ಬೈಕ್ ಮೇಲೆ ಬೆಕ್ಕಿನ ಸವಾರಿ ಆಯಿತು ಈಗ ಕಾರ್ ಮೇಲೆ ನಾಯಿಯ ಸರದಿ; ಆಕ್ರೋಶಗೊಂಡ ನೆಟ್ಮಂದಿ
Bengaluru : ಈ ಕಾರಿನ ನಂಬರ್ ಕಾಣುವಂತಿದೆ. ಬೆಂಗಳೂರು ಪೊಲೀಸರು ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು; ವಿಡಿಯೋ ನೋಡಿದ ನೆಟ್ಟಿಗರು ಬೆಂಗಳೂರು ಪೊಲೀಸ್ ಇಲಾಖೆಯನ್ನು ಟ್ಯಾಗ್ ಮಾಡುತ್ತಿದ್ಧಾರೆ.
Viral Video : ಕಳೆದ ತಿಂಗಳು ಒಬ್ಬಾತ ಬೆಂಗಳೂರು ಹೊರವಲಯದ ಹೆದ್ದಾರಿಯಲ್ಲಿ ಬೈಕ್ ಮೇಲೆ ತನ್ನೆರಡೂ ಬೆಕ್ಕುಗಳನ್ನು ರಾತ್ರಿಹೊತ್ತು ಕರೆದೊಯ್ದ ವಿಡಿಯೋ ನೋಡಿದ್ದು ನಿಮಗೆಲ್ಲ ನೆನಪಿರಬಹುದು. ನೆಟ್ಟಿಗರೆಲ್ಲಾ ಸರಿಯಾಗಿ ಬಯ್ದಿದ್ದರು. ಬೆಕ್ಕುಗಳ ಪ್ರಾಣಕ್ಕೆ ಅಪಾಯ ಒಡ್ಡುವ ಇಂಥ ಸಾಹಸ ಬೇಡ ಎಂದು ಬುದ್ಧಿ ಹೇಳಿದ್ದರು. ಇದೀಗ ಬೆಂಗಳೂರಿನಲ್ಲಿಯೇ ಇಂಥದೇ ಮತ್ತೊಂದು ಪ್ರಕರಣ ಮರುಕಳಿಸಿದೆ. ಆದರೆ ಬೈಕ್ ಬದಲಾಗಿ ಇಲ್ಲಿ ಕಾರ್ ಇದೆ. ಬೆಕ್ಕಿನ ಬದಲಾಗಿ ಇಲ್ಲಿ ನಾಯಿಯಿದೆ.
Just Bengaluru things ??? pic.twitter.com/Taaf18tzoL
ಇದನ್ನೂ ಓದಿ— Forever Bengaluru ?❤️ (@ForeverBLRU) February 2, 2023
1.26 ಲಕ್ಷ ಜನ ಈ ವಿಡಿಯೋ ನೋಡಿದ್ದಾರೆ. ನೂರಾರು ಜನರು ಆಕ್ರೋಶಗೊಂಡಿದ್ದಾರೆ. ವೇಗವಾಗಿ ಓಡುತ್ತಿರುವ ಕಾರಿನ ಮೇಲೆ ನಾಯಿ ಹೇಗೆ ಕುಳಿತುಕೊಳ್ಳಬೇಕು? ಅದಕ್ಕೆ ಭಯವಾಗುವುದಿಲ್ಲವಾ? ಜೀವಕ್ಕೆ ಅಪಾಯ ಅಲ್ಲವಾ? ಇನ್ನೊಬ್ಬರಿಗೆ ಹುಚ್ಚು ಸಾಹಸಿಂದ ತೊಂದರೆ ಆಗುವುದಿಲ್ಲವಾ ಎಂದೆಲ್ಲ ಕೇಳುತ್ತಿದ್ದಾರೆ.
ಇದನ್ನೂ ಓದಿ : ಹುಲಿ ಬಂದೀತಮ್ಮಾ; ಚಳಿಗೆ ಚಹಾ ಬೇಕಾಯ್ತೇನೋ ತಮ್ಮಾ
ಎಲ್ಲವೂ ತಮಾಷೆ ಮಾಡಲಾಗದು ಎಲ್ಲವನ್ನೂ ಸಾಹಸದಂತೆ ನೋಡಬಾರದು. ಇಂಥದ್ದನ್ನು ಲೈಕ್, ರೀಟ್ವೀಟ್ ಮಾಡಿ ಬೆಂಬಲಿಸಬೇಡಿ ಎಂದಿದ್ಧಾರೆ ಹಲವರು. ಕಾರಿನ ಸಂಖ್ಯೆ ಕಾಣುವಂತಿದೆ. ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಬೇಕು. ಈತ ನಾಯಿಯ ಜೀವಕ್ಕೆ ಅಪಾಯ ತಂದಿಡುತ್ತಿದ್ದಾನೆ. ಇದು ಕ್ರೌರ್ಯ ಎಂದು ಬೆಂಗಳೂರು ಸಿಟಿ ಪೊಲೀಸರನ್ನು ಅನೇಕರು ಟ್ಯಾಗ್ ಮಾಡಿದ್ದಾರೆ.
ಇದನ್ನೂ ನೋಡಿ : ನಿನ್ನನ್ನು ಬಿಟ್ಟುಕೊಡಲೊಲ್ಲೇ ಅಕ್ಕಾ; ವೈರಲ್ ಆಗುತ್ತಿರುವ ನಾಯಿಯ ಈ ವಿಡಿಯೋ
ಕೆಲವರು ನೋಡಲು ಮೋಜೆನ್ನಿಸುತ್ತಿದೆ ಎಂದಿದ್ದಾರೆ. ಇದು ಹೇಗೆ ಮೋಜು ಎಂದು ಕುಪಿತಗೊಂಡಿದ್ದಾರೆ ಹಲವರು. ಬೆಂಗಳೂರಿನ ವಿಜಯನಗರಕ್ಕೆ ಬನ್ನಿ, ಕಾರಿನ ಮೇಲೆ ನಾಯಿಗಳು ಮಲಗಿರುತ್ತವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನಾಯಿಗಳಿಗೆ ಮಾತನಾಡಲು ಬರುವುದಿಲ್ಲವೆಂದು ಮನಬಂದಂತೆ ಅವುಗಳನ್ನು ನಡೆಸಿಕೊಳ್ಳಬೇಡಿ, ಇದು ಕ್ರೌರ್ಯ ಎಂದಿದ್ದಾರೆ ಅನೇಕರು. ಜನ ಯಾಕೆ ಹೀಗೆ ತಿಳಿವಳಿಕೆ ಇಲ್ಲದೆ ವರ್ತಿಸುತ್ತಾರೋ ಏನೊ. ನಿಜಕ್ಕೂ ಇದು ಬಹಳ ಬೇಸರ ತರಿಸುವಂಥ ವಿಡಿಯೋ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:30 pm, Fri, 3 February 23