ಅಪ್ಪನ ಮೊಬೈಲ್ನಿಂದ ರೂ. 80,000 ವೆಚ್ಚದ ಫುಡ್ ಆರ್ಡರ್ ಮಾಡಿದ 6 ವರ್ಷದ ಮಗ
Mobile : ‘ಟನ್ಗಟ್ಟಲೆ ಫುಡ್ಪ್ಯಾಕ್ಗಳ ಬಾಗಿಲಿಗೆ ಬಂದಿಳಿದಾಗ ನಾನು ಶಾಕ್! ರಾತ್ರಿ ಮಲಗುವಾಗ ಅವನ ಕೈಯಲ್ಲಿ ಮೊಬೈಲ್ ಇತ್ತು. ಆಟವಾಡುತ್ತಿದ್ದಾನೆಂದು ನಾನು ಅಂದುಕೊಂಡಿದ್ದೆ. Grubhubನಿಂದ ಸಾಕಷ್ಟು ಮೆಸೇಜ್ಗಳು ಬಂದಿದ್ದವು.’
Viral Video : ಹೌದು, ನೀವು ಓದಿದ್ದು ಸರಿ ಇದೆ. 6 ವರ್ಷದ ಮಗು ತನ್ನ ತಂದೆಯ ಮೊಬೈಲ್ ಮೂಲಕ ರೂ. 80,000 ವೆಚ್ಚದ ಆನ್ಲೈನ್ ಫುಡ್ ಆರ್ಡರ್ ಮಾಡಿದ್ದಾನೆ. ಈ ವಿಷಯವನ್ನು ಈ ಮಗುವಿನ ತಂದೆಯೇ ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆಯ ಬಗ್ಗೆ ಬರೆದಿದ್ದಾರೆ. ಇದೀಗ ವೈರಲ್ ಆಗುತ್ತಿದೆ. ನೆಟ್ಟಿಗರಲ್ಲಿ ಕೆಲವರು ಗಾಬರಿಯಾಗಿದ್ದಾರೆ. ಇನ್ನೂ ಕೆಲವರು ನಗುತ್ತಿದ್ದಾರೆ.
View this post on Instagram ಇದನ್ನೂ ಓದಿ
ಸಾಮಾನ್ಯವಾಗಿ ಮಕ್ಕಳು ದಿನದ ಸ್ವಲ್ಪ ಹೊತ್ತಾದರೂ ಪೋಷಕರ ಮೊಬೈಲ್ ಬಳಸುವುದುಂಟು. ಅದು ಅಭ್ಯಾಸಕ್ಕೆ ಸಂಬಂಧಿಸಿ ಏನೋ ಹುಡುಕಬೇಕೆಂದೋ, ಆನ್ಲೈನ್ ಆಟವಾಡಬೇಕೆಂದೋ, ಯೂಟ್ಯೂಬ್ ನೋಡಬೇಕೆಂದೋ ಹೀಗೆ ಏನೇನೋ ಕಾರಣಗಳು. ಅಷ್ಟರಲ್ಲಿಯೇ ಅಪರೂಪಕ್ಕೆ ಕೆಲ ಹುಡುಗರು ಒಂದು ಮಾಡಲು ಹೋಗಿ ಇನ್ನೊಂದನ್ನು ಮಾಡಿಬಿಟ್ಟಿರುತ್ತಾರೆ.
ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್
ಕೀಥ್ ಸ್ಟೋನ್ಹೌಸ್ ಎಂಬ ವ್ಯಕ್ತಿ 6 ವರ್ಷದ ತನ್ನ ಮಗ ಚೇಸ್ಗೆ ರಾತ್ರಿ ಹೊತ್ತು ಅರ್ಧ ಗಂಟೆಗಳ ಕಾಲ ಆಟವಾಡಲು ತನ್ನ ಮೊಬೈಲ್ ನೀಡಿದ್ದ. ‘ನಿನ್ನೆ ರಾತ್ರಿ ಡೆಲಿವರಿ ಡ್ರೈವರ್ ನನ್ನ ಮನೆಗೆ ಬಂದು ಆರ್ಡರ್ ಅನ್ನು ಮನೆಯ ಬಳಿ ಇಡಲು ಶುರುಮಾಡಿದ. ಆಗ ನನ್ನ ಪರಿಸ್ಥಿತಿ ಹೇಗಾಗಿರಬೇಡ ಊಹಿಸಿಕೊಳ್ಳಿ. ಟನ್ಗಟ್ಟಲೆ ಫುಡ್ ಪ್ಯಾಕ್ಗಳನ್ನು ಡೆಲಿವರಿ ಏಜೆಂಟ್ ಇಡುತ್ತಲೇ ಹೋದ. ಸೀಗಡಿ ಪದಾರ್ಥ, ಸಲಾಡ್, ಚಿಲ್ಲಿ ಚೀಸ್ ಫ್ರೈ, ಚಿಕನ್ ಪದಾರ್ಥ, ಸ್ಯಾಂಡ್ವಿಚ್, ಪಿಝಾ, ಎಲ್ಲಾ ಬಗೆಯ ಐಸ್ಕ್ರೀಮ್ಗಳು… ಇದ್ದಕ್ಕಿದ್ದಂತೆ ಟ್ರಕ್ಗಟ್ಟಲೆ ಮನೆಮುಂದೆ ಹೀಗೆ ಬಂದು ಇಳಿಸಿದರೆ ಏನಾಗಬೇಡ?
ಇದನ್ನೂ ಓದಿ : ವೃದ್ಧರೊಬ್ಬರು ಕೋತಿಗೆ ರೊಟ್ಟಿ ಕೊಡಲು ಪ್ರಯತ್ನಿಸುತ್ತಿರುವ ಆಪ್ತವಾದ ವಿಡಿಯೋ ವೈರಲ್
‘ನಾನು ರಾತ್ರಿ ಮಲಗುವಾಗ ಅವನ ಕೈಯಲ್ಲಿ ಮೊಬೈಲ್ ಇತ್ತು. ಆಟವಾಡುತ್ತಿದ್ದಾನೆಂದು ನಾನು ಅಂದುಕೊಂಡೆ. ಬಹಳ ಹೊತ್ತಾದ ಮೇಲೆ ನೋಡಿದರೆ Grubhubನಿಂದ ಸಾಕಷ್ಟು ಮೆಸೇಜ್ಗಳು ಬಂದಿದ್ದವು. ನೀವು ಆರ್ಡರ್ ಮಾಡಿದ ಫುಡ್ ಈಗ ದಾರಿಯಲ್ಲಿದೆ, ಸದ್ಯದಲ್ಲೇ ತಲುಪುತ್ತದೆ, ಇತ್ಯಾದಿ… ಡೋರ್ಬೆಲ್ ಬಾರಿಸುವತನಕ ಒಟ್ಟಾರೆ ಈ ಹಕೀಕತ್ತು ನನಗೇ ತಿಳಿದೇ ಇರಲಿಲ್ಲ.’ ಎಂದಿದ್ದಾನೆ ಕೀಥ್.
ನೆಟ್ಟಿಗರನೇಕರು ಇದನ್ನು ಓದಿ ಗಾಬರಿಗೆ ಬಿದ್ದಿದ್ದಾರೆ. ನನಗೆ ಈಗಲೂ ಭಯವಾಗುತ್ತಿದೆ ಇದನ್ನು ಓದಿ ಎಂದು ಅನೇಕರು ಹೇಳುತ್ತಿದ್ದಾರೆ. ನಾನಂತೂ ಬಿದ್ದು ಬಿದ್ದು ನಗುತ್ತಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ.
ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:07 pm, Sat, 4 February 23