ಓಹ್ ಕಾರು! ಎಲ್ಲಿಗೆ ಹೋಗ್ತಿದೀವಿ? ಸ್ಕ್ಯಾನಿಂಗ್ಗೆ, ಕಿಮೋಥೆರಪಿಗೆ, ಸರ್ಜರಿಗೆ…
World Cancer Day 2023; ಆಹಾ ಗೋಡೆಗಳ ಮೇಲೆ ಎನಿಮೇಟೆಡ್ ಕಾರ್ಟೂನ್ಗಳು, ಮೆಲುವಾದ ಸಂಗೀತ, ಓಡಾಡೋದಕ್ಕೆ ಈ ಮಿನಿ ಎಲೆಕ್ಟ್ರಿಕ್ ಕಾರುಗಳು. ಮಕ್ಕಳಿಗೆ ಇನ್ನೇನು ಬೇಕು! ಮಕ್ಕಳೆಂದರೆ ಈ ಕ್ಯಾನ್ಸರ್ ಪೀಡಿತ ಮಕ್ಕಳಿಗೆ... ಬನ್ನಿ ಟರ್ಕಿಗೆ.
Viral Video : ಒಮ್ಮೆಯಾದರೂ ಕ್ಯಾನ್ಸರ್ (Cancer) ಪೀಡಿತ ಮಕ್ಕಳ ವಾರ್ಡ್ಗೆ ಹೋಗಿ ಬಂದಿದ್ದೀರಾ? ಜೀವನದ ನಿಮ್ಮ ಸಾಕಷ್ಟು ಸಮಸ್ಯೆಗಳಿಗೆ ಮೌನದಲ್ಲಿಯೇ ಅಲ್ಲಿ ಉತ್ತರಗಳು ಸಿಗುತ್ತವೆ. ಆ ಮಕ್ಕಳ ಒದ್ದಾಟ, ಹೆತ್ತವರ ಸಂಕಟ, ವೈದ್ಯರುಗಳ ಸವಾಲುಗಳು, ಅಸಹಾಯಕತೆ, ನೋವು ಎಲ್ಲದರ ಮಧ್ಯೆ ಭರವಸೆ ಕಳೆದುಕೊಳ್ಳದ ಆಸೆಯ ಎಳೆ… ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಟರ್ಕಿಯ ಕಾಯ್ಸೇರಿ ಆಸ್ಪತ್ರೆಯೊಂದು ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಆಸ್ಪತ್ರೆಯಂಗಳದೊಳಗೆ ಓಡಾಡಲು ಮಿನಿ ಕಾರುಗಳ ವ್ಯವಸ್ಥೆ ಮಾಡಿದೆ. ನೆಟ್ಟಿಗರು ಹೃದಯಸ್ಪರ್ಶಿಯಾದ ಈ ವಿಡಿಯೋ ನೋಡಿ ಮಮ್ಮಲ ಮರಗುತ್ತಿದ್ದಾರೆ.
(VIDEO) Turkish hospital gives children electric cars to drive to cancer treatment
ಇದನ್ನೂ ಓದಿAt a hospital in Turkish city of Kayseri, children with cancer can get on mini battery-operated cars, instead of a stretcher, to go to their treatment room pic.twitter.com/0GjmsKeTac
— ANADOLU AGENCY (@anadoluagency) February 1, 2023
ಇಂತಹ ಭಯಂಕರ ಕಾಯಿಲೆಗೆ ಮಕ್ಕಳು ತುತ್ತಾದಾಗ ಎದುರಿಗೆ ಇರುವುದು ಏನು? ಚಿಕಿತ್ಸೆ ಮತ್ತು ದೇವರ ಮೊರೆ. ಒಂದಾದ ಮೇಲೊಂದು ಪರೀಕ್ಷೆ, ಚಿಕಿತ್ಸೆ ಅಂತೆಲ್ಲ ಓಡಾಡುವುದು ಮುಗಿಯದ ಮಾತು. ಈ ಎಲ್ಲ ಓಡಾಟ, ಒದ್ದಾಟದ ಮಧ್ಯೆ ಮಕ್ಕಳ ಕಣ್ಣಲ್ಲಿರುವ ಭಾವ ಯಾರನ್ನೂ ಹಿಂಡಿಬಿಡುತ್ತದೆ. ಎಲ್ಲ ನೋವಿನ ಮಧ್ಯೆಯೇ ಮಕ್ಕಳು ತುಸು ಗೆಲುವಿನಿಂದ ಇರಲಿ ಎಂಬ ಕಾರಣಕ್ಕೆ ಟರ್ಕಿಯ ಈ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಬದಲಾಗಿ ಎಲೆಕ್ಟ್ರಿಕ್ ಮಿನಿ ಕಾರುಗಳನ್ನು ಮಕ್ಕಳಿಗಾಗಿ ಮೀಸಲಿಡಲಾಗಿದೆ.
ಇದನ್ನೂ ಓದಿ : ಸಂಗೀತ ರಸ್ತೆ; ನಿಗದಿತ ವೇಗದಲ್ಲಿ ಚಲಿಸಿದರೆ ಈ ರಸ್ತೆಗಳು ಹಾಡುತ್ತವೆ, ನೋಡಿ ವಿಡಿಯೋ
ಬಲೂನೆಂದರೆ ಮಕ್ಕಳಿಗೆ ಇನ್ನಿಲ್ಲದ ನಂಟು. ಮಕ್ಕಳ ಎಂಥ ನೋವನ್ನೂ ಮರೆಸುವ ಶಕ್ತಿ ಈ ಉಸಿರುಪುಗ್ಗೆಗಳಿಗಿವೆ. ಆ ಬಣ್ಣಬಣ್ಣದ ಬಲೂನುಗಳನ್ನು ನೋಡುತ್ತಲೇ ಮಕ್ಕಳು ಚಿಕಿತ್ಸೆಯ ಕೊಠಡಿಗೆ ಆ ಕಾರುಗಳಲ್ಲಿ ಹೋಗಬೇಕು. ಹಾಗೆ ಹೋಗುತ್ತಲೇ ಚಿಕಿತ್ಸೆಗಾಗಿ ಟೇಬಲ್ ಮೇಲೆ ಅವು ಮಲಗಬೇಕು. ಮುಂದಿನದನ್ನು ಹೇಳಲು ಪದಗಳಿಲ್ಲ. ಮತ್ತೆ ಚಿಕಿತ್ಸೆಯಿಂದ ಅದೇ ಕಾರಲ್ಲಿ ಮರಳಿ ವಾರ್ಡ್ಗೆ ಬಂದಾಗ ಗೋಡೆಯ ಮೇಲೆ ಎನಿಮೇಟೆಡ್ ವಾಲ್ಪೇಪರ್ಗಳು ನೋವನ್ನು ಮರೆಸಲು ಸಹಾಯ ಮಾಡುತ್ತವೆ. ಆ ಗೋಡೆಗಳಿಂದ ಮಧುರವಾದ ಸಂಗೀತ ಅಲ್ಲಿಂದ ಹೊಮ್ಮಿಬರುತ್ತಿರುತ್ತದೆ.
ಇದನ್ನೂ ಓದಿ : ಬೈಕ್ ಮೇಲೆ ಬೆಕ್ಕಿನ ಸವಾರಿ ಆಯಿತು ಈಗ ಕಾರ್ ಮೇಲೆ ನಾಯಿಯ ಸರದಿ; ಆಕ್ರೋಶಗೊಂಡ ನೆಟ್ಮಂದಿ
ಈಗಾಗಲೇ ಈ ವಿಡಿಯೋ ಅನ್ನು ಸುಮಾರು 3,000 ಜನರು ನೋಡಿದ್ದಾರೆ. ಇಂಥ ಮಕ್ಕಳನ್ನು ಆದಷ್ಟು ಖುಷಿಯಾಗಿಡುವ ಆಲೋಚನೆಯನ್ನು ಮಾಡಿ, ಇಂಥ ವ್ಯವಸ್ಥೆ ರೂಪಿಸಿರುವ ಆಸ್ಪತ್ರೆ ನಿಜಕ್ಕೂ ಮಾದರಿ ಎಂದು ನೆಟ್ಟಿಗರು ಶ್ಲಾಘಸಿದ್ದಾರೆ. ಹಾಗೆಯೇ ಇಲ್ಲಿರುವ ಎಲ್ಲ ಮಕ್ಕಳೂ ಬೇಗ ಹುಷಾರಾಗಲೆಂದು ಪ್ರಾರ್ಥಿಸುತ್ತಿದ್ದಾರೆ.
ಓಡಿಹೋಗು ಕ್ಯಾನ್ಸರ್ ಗುಮ್ಮಾ ಪ್ಲೀಸ್…
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:14 pm, Fri, 3 February 23