ಸಂಗೀತ ರಸ್ತೆ; ನಿಗದಿತ ವೇಗದಲ್ಲಿ ಚಲಿಸಿದರೆ ಈ ರಸ್ತೆಗಳು ಹಾಡುತ್ತವೆ, ನೋಡಿ ವಿಡಿಯೋ

Musical Road : ಇದು ಹಂಗೇರಿಯ ಹಾಡುವ ರಸ್ತೆ. ನಿರ್ದಿಷ್ಟ ವೇಗದಲ್ಲಿ ಚಲಿಸಿದರೆ ಇದು ಹಂಗೇರಿಯನ್​ ಜಾನಪದ ಹಾಡನ್ನು ಹಾಡುತ್ತದೆ. ನೆಟ್ಟಿಗರು ಅವರವರ ದೇಶದಲ್ಲಿಯೂ ಇಂಥ ರಸ್ತೆಗಳಿವೆ ಎನ್ನುತ್ತಿದ್ದಾರೆ. ನಮ್ಮ ದೇಶದಲ್ಲಿ?

ಸಂಗೀತ ರಸ್ತೆ; ನಿಗದಿತ ವೇಗದಲ್ಲಿ ಚಲಿಸಿದರೆ ಈ ರಸ್ತೆಗಳು ಹಾಡುತ್ತವೆ, ನೋಡಿ ವಿಡಿಯೋ
ಹಂಗೇರಿಯ ಸಂಗೀತ ರಸ್ತೆ
Follow us
|

Updated on:Feb 03, 2023 | 4:25 PM

Viral Video : ಸಂಚಾರಿ ನಿಯಮಗಳು ಗೊತ್ತಿದ್ದರೂ ಒಮ್ಮೊಮ್ಮೆ ನಿಗದಿತ ವೇಗವನ್ನು ಮೀರಿ ವಾಹನ ಚಲಿಸಿಬಿಡುತ್ತೀರಿ. ಇದು ನಿಮಗೆ ಅರಿವಿಗೆ ಬರುವುದು ಮುಂದೆ ನಿಮ್ಮನ್ನು ಎದುರುಗೊಳ್ಳಲು, ಎದುರುಗೊಂಡು ದಂಡ ಹಾಕಲು ಪೊಲೀಸರು ಕಾಯುತ್ತ ನಿಂತಾಗಲೇ. ಆಗ ಉಂಟಾಗುವ ಪ್ರಕ್ಷುಬ್ಧ ವಾತಾವರಣ ನಿಮ್ಮ ಆ ದಿನದ ಮೂಡ್​ ಹಾಳು ಮಾಡಿಬಿಡುತ್ತದೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಹಂಗೇರಿಯಲ್ಲಿ ಎರಡು ವರ್ಷಗಳ ಹಿಂದೆ ನಿರ್ಮಾಣವಾದ ಸಂಗೀತ ರಸ್ತೆ (Musical Road, Hungary) ಇದು. ರಸ್ತೆಯ ಬಲಬದಿಯ ಟ್ರ್ಯಾಕ್​ನಲ್ಲಿ ಚಲಿಸಲು ಶುರು ಮಾಡುತ್ತಿದ್ದಂತೆ ರಸ್ತೆಯು ಹಂಗೇರಿಯನ್​ನ ಜಾನಪದ ಹಾಡನ್ನು ವಾದ್ಯರೂಪದಲ್ಲಿ ಹೊಮ್ಮಿಸಲು ಶುರುಮಾಡಿಬಿಡುತ್ತದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹಂಗೇರಿಯ ಈಶಾನ್ಯ ಭಾಗಕ್ಕಿರುವ ರಸ್ತೆ-37 ಇದು. ದ್ರಾಕ್ಷಿತೋಟದ ಮಧ್ಯದಲ್ಲಿ ಸುಂದರವಾದ ಈ ರಸ್ತೆ ಹಾದು ಹೋಗಿದೆ. ಈ ಹಾಡು ಕೇಳಬೇಕೆಂದರೆ ಕಿ.ಮೀ ಗೆ 80ರ ವೇಗದಲ್ಲಿ ರಸ್ತೆಯ ಬಲಬದಿಗೆ ಚಲಿಸಬೇಕು. ವಾಹನಗಳ ಗಾಲಿಗಳ ಸ್ಪರ್ಶದಿಂದ ರಸ್ತೆಯಲ್ಲಿ ಅಳವಡಿಸಿರುವ ಯಂತ್ರ ವಾದ್ಯಸಂಗೀತದಲ್ಲಿ ಹಂಗೇರಿಯನ್ ಜಾನಪದ ಹಾಡನ್ನು ನುಡಿಸಲಾರಂಭಿಸುತ್ತದೆ. ಸುಮಾರು ಐನೂರು ಮೀಟರುಗಳ ದೂರದ ತನಕ ಈ ಹಾಡನ್ನು ಕೇಳಬಹುದಾಗಿದೆ.

ಇದು ಜೋಗುಳದಂತಿದೆ, ಡ್ರೈವ್ ಮಾಡುವಾಗ ನಿದ್ದೆ ಬರುವುದು ಗ್ಯಾರಂಟಿ ಎಂದಿದ್ಧಾರೆ ಒಬ್ಬರು. ಇದೇ ರಸ್ತೆಯಲ್ಲಿ ನಾನು 250 ವೇಗದಲ್ಲಿ ಹೊರಟಿದ್ದೇನೆ ನೋಡಿ ಎಂದು ಇನ್ನೊಬ್ಬರು ವಿಡಿಯೋ ಟ್ವೀಟ್ ಮಾಡಿದ್ದಾರೆ. ನೆದರ್​​ಲ್ಯಾಂಡ್​​ನ ರಸ್ತೆಯೊಂದರಲ್ಲಿ ಸಾಗುವಾಗ 40-60 ವೇಗವನ್ನು ಮೀರಿದರೆ ಆ ರಸ್ತೆ ಕೂಡ ಜಾನಪದ ಹಾಡನ್ನು ಹಾಡುತ್ತದೆ ಎಂದು ನೆಟ್ಟಿಗರೊಬ್ಬರು ಫೋಟೋ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ‘ಚಹಾ ಮಾಡಬಾರದು’ ಎನ್ನುವುದನ್ನು ಕಲಿಯುತ್ತಿದ್ದೇನೆ; ಹಿಮಾಲಯದ ಮಹಿಳೆಯ ಈ ನಿರ್ಧಾರದ ಹಿಂದಿನ ಕಥೆ ಇಲ್ಲಿದೆ

ಜಪಾನಿನಲ್ಲಿ ನಿಗದಿತ ವೇಗದಲ್ಲಿ ಚಲಿಸಿದರೆ ಹೀಗೆ ರಸ್ತೆಯಿಂದ ಸಂಗೀತ ಹೊಮ್ಮುತ್ತದೆ ಎಂದು ಮತ್ತೊಬ್ಬರೂ ವಿಡಿಯೋ ಟ್ವೀಟ್ ಮಾಡಿದ್ದಾರೆ. ಇದೆಲ್ಲ ಮೊದಲ ಸಲವಷ್ಟೇ ರೋಮಾಂಚನ ಕೊಡುತ್ತದೆ ಆದರೆ ನಂತರ ಕಿರಿಕಿರಿ ಎನ್ನಿಸುತ್ತದೆ ಎಂದು ಅನೇಕರು ಹೇಳಿದ್ದಾರೆ. ಎಲ್ಲರೂ ಅವರವರ ದೇಶಗಳ ರಸ್ತೆಗಳಿಂದ ಹೊಮ್ಮಿರುವ ಸಂಗೀತದ ಬಗ್ಗೆ ಹೇಳಿದ್ಧಾರೆ. ಭಾರತೀಯರು ಏನು ಹೇಳಲು ಸಾಧ್ಯ?

ಇದನ್ನೂ ಓದಿ : ಹುಲಿ ಬಂದೀತಮ್ಮಾ; ಚಳಿಗೆ ಚಹಾ ಬೇಕಾಯ್ತೇನೋ ತಮ್ಮಾ

ಪ್ರಯಾಣ ಆದಷ್ಟು ಸುಗಮವಾಗಿರಬೇಕು. ಅದಕ್ಕೆ ಬೇಕಾದ ಸೌಲಭ್ಯವನ್ನು ಸೃಷ್ಟಿಸಿಕೊಳ್ಳಬೇಕು. ಆಲೋಚನೆ, ಸೃಜನಶೀಲತೆ ಇದ್ದಲ್ಲಿ ಯಾವ ನಿಯಮವೂ ತನ್ನಿಂತಾನೇ ಶಿಸ್ತಿಗೆ ಒಳಪಡುತ್ತದೆ. ವಿವೇಚನಾರಹಿತ ನಿಯಂತ್ರಣ ಮತ್ತು ನಿಯಮಗಳು ಸದಾ ಕ್ಷೋಭೆಗೆ ತಳ್ಳುತ್ತವೆ.

ಈಗ ಹೇಳಿ, ಇಂಥ ರಸ್ತೆಗಳು ಭಾರತಕ್ಕೆ ಬೇಕೆ, ನೀವೇನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:20 pm, Fri, 3 February 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ