ಕೇರಳದ ವೈದ್ಯರ ಈ ಔಷಧಿಚೀಟಿ ಯಾಕೆ ವೈರಲ್ ಆಗುತ್ತಿದೆ ಊಹಿಸಿ

Prescription : ‘ನನ್ನ ಸೋದರಿ ನಾಲ್ಕು ಗೆರೆಯ ನೋಟ್​ಬುಕ್ಕಿನಲ್ಲಿ ಅಚ್ಚುಕಟ್ಟಾಗಿ ಬರೆಯಲು ಅಭ್ಯಾಸ ಮಾಡಿಸಿದ್ದೇ ಇದರ ಹಿಂದಿರುವ ಗುಟ್ಟು’ ಎಂದಿದ್ದಾರೆ ವೈದ್ಯರು.  

ಕೇರಳದ ವೈದ್ಯರ ಈ ಔಷಧಿಚೀಟಿ ಯಾಕೆ ವೈರಲ್ ಆಗುತ್ತಿದೆ ಊಹಿಸಿ
ಕೇರಳದ ವೈದ್ಯರು ಬರೆದ ಔಷಧಿಚೀಟಿ
TV9kannada Web Team

| Edited By: ಶ್ರೀದೇವಿ ಕಳಸದ | Shridevi Kalasad

Sep 29, 2022 | 10:29 AM

Kerala : ಯಾರು ಬರೆದದ್ದನ್ನೂ ಓದಬಹುದು. ಆದರೆ ಈ ವೈದ್ಯರು ಬರೆದದ್ದನ್ನು ಆ ಬ್ರಹ್ಮನೂ ಓದಲು ಸಾಧ್ಯವಿಲ್ಲ! ಅದಕ್ಕೇ ವೈದ್ಯರ ಔಷಧಿಚೀಟಿಗೆ ಬ್ರಹ್ಮಲಿಪಿ ಎಂದೇ ತಮಾಷೆ ಮಾಡುವುದುಂಟು. ನೀವೂ ಸಾಕಷ್ಟು ಸಲ ಆ ಚೀಟಿ ಓದಲು ಹೋಗಿ ಸೋತಿರುತ್ತೀರಿ. ಕೊನೆಗೆ ವೈದ್ಯರ ಲಿಪಿ ಅರ್ಥವಾಗುವುದು ಔಷಧಿ ಅಂಗಡಿಯವರಿಗೆ ಮಾತ್ರ ಎಂಬ ತೀರ್ಮಾನಕ್ಕೆ ಸುಮ್ಮನೆ ಚೀಟಿ ಮಡಿಚಿ ಜೇಬಿನಲ್ಲಿಟ್ಟುಕೊಂಡಿರುತ್ತೀರಿ. ಆದರೂ ಒಂದಿಲ್ಲಾ ಒಂದು ಬಾರಿ ನಿಮ್ಮ ಮನಸ್ಸಿನಲ್ಲಿ ಈ ಲಿಪಿ ಕಾಡಿಯೇ ಕಾಡಿರುತ್ತದೆ. ಆದರೆ ಕೇರಳದ ವೈದ್ಯರೊಬ್ಬರು ಬರೆಯುವ ಔಷಧಿ ಚೀಟಿ ಮಾತ್ರ ಈ ಯಾವ ಗೊಂದಲಗಳನ್ನೂ ಹುಟ್ಟುಕಾಕುವುದಿಲ್ಲ. ಅಷ್ಟೊಂದು ಅಚ್ಚುಕಟ್ಟಾದ ಕೈಬರಹ ಅವರದು. ಅದಕ್ಕೇ ಈಗ ಇದು ವೈರಲ್ ಆಗುತ್ತಿದೆ.

 

ಡಾ. ನಿತಿನ್ ನಾರಾಯಣನ್ ಕೇರಳದ ಪಾಲಕ್ಕಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ವೈದ್ಯರಾಗಿದ್ದಾರೆ. ಅವರೇ ಈ ಔಷಧಿ ಚೀಟಿ ಬರೆದವರು. ಒಂದೊಂದು ಅಕ್ಷರವನ್ನೂ ಬಿಡಿಬಿಡಿಸಿ, ಕ್ಯಾಪಿಟಲ್​ ಲೆಟರ್ಸ್​ನಲ್ಲಿ ಬರೆಯುವ ಇವರ ತಾಳ್ಮೆ, ಕೌಶಲ ಅಹುದಹುದು ಎನ್ನುವಂತಿದೆ. ಇವರ ಈ ಸುಂದರವಾದ ಕೈಬರಹವನ್ನು ನೋಡಿ ಅಚ್ಚರಿಗೊಂಡ ಬೆನ್ಸಿ ಎಸ್​.ಡಿ. ಎಂಬುವವರು ಫೇಸ್‌ಬುಕ್‌ನಲ್ಲಿ ಈ ಔಷಧಿಚೀಟಿ ಹಂಚಿಕೊಂಡಿದ್ದಾರೆ. ಯಾರೂ ಕೂಡ ಸರಳವಾಗಿ ಓದಲು ಸಾಧ್ಯವಾಗುವಂಥ ಈ ಕೈಬಹದ ಬಗ್ಗೆ ಬೆನ್ಸಿ ಅವರಿಗೆ ಕುತೂಹಲ ಉಂಟಾಗಿ ವೈದ್ಯರಿಗೆ ಈ ಕುರಿತು ಪ್ರಶ್ನಿಸಿಯೇ ಬಿಟ್ಟಿದ್ದಾರೆ. ಆಗ ವೈದ್ಯರು, ‘ನನ್ನ ಸೋದರಿ ನಾಲ್ಕು ಗೆರೆಯ ನೋಟ್​ಬುಕ್ಕಿನಲ್ಲಿ ಅಚ್ಚುಕಟ್ಟಾಗಿ ಬರೆಯಲು ಅಭ್ಯಾಸ ಮಾಡಿಸಿದ್ದೇ ಇದರ ಹಿಂದಿರುವ ಗುಟ್ಟು’ ಎಂದಿದ್ದಾರೆ.

ಈ ದಸರಾಗೆ ನಿಮ್ಮ ನಿಮ್ಮ ವೈದ್ಯರಿಗೆ ನಾಲ್ಕು ಗೆರೆಯ ನೋಟ್​ಬುಕ್​ ಉಡುಗೊರೆಯಾಗಿ ಕೊಡುವ ಆಲೋಚನೆ ನಿಮಗೀಗ ಬರುತ್ತಿದೆಯಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಇದನ್ನೂ ಓದಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada