‘ಕಳ್ಳಿ ಕಳ್ಳಿ’ ಪಾಕಿಸ್ತಾನಿ ಸಚಿವೆ ಮರಿಯಮ್ ಔರಂಗಜೇಬ್ರನ್ನು ಲಂಡನ್ನಲ್ಲಿ ಸಾರ್ವಜನಿಕವಾಗಿ ನಿಂದಿಸಿರುವ ವಿಡಿಯೋ ವೈರಲ್
Maryam Aurangzeb : ‘ಪಾಕಿಸ್ತಾನದ ಸಚಿವೆ ಮರಿಯಮ್ ಔರಂಗಜೇಬ್ ಈಕೆ. ಪಾಕಿಸ್ತಾನದ ಜನರ ಹಣ ನುಂಗಿ, ರಕ್ತವನ್ನು ಹೀರಿ ಲಂಡನ್ ಸುತ್ತಲು ಬಂದಿದ್ದಾಳೆ’.
Viral video : ಪಾಕಿಸ್ತಾನದ ಮಾಹಿತಿ ಸಚಿವೆ ಮರಿಯಮ್ ಔರಂಗಜೇಬ್ ಅವರು ಲಂಡನ್ನಿನ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸ್ಥಳೀಯ ಪಾಕಿಸ್ತಾನಿ ಪ್ರಜೆಗಳು ಸಾರ್ವಜನಿಕವಾಗಿ ಅವರನ್ನು ಮುತ್ತಿಗೆ ಹಾಕಿ ನಿಂದಿಸಿದ ವಿಡಿಯೋ ವೈರಲ್ ಆಗಿದೆ. ಮರಿಯಮ್ ಅವರನ್ನು ಚೋರ್ನಿ ಚೋರ್ನಿ- ಕಳ್ಳಿ ಕಳ್ಳಿ ಎಂದು ಕೂಗುತ್ತ ಅವರನ್ನು ಸುತ್ತುವರಿದ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಅನಿರೀಕ್ಷಿತ ಘಟನೆಯಾಗಿದ್ದು ನೆಟ್ಟಿಗರಲ್ಲಿ ಕುತೂಹಲ ಹುಟ್ಟಿಸಿದೆ.
دن دیہاڑے چلتی پھرتی مریم اورنگزیب کی عزت لوٹ کر تار تار کر دی گئی۔ جب مریم سے پوچھا تو بولیں اے کوئی پہلی واری ہویا اے pic.twitter.com/2uNsyCd00p
ಇದನ್ನೂ ಓದಿ— ذیلدار ????????? (@MeZaildar) September 25, 2022
ಟ್ವಿಟರ್ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಲಂಡನ್ನ ಫುಟ್ಪಾತ್ ಮೇಲೆ ಮರಿಯಮ್ ನಡೆದುಕೊಂಡು ಹೋಗುತ್ತಿದ್ದಾರೆ. ಅವರನ್ನು ಹಿಂಬಾಲಿಸುತ್ತಿರುವ ಜನರು ಧ್ವನಿವರ್ಧಕದ ಮೂಲಕ ಅವರನ್ನು ಕಳ್ಳಿ ಕಳ್ಳಿ ಎಂದು ಕೂಗುತ್ತಿದ್ದಾರೆ. ಹಿನ್ನೆಲೆಯಲ್ಲಿ ಒಬ್ಬ ಮಹಿಳೆಯ ಆಕ್ರೋಶಭರಿತ ಧ್ವನಿಯೂ ಕೇಳಿಬರುತ್ತದೆ. ‘ಪಾಕಿಸ್ತಾನದ ಸಚಿವೆ ಮರಿಯಮ್ ಔರಂಗಜೇಬ್ ಈಕೆ. ಪಾಕಿಸ್ತಾನದ ಜನರ ಹಣ ನುಂಗಿ, ರಕ್ತವನ್ನು ಹೀರಿ ಲಂಡನ್ ಸುತ್ತಲು ಬಂದಿದ್ದಾಳೆ’.
ಉಳಿದ ಜನರು ಒಂದೇ ಸಮ ಮರಿಯಮ್ರನ್ನು ಚೋರ್ನಿ ಚೋರ್ನಿ ಎಂದು ಆವೇಶಭರಿತರಾಗಿ ಕೂಗುತ್ತಿದ್ದಾರೆ. ಮರಿಯಮ್ ಮಾತ್ರ ಮೌನವಾಗಿ ಹೆಜ್ಜೆ ಹಾಕುತ್ತಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:04 pm, Thu, 29 September 22