ಇದಕ್ಕೆ ಯಾಕೆ ಡೆಡ್​ ಸೀ ಎನ್ನುತ್ತಾರೆ, ಇದು ಎಲ್ಲಿದೆ, ಏನಿದರ ವೈಶಿಷ್ಟ್ಯ?

Dead Sea : ಈ ಮೃತಸಮುದ್ರ ನಿಮ್ಮನ್ನು ಪುನಶ್ಚೇತನಗೊಳಿಸುತ್ತದೆ. ಸೂರ್ಯಸ್ನಾನಕ್ಕೆಂದೇ ಪ್ರವಾಸಿಗರು ಇಲ್ಲಿಗೆ ನಿಗದಿತ ದಿನಗಳಲ್ಲಿ ಭೇಟಿಕೊಡುತ್ತಾರೆ. ವಿಚಿತ್ರ ಎನ್ನಿಸುತ್ತಿದೆಯೇ? ಮೃತಸಮುದ್ರದ ಬಗ್ಗೆ? ಓದಿ...

ಇದಕ್ಕೆ ಯಾಕೆ ಡೆಡ್​ ಸೀ ಎನ್ನುತ್ತಾರೆ, ಇದು ಎಲ್ಲಿದೆ, ಏನಿದರ ವೈಶಿಷ್ಟ್ಯ?
ಮೃತ ಸಮುದ್ರ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 28, 2022 | 1:43 PM

Dead Sea : ಡೆಡ್​ ಸೀ-ಮೃತಸಮುದ್ರ ಏನಿದು? ಇದು ಎಲ್ಲಿದೆ? ಹೇಗಿರುತ್ತದೆ? ಎಂಬ ಪ್ರಶ್ನೆಗಳು ನಿಮ್ಮ ಮೆದುಳಲ್ಲಿ ದಾಂಗುಡಿ ಇಡಲು ಶುರುಮಾಡಿರುತ್ತವೆ. ಈ ಡೆಡ್​ ಸೀ ಇರುವುದು ಇಸ್ರೇಲ್ ಮತ್ತು ಜೋರ್ಡಾನ್​ ಮಧ್ಯದ ಪಶ್ಚಿಮ ತೀರದಲ್ಲಿ. ಇದೊಂದು ನೈಋತ್ಯ ಏಷ್ಯಾದಲ್ಲಿರುವ ಉಪ್ಪು ಸರೋವರ. ಇದನ್ನು ಸಾಲ್ಟ್​ ಸೀ ಮತ್ತು ಸೀ ಆಫ್​ ಲಾಟ್ ಎಂದೂ ಕರೆಯುತ್ತಾರೆ. ಈ ಪ್ರದೇಶದಲ್ಲಿ ಜಲಮೂಲವು ಕಡಿಮೆ ಮಟ್ಟದಲ್ಲಿರುತ್ತದೆ. ಹಾಗೆಯೇ ಈ ಭೂಪ್ರದೇಶ ಕಡಿಮೆ ಎತ್ತರದಲ್ಲಿರುತ್ತದೆ. ಡೆಡ್​ಸೀ ನೀರು ಸಮುದ್ರದ ನೀರಿಗಿಂತ ಸುಮಾರು ಹತ್ತು ಪಟ್ಟು ಹೆಚ್ಚು ಉಪ್ಪಿನಿಂದ ಕೂಡಿರುತ್ತದೆ. ಯಾಕೆ ಹೀಗೆ, ಇದು ಹೀಗಿರಲು ಕಾರಣವೇನು?

ಹಿಂದೆ ಈ ಉಪ್ಪುನೀರಿನ ಸರೋವರವು ಮೆಡಿಟರೇನಿಯನ್ ಸಮುದ್ರದೊಂದಿಗೆ ಸಂಪರ್ಕ ಹೊಂದಿತ್ತು. ಆಫ್ರಿಕ ಮತ್ತು ಅರೇಬಿಯನ್ ಟೆಕ್ಟೋನಿಕ್ ಶಿಲಾಪದರಗಳು ಆಚೀಚೆ ಸರಿಯುವ ಘರ್ಷಣೆಯಲ್ಲಿ ಉಪ್ಪುನೀರಿನ ಸರೋವರಕ್ಕೆ ಮೆಡಿಟರೇನಿಯನ್ ಸಮುದ್ರದ ಸಂಪರ್ಕ ತಪ್ಪಿಹೋಯಿತು. ಹೀಗಾಗಿ ಇದು ನೆಲದ ಮಧ್ಯೆ ನಿಂತ ನೀರಿನ ನೆಲೆಯಾಯಿತು. ಸುತ್ತಲಿನ ಭೂಪ್ರದೇಶದಿಂದ ತಾಜಾ ಸಿಹಿ ನೀರು ಈ ಸರೋವರಕ್ಕೆ ಹರಿದುಬರುತ್ತದೆ. ಆದರೆ ಇಲ್ಲಿಗೆ ಬಂದ ನೀರು ಬೇರೆಲ್ಲಿಗೂ ಹರಿದು ಹೋಗಲು ಅವಕಾಶವಿಲ್ಲ. ಮರಳುಗಾಡಿನಲ್ಲಿ ಆವಿಯಾಗುವ ನೀರು ಉಪ್ಪಿನ ಅಂಶವನ್ನು ಇದ್ದಲ್ಲೇ ಉಳಿಸುವುದರಿಂದ ಮೃತ ಸಮುದ್ರದ ನೀರಿನ ಅಂಶ ಹೆಚ್ಚಾಗಿದೆ. ಲವಣಾಂಶ ಹೆಚ್ಚಾಗಿರುವುದರಿಂದ ಜೀವಿಗಳ ಉಳಿವಿಗೆ ವ್ಯತಿರಿಕ್ತ ಪರಿಸರ ನಿರ್ಮಾಣವಾಗಿದೆ.

ಡೆಡ್​ಸೀ ನಿಜವಾಗಲೂ ಮೃತಸಮುದ್ರವೆ? ಇದಕ್ಕೆ ಉತ್ತರ ಹೌದು! ಸಮುದ್ರ ಮಟ್ಟಕ್ಕಿಂತ 1412 ಅಡಿಗಳಷ್ಟು ಕೆಳಗಿರುವ ಕೋಬಾಲ್ಟ್-ನೀಲಿ ನೀರಿನಿಂದ ಡೆಡ್ ಸೀ ಮತ್ತು ಅದರ ಸುತ್ತಮುತ್ತಲೂ ಇರುವ ಪಕ್ಷಿ, ಮೀನು ಅಥವಾ ಸಸ್ಯಗಳು ಏನೊಂದೂ ಇಲ್ಲಿ ಕಂಡುಬರಲಾರವು. ಸ್ಫಟಿಕದಂತಹ ಸೋಡಿಯಂ ಕ್ಲೋರೈಡ್​ನ ಬಂಡೆಗಳು ಮತ್ತು ಮರಳು ಈ ನೀರಿನಂಚಿನಲ್ಲಿ ಹೊಳೆಯುತ್ತಿರುತ್ತವೆ. ಈ ಹಂತದಲ್ಲಿರುವಾಗಲೇ ಜುಡಿಯಾ ಪರ್ವತ ಮತ್ತು ಜೋರ್ಡಾನ್ ಪರ್ವತಗಳ ಮಧ್ಯೆ ಆನಂದದಾಯಕ ಕ್ಷಣಗಳನ್ನು ಕಳೆಯಲು ಪ್ರವಾಸಿಗರು ಇಲ್ಲಿ ಬರುತ್ತಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೂರ್ಯಸ್ನಾನಕ್ಕೆಂದೇ ಪ್ರವಾಸಿಗರು ಇಲ್ಲಿಗೆ ಭೇಟಿಕೊಡುತ್ತಾರೆ. ಮೊದಲು ಈ ಡೆಡ್​ಸೀಯ ನೀರಿನಲ್ಲಿ ತೇಲುತ್ತಾರೆ. ಜೊತೆಗೆ ಇಲ್ಲಿರುವ ಮಣ್ಣಿನೊಳಗೆ ದೇಹವನ್ನು ಹುಗಿದುಕೊಳ್ಳುತ್ತಾರೆ. ಈ ಪ್ರಕ್ರಿಯೆಯಿಂದ ದೇಹವು ಹೈಲುರಾನಿಕ್ ಆಮ್ಲ ಮತ್ತು ಇತರ ಖನಿಜಗಳನ್ನು ಹೀರಿಕೊಳ್ಳುತ್ತದೆ 

ಇನ್ನು ಈ ಡೆಡ್​ಸೀ ತೀರಗಳಲ್ಲಿ ಯಾವುದೇ ದೋಣಿಗಳು ಲಭ್ಯವಿರುವುದಿಲ್ಲ. ಏಕೆಂದರೆ ಇಲ್ಲಿ ಅಲೆಗಳೇಳುವಷ್ಟು ರಭಸದ ಹರಿವು ಇರುವುದಿಲ್ಲವೆಂದ ಮೇಲೆ ದೋಣಿ? ಹಾಗಾಗಿ ಇಲ್ಲಿ ಸದಾ ನಿಶ್ಯಬ್ದ. ಈ ಪರಿಸರವು ಯುಟೋಪಿಯನ್​ ಗ್ರಹದ ಯಾವುದೋ ಒಂದು ತಾಣದಂತೆ ಕಾಣುತ್ತದೆ. 

ಏನೆಲ್ಲ ಅದ್ಭುತ, ಅಚ್ಚರಿಗಳಿಂದ ನಮ್ಮ ಪ್ರಕೃತಿ ಕೂಡಿದೆಯಲ್ಲವೆ?

ವೈರಲ್​ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Wed, 28 September 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್