Viral: ಹೆದ್ದಾರಿಯಲ್ಲಿ ಸಖತ್ತಾಗಿ ಕಾರು ಚಲಾಯಿಸಿದ ತಾಯಿ; ಹೆಮ್ಮೆಯಿಂದ ವಿಡಿಯೋ ಶೇರ್‌ ಮಾಡಿದ ಮಗ

ವಯಸ್ಸಾದ ಮೇಲೆ ಕೆಲವೊಬ್ಬರು ಒಂದು ಹೆಜ್ಜೆ ನಡೆದಾಡಲು ಕೂಡಾ ಕಷ್ಟಪಡುತ್ತಾರೆ. ಅಂತದ್ರಲ್ಲಿ ಇಲ್ಲೊಬ್ರು ಅಜ್ಜಿ ಯಾವುದೇ ಭಯವಿಲ್ಲದೆ ತನ್ನ ಇಳಿ ವಯಸ್ಸಲ್ಲೂ ಹೆದ್ದಾರಿಯಲ್ಲಿ ಸಖತ್‌ ಆಗಿ ಕಾರು ಚಲಾಯಿಸಿದ್ದಾರೆ. ತಾಯಿ ಸಲೀಸಾಗಿ ಕಾರು ಓಡಿಸಿದ ವಿಡಿಯೋವನ್ನು ಮಗ ಹೆಮ್ಮೆಯಿಂದ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದು, ಈ ಹೃದಯಸ್ಪರ್ಶಿ ದೃಶ್ಯ ನೆಟ್ಟಿಗರ ಮನಗೆದ್ದಿದೆ.

Viral: ಹೆದ್ದಾರಿಯಲ್ಲಿ ಸಖತ್ತಾಗಿ ಕಾರು ಚಲಾಯಿಸಿದ ತಾಯಿ; ಹೆಮ್ಮೆಯಿಂದ ವಿಡಿಯೋ ಶೇರ್‌ ಮಾಡಿದ ಮಗ
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 09, 2025 | 1:06 PM

ಏಜ್‌ ಇಸ್ ಜಸ್ಟ್‌ ಎ ನಂಬರ್‌, ವಯಸ್ಸು ದೇಹಕ್ಕೆ ಆಗುವುದೇ ಹೊರತು ಮನಸ್ಸಿಗಲ್ಲ, ಜೀವನೋತ್ಸಾಹಕ್ಕಲ್ಲ ಎಂದು ಹೇಳ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವಂತಹ ಕೆಲವೊಂದು ದೃಶ್ಯಗಳನ್ನು ನೋಡಿದಾಗ ಈ ಮಾತು ಅಕ್ಷರಶಃ ನಿಜವೆಂದು ಭಾಸವಾಗುತ್ತದೆ. ಹೀಗೆ ಡ್ಯಾನ್ಸ್‌, ಹಾಡು ಹಾಗೂ ಇನ್ನಿತರ ಟ್ಯಾಲೆಂಟ್‌ಗಳ ಮೂಲಕ ಹಾಗೂ ಜೀವನೋತ್ಸಾಹದ ಮೂಲಕ ಗಮನ ಸೆಳೆದಂತಹ ಅದೆಷ್ಟೋ ವೃದ್ಧರಿದ್ದಾರೆ. ಅದೇ ರೀತಿ ಇಲ್ಲೊಬ್ರು ಅಜ್ಜಿ ಸಲೀಸಾಗಿ ಕಾರು ಚಲಾಯಿಸುವ ಮೂಲಕ ಇದೀಗ ಸಖತ್‌ ಸುದ್ದಿಯಲ್ಲಿದ್ದಾರೆ. ಹೌದು ಅವರು ಯಾವುದೇ ಭಯವಿಲ್ಲದೆ ಹೆದ್ದಾರಿಯಲ್ಲಿ ಯುವಕರನ್ನೇ ಮೀರಿಸುವಂತೆ ಸಖತ್ತಾಗಿ ಕಾರ್‌ ಓಡಿಸಿದ್ದು, ಈ ಹೃದಯಸ್ಪರ್ಶಿ ದೃಶ್ಯ ನೆಟ್ಟಿಗರ ಮನಗೆದ್ದಿದೆ.

ಪಾಕಿಸ್ತಾನ ಮೂಲದ ಡಿಜಿಟಲ್‌ ಕ್ರಿಯೆಟರ್‌ (kingofchilas) ಮಜಿದ್‌ ಅಲಿ ತಮ್ಮ ತಾಯಿ ಇಳಿ ವಯಸ್ಸಲ್ಲೂ ಯುವಕರನ್ನೇ ಮೀರಿಸುವಂತೆ ಕಾರು ಚಲಾಯಿಸಿದಂತಹ ಮುದ್ದಾದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by Majid Ali (@kingofchilas)

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಅಜ್ಜಿಯೊಬ್ಬರು ತಮ್ಮ ಇಳಿವಯಸ್ಸಿನಲ್ಲೂ ಯಾವುದೇ ಭಯವಿಲ್ಲದೆ ಯುವಕರಿಗಿಂತ ನಾನೇನು ಕಮ್ಮಿಯಿಲ್ಲ ಎನ್ನುತ್ತಾ ಹೆದ್ದಾರಿಯಲ್ಲಿಯೇ ಸಖತ್ತಾಗಿ ಕಾರು ಚಲಾಯಿಸುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಸೀಟಿಗಾಗಿ ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಬ್ಬರ ನಡುವೆ ನಡೆಯಿತು ಜಡೆ ಜಗಳ; ವಿಡಿಯೋ ವೈರಲ್‌

ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 29.3 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನು ಸೈಕಲ್‌ ಓಡಿಸಲು ಕೂಡಾ ಹೆದರುತ್ತೇನೆ, ಈ ಅಜ್ಜಿ ನೋಡಿ ಎಷ್ಟು ಸಲೀಸಾಗಿ ಕಾರು ಓಡಿಸುತ್ತಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ತಾಯಿಗೆ ನನ್ನದೊಂದು ಸಲಾಂʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್