ಈ ಇಲಿ ತನ್ನ ಸಂಗಾತಿಗಾಗಿ ವಜ್ರದ ನೆಕ್ಲೇಸ್ ಕದ್ದೊಯ್ದಿತೆ? ನೆಟ್ಟಿಗರಲ್ಲಿ ಭಾರೀ ಚರ್ಚೆ
Valentine's Day 2023 : ಇಲಿಯೇ ಆಗಲಿ ಮನುಷ್ಯರೇ ಆಗಲಿ ಎಲ್ಲಾ ಗಂಡಂದಿರ ಬಾಳು ಇಷ್ಟೇ ಎಂದು ಒಬ್ಬರು. ವಿಜಯ ಮಲ್ಯ ಇಲಿರೂಪದಲ್ಲಿ ಬಂದಿದ್ದಾರೆ, ದಯವಿಟ್ಟು ಬ್ಯಾಂಕುಗಳು ಕರುಣೆ ತೋರಬೇಕು ಎಂದು ಮತ್ತೊಬ್ಬರು. ವಿಡಿಯೋ ನೋಡಿ ನೀವೇನಂತೀರಿ?
Viral Video : ಹೈಟೆಕ್ ಯುಗದ ಅನೇಕ ಕಳ್ಳರ ವಿಡಿಯೋಗಳನ್ನು ಇದೇ ತಾಣದಲ್ಲಿ ಈಗಾಗಲೇ ನೋಡಿದ್ದೀರಿ. ಅವರ ಚಾಕಚಕ್ಯತೆ, ತಂತ್ರಗಳ ಸೂಕ್ಷ್ಮತೆಗೆ ಬೆರಗಾಗಿದ್ದೀರಿ. ಆದರೆ ಇದೀಗ ವೈರಲ್ ಆಗುತ್ತಿರುವ ಈ ನಾಲ್ಕು ಕಾಲಿನ ಕಳ್ಳರ ಅಗಾಧ ಸಾಧನೆಯನ್ನು ನೀವು ನೋಡಲೇಬೇಕು. ಮೇಲಿನ ಫೋಟೋದಲ್ಲಿ ಅವರು ನಿಮಗೆ ಸ್ಪಷ್ಟವಾಗಿ ಕಾಣಲಿಕ್ಕಿಲ್ಲ. ಹಾಗಂತ ಅವರೇನು ಮಾಟಮಂತ್ರದ ಕುಲದವರೂ ಅಲ್ಲ. ಸಾಕ್ಷಾತ್ ಶ್ರಮಜೀವಿಗಳೇ. ಆದರೆ ಅವರ ಮೈಬಣ್ಣವೂ ಮತ್ತೆ ಇಲ್ಲಿರುವ ಬ್ಯಾಕ್ಗ್ರೌಂಡೂ ಒಂದೇ ಬಣ್ಣದ್ದಾಗಿರುವುದರಿಂದ ಅವರ ದರ್ಶನ ಅಸ್ಪಷ್ಟ. ಹಾಗಾಗಿ ನೀವು ಈ ವಿಡಿಯೋ ನೋಡುವುದು ಒಳ್ಳೆಯದು.
#अब ये चूहा डायमंड का नेकलेस किसके लिए ले गया होगा…. ?? pic.twitter.com/dkqOAG0erB
ಇದನ್ನೂ ಓದಿ— Rajesh Hingankar IPS (@RajeshHinganka2) January 28, 2023
ಕಂಡರಲ್ವಾ, ಯಾರಂತ ಸ್ಪಷ್ಟವಾಯಿತಲ್ಲ? ವ್ಯಾಲೆಂಟೆನ್ಸ್ ಡೇ ಬೇರೆ ಹತ್ತಿರ ಬಂದಿತು. ತಯಾರಿ ಮಾಡಿಕೊಳ್ಳಬೇಕಲ್ಲ? ಬಹುಶಃ ಇವರು ತಮ್ಮ ಸಂಗಾತಿಗೆ ವಜ್ರದ ನೆಕ್ಲೇಸ್ ಕೊಡುವ ಆಲೋಚನೆಯಿಂದ ಆಭರಣದಂಗಡಿ ಹೊಕ್ಕು ಕಳ್ಳತನ ಮಾಡಿರುವ ಅಂದಾಜು ಯಾರಿಗೂ ಸಹಜ.
ಇದನ್ನೂ ಓದಿ : ಓಹ್ ಕಾರು! ಎಲ್ಲಿಗೆ ಹೋಗ್ತಿದೀವಿ? ಸ್ಕ್ಯಾನಿಂಗ್ಗೆ, ಕಿಮೋಥೆರಪಿಗೆ, ಸರ್ಜರಿಗೆ
ಮೊದಲು ತಮಗೆ ಬೇಕಾದ್ದನ್ನು ಹೇಗೆ ಕ್ಷಣಗಳ ಕಾಲ ದಿಟ್ಟಿಸುತ್ತಾರೆ ನೋಡಿ. ಆಮೇಲೆ ಒಂದೇ ಸಲಕ್ಕೆ ಅದನ್ನು ಬಾಯಲ್ಲಿ ಕಚ್ಚಿಕೊಂಡು ಮಾಯವಾಗುವ ಆ ಚಾಣಾಕ್ಷತೆ ನೋಡಿ. ಪಾಪ ಅವರಿಗೆ ಸಿಸಿಟಿವಿ ಇರುವ ಬಗ್ಗೆ ಅರಿವಿಲ್ಲವೆನ್ನಿಸುತ್ತದೆ. ಅಥವಾ ಎರಡು ಕಾಲಿನ ಕಳ್ಳರಂತೆ, ಸಿಸಿಟಿವಿ ಇದ್ದರೂ ನನಗೇನು ಎಂಬ ಉಡಾಫೆಯೋ ಗೊತ್ತಿಲ್ಲ. ಅಂತೂ ಸಿಸಿಟಿವಿ ಕ್ಯಾಮೆರಾದಲ್ಲಿ ಇವರ ಕಳ್ಳತನ ಪ್ರಕರಣ ಬಯಲಾಗಿ ಜಗಜ್ಜಾಹೀರಾಗಿ ಈಗಿವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೀಗೆ ಹೆಸರು ಮಾಡುತ್ತಿದ್ದಾರೆ.
ಇದನ್ನೂ ಓದಿ : ‘ಕಳ್ಳಿ ಕಳ್ಳಿ’ ಪಾಕಿಸ್ತಾನಿ ಸಚಿವೆ ಮರಿಯಮ್ ಔರಂಗಜೇಬ್ರನ್ನು ಲಂಡನ್ನಲ್ಲಿ ಸಾರ್ವಜನಿಕವಾಗಿ ನಿಂದಿಸಿರುವ ವಿಡಿಯೋ ವೈರಲ್
ಇದು ಸತ್ಯಘಟನೆಯೇ ಆದರೂ ಕಲ್ಪನೆಗೂ ಅತೀತವಾಗಿದೆ. ಆದರೆ ಇದು ಯಾರಿಗಾಗಿ ನೆಕ್ಲೇಸ್ ಕದ್ದೊಯ್ದಿದೆ ಎನ್ನುವುದು ಪತ್ತೆಯಾಗಬೇಕಿದೆ! ಎಂದು ನೆಟ್ಟಿಗರು ಭಾರೀ ಚರ್ಚೆ ನಡೆಸುತ್ತಿದ್ದಾರೆ. ಈಗಾಗಲೇ ಈ ವಿಡಿಯೋ ಅನ್ನು ಸುಮಾರು 84,000 ಜನರು ನೋಡಿದ್ದಾರೆ. 500ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ : ಬೇಕೇ ಮ್ಯಾಜಿಕ್ ಪ್ಯಾಂಟ್? ಕಳ್ಳತನದಲ್ಲಿ ಭವಿಷ್ಯ ಕಟ್ಟಿಕೊಳ್ಳಬೇಕೆನ್ನುವವರಿಗೆ ಮಾತ್ರ!
ಅಯ್ಯೋ ಇದು ನನಗೆಂದೇ ನೆಕ್ಲೇಸ್ ಕದ್ದಿದೆ ಎಂದು ಒಬ್ಬಾಕೆ ಹೇಳಿದ್ದಾರೆ. ಪಾಪ ಅದರದೂ ಮನೆ, ಸಂಸಾರ ಇದ್ದೀತು. ಸಂಗಾತಿಯನ್ನು ಸಂತೋಷಗೊಳಿಸಲು ತೆಗೆದುಕೊಂಡು ಹೋಗಿರಬಹುದು ಅಂತ ಇನ್ನೊಬ್ಬರು ಹೇಳಿದ್ದಾರೆ. ಇನ್ನ್ಯಾರಿಗೆ ಇಲಿರಾಣಿಗೆ ತೆಗೆದುಕೊಂಡು ಹೋಗಿರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇಲಿಯೇ ಆಗಲಿ ಮನುಷ್ಯರೇ ಆಗಲಿ ಎಲ್ಲಾ ಗಂಡಂದಿರ ಬಾಳು ಇಷ್ಟೇ ಎಂದು ಮಗದೊಬ್ಬರು ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ : ತನ್ನ ತಲೆಯನ್ನು ತಾನೇ ಬೋಳಿಸಿಕೊಂಡ ಕ್ಷೌರಿಕ; ಕ್ಯಾನ್ಸರ್ ಪೀಡಿತ ಮಹಿಳೆಗೆ ಭಾವನಾತ್ಮಕ ಸ್ಪಂದನೆ
ವ್ಯಾಲೆಂಟೆನ್ಸ್ ಡೇ ಹತ್ತಿರ ಬಂದಿದೆ. ಇದರಲ್ಲಿ ಹೆಚ್ಚಿಗೆ ಯೋಚಿಸುವುದೇನೂ ಇಲ್ಲ ಎಂದು ಅನೇಕರು ಹೇಳಿದ್ಧಾರೆ. ವಿಜಯ ಮಲ್ಯ ಇಲಿರೂಪದಲ್ಲಿ ಬಂದಿದ್ದಾರೆ. ದೇಶದ ಬ್ಯಾಂಕುಗಳು ಇವರ ಬಗ್ಗೆ ಉದಾರತೆ ಮತ್ತು ಕರುಣೆಯನ್ನು ಹೊಂದಬೇಕು ಎಂದು ಒಬ್ಬರು ಹೇಳಿದ್ದಾರೆ.
ಈ ನಾಲ್ಕು ಕಾಲಿನ ಕಳ್ಳನನ್ನು ಹಿಡಿಯುವಲ್ಲಿ ಪೊಲೀಸರು ಸಫಲರಾಗಬಹುದೇ?
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:39 pm, Sat, 4 February 23