ಜ್ಞಾನೋದಯಕ್ಕಾಗಿ ಸಮಾಧಿ ಸ್ಥಿತಿಯಲ್ಲಿದ್ದ ಯುವಕನನ್ನು ರಕ್ಷಿಸಿದ ಪೊಲೀಸರು

Uttara Pradesh : ಜೀವಂತ ಸಮಾಧಿಯಾಗಲು ಹೊರಟಿದ್ದ ಯುವಕ ಸೇರಿದಂತೆ ಹಣದಾಸೆಗಾಗಿ ಈ ಕೃತ್ಯಕ್ಕೆ ಪ್ರೇರೇಪಿಸಿದ್ದ ಮೂರು ಜನ ಹಿಂದೂ ಪುರೋಹಿತರುಗಳನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ಜ್ಞಾನೋದಯಕ್ಕಾಗಿ ಸಮಾಧಿ ಸ್ಥಿತಿಯಲ್ಲಿದ್ದ ಯುವಕನನ್ನು ರಕ್ಷಿಸಿದ ಪೊಲೀಸರು
ಸಮಾಧಿಯಿಂದ ಯುವಕನನ್ನು ರಕ್ಷಿಸುತ್ತಿರುವ ಪೊಲೀಸರು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 28, 2022 | 4:16 PM

Uttara Pradesh : ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶ ಇಷ್ಟೊಂದು ಪರಿಣತಿ, ಪ್ರಗತಿ ಸಾಧಿಸುತ್ತಿದ್ದರೂ ಮೂಢನಂಬಿಕೆ, ಕಂದಾಚಾರ, ಅರ್ಥಹೀನ ಆಚರಣೆಗಳಿಂದ ಇನ್ನೂ ಮುಕ್ತವಾಗಿಯೇ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಉತ್ತರ ಪ್ರದೇಶದ ಉನ್ನಾವೊ ಗ್ರಾಮದಲ್ಲಿ ವಿಲಕ್ಷಣ ಘಟನೆ ನಡೆದಿದೆ. ಸಮಾಧಿಯಲ್ಲಿ ಕುಳಿತರೆ ಜ್ಞಾನೋದಯವಾಗುತ್ತದೆ ಎಂದು ಹಿಂದೂ ಪುರೋಹಿತರು ಹೇಳಿದ್ದನ್ನು ಕೇಳಿದ ಯುವಕನೊಬ್ಬ ಆರು ಅಡಿ ಆಳ ಭೂಮಿ ಅಗೆದು ಅದರಲ್ಲಿ ಸಮಾಧಿ ಸ್ಥಿತಿಯಲ್ಲಿ ಕುಳಿತಿದ್ದಾನೆ. ಪೊಲೀಸರಿಗೆ ಸುದ್ದಿ ತಲುಪಿ ಅಂತೂ ಆ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

ನವರಾತ್ರಿ ಉತ್ಸವದ ಮೊದಲ ದಿನದಂದು ಸಮಾಧಿ ಸ್ಥಿತಿಯಲ್ಲಿ ಕುಳಿತುಕೊಂಡರೆ ಜ್ಞಾನೋದಯವಾಗುತ್ತದೆ ಎಂದು ಹಿಂದೂ ಪುರೋಹಿತರೊಬ್ಬರು ಹೇಳಿದ್ದರಿಂದ ಈ ಗ್ರಾಮದ ಯುವಕ ಅವರ ಮಾತನ್ನು ಅನುಸರಿಸಿ ಸಮಾಧಿಯೊಳಗೆ ಕುಳಿತಿದ್ದ. ಗ್ರಾಮಸ್ಥರಿಂದ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು, ಯುವಕನನ್ನು ಪ್ರಾಣಾಪಾಯದಿಂದ ರಕ್ಷಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಈ ಯುವಕನ ಹೆಸರು ಶುಭಂ ಗೋಸ್ವಾಮಿ ಎಂದು ಗುರುತಿಸಲಾಗಿದೆ. ಅಸಿವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್‌ಪುರ ಗ್ರಾಮದ ನಿವಾಸಿಯಾಗಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಸಮಾಧಿ ಮೇಲೆ ಹರಡಿದ್ದ ಮಣ್ಣು, ಬಿದಿರಿನ ಗಳು ಮತ್ತುಏನೇನೋ ಕೊಳಕಾದ ಹೊದಿಕೆಗಳನ್ನು ತೆಗೆದು ಅಂತೂ ಯುವಕನನ್ನು ಕಾಪಾಡಿದ್ದಾರೆ.

ಎನ್‌ಡಿಟಿವಿ ಪ್ರಕಾರ, ಉನ್ನಾವೋ ಜಿಲ್ಲೆಯ ತಾಜ್‌ಪುರ ಗ್ರಾಮದ ಮೂವರು ಪುರೋಹಿತರು ಹಣದಾಸೆಗಾಗಿ ಈ ಯುವಕನಿಗೆ ಸುಳ್ಳು ಭರವಸೆ ನೀಡಿ ಸಮಾಧಿಗೊಳ್ಳಲು ಪ್ರೇರೇಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಯುವಕನೊಂದಿಗೆ ಉಳಿದ ಮೂರು ಜನ ಪುರೋಹಿತರನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:59 pm, Wed, 28 September 22