿಕ್ರಿಯೆಯಿಂದ ನೆಟಿಜನ್‌ಗಳು ಆಶ್ಚರ್ಯಚಕಿತರಾದರು.

ನ್ಯೂಯಾರ್ಕ್​ನ ಮೆಟ್ರೋದಲ್ಲಿ ನಡೆದ ಘಟನೆಯಿದು ಕಳೆದ ವಾರ ಟ್ವಿಟ್ಟರ್ ನಲ್ಲಿ ಶೇರ್ ಆದ ನಂತರ ಈ ವಿಡಿಯೋವನ್ನು ಸುಮಾರು 6 ಲಕ್ಷ ಬಾರಿ ವೀಕ್ಷಿಸಲಾಗಿದೆ. ಪ್ರಯಾಣಿಕರ ಶಾಂತ ಪ್ರತಿಕ್ರಿಯೆಗೆ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅವರ ಜಾಗದಲ್ಲಿ ನಾನಿದ್ದರೆ ಎದ್ದು ಕುಣಿದುಬಿಡುತ್ತಿದ್ದೆ ಎಂದು ಕೆಲವರು ಹೇಳಿದರು. ಈ ವೀಡಿಯೊ ನ್ಯೂಯಾರ್ಕ್ ಮೆಟ್ರೋದಲ್ಲಿ ಸೆರೆಹಿಡಿಯಲಾಗಿದೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ