Viral News: ನನ್ನ ಹೊಸ ಬ್ಯಾಡ್ಮಿಂಟನ್ ಹೀರೋ ಲಕ್ಷ್ಯ ಸೇನ್ : ವೈರಲ್ ಆಗುತ್ತಿದೆ ಸುನಿಲ್ ಗವಾಸ್ಕರ್ ಈ ಫೋಟೋ

ಕ್ರಿಕೆಟ್ ಲೋಕದ ದಿಗ್ಗಜ ಸುನಿಲ್ ಗವಾಸ್ಕರ್ ಅವರು ಗುರುವಾರ ಬ್ಯಾಡ್ಮಿಂಟನ್ ಖ್ಯಾತ ಆಟಗಾರ ಲಕ್ಷ್ಯ ಸೇನ್ ಅವರನ್ನು ಭೇಟಿ ಮಾಡಲು ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಗೆ (PPBA) ಭೇಟಿ ನೀಡಿದರು.

Viral News: ನನ್ನ ಹೊಸ ಬ್ಯಾಡ್ಮಿಂಟನ್ ಹೀರೋ ಲಕ್ಷ್ಯ ಸೇನ್ : ವೈರಲ್ ಆಗುತ್ತಿದೆ ಸುನಿಲ್ ಗವಾಸ್ಕರ್ ಈ ಫೋಟೋ
Lakshya Sen, Sunil GavaskarImage Credit source: TV9 kannada
Follow us
ಅಕ್ಷಯ್​ ಪಲ್ಲಮಜಲು​​
|

Updated on:Feb 04, 2023 | 10:32 AM

1983ರ ವಿಶ್ವಕಪ್ ವಿಜೇತ,  ಕ್ರಿಕೆಟ್ ಲೋಕದ ದಿಗ್ಗಜ ಸುನಿಲ್ ಗವಾಸ್ಕರ್ (Sunil Gavaskar) ಅವರು ಗುರುವಾರ ಬ್ಯಾಡ್ಮಿಂಟನ್ ಯುವ ಆಟಗಾರ ಲಕ್ಷ್ಯ ಸೇನ್ (Lakshya Sen) ಅವರನ್ನು ಭೇಟಿ ಮಾಡಲು ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಗೆ (PPBA) ಭೇಟಿ ನೀಡಿದರು. ಅವರು ಬೆಂಗಳೂರಿನಲ್ಲಿ ಸಭೆ ನಡೆಸಿ ಮತ್ತು ಅಕಾಡೆಮಿಯ ಯುವ ಮಹತ್ವಾಕಾಂಕ್ಷಿ ಯುವಕರನ್ನು ಭೇಟಿ ಮಾಡಿದ್ದಾರೆ. ಬ್ಯಾಡ್ಮಿಂಟನ್ ಮತ್ತು ಕ್ರಿಕೆಟ್ ಎರಡನ್ನು ಅವರ ನೆಚ್ಚಿನ ಕ್ರೀಡೆಗಳು. ಅವರು ಸುಮಾರು ಒಂದು ಗಂಟೆ ನಮ್ಮೊಂದಿಗೆ ಇಲ್ಲಿ ಇದ್ದರು,” ವಿಮಲ್ ಕುಮಾರ್, ಸಹ ಸಂಸ್ಥಾಪಕ, ನಿರ್ದೇಶಕ ಮತ್ತು PPBA ಮುಖ್ಯ ತರಬೇತುದಾರ, PTI ಗೆ ತಿಳಿಸಿದರು. ಈ ಬಗ್ಗೆ ಗವಾಸ್ಕರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷ್ಯ ಸೇನ್ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ “ನನ್ನ ಹೊಸ ಬ್ಯಾಡ್ಮಿಂಟನ್ ಹೀರೋ ಲಕ್ಷ್ಯ ಸೇನ್ ಎಂದು ಬರೆದುಕೊಂಡಿದ್ದಾರೆ.

ಇಂತಹ ದೊಡ್ಡ ವ್ಯಕ್ತಿಗಳಿಂದ ಇಂತಹ ಮಾತುಗಳನ್ನು ಕೇಳಲು ಸಂತೋಷವಾಗುತ್ತದೆ. ಇವರು ನಮಗೆ ಮಾದರಿ, ಎಂದು ಲಕ್ಷ್ಯ ಸೇನ್ ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದಾರೆ. 21ರ ಹರೆಯದ ಲಕ್ಷ್ಯ ಸೇನ್ 2022ರ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಇಂಡಿಯಾ ಓಪನ್‌ನಲ್ಲಿ ಚಿನ್ನ ಗೆದ್ದಿದ್ದರು. ಅವರು ಐತಿಹಾಸಿಕ ಥಾಮಸ್ ಕಪ್ ವಿಜೇತರು. ಅವರು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪಡೆದರು ಮತ್ತು 2021 ರ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತರಾಗಿದ್ದಾರೆ.

ಇದನ್ನೂ ಓದಿ: ‘ಪಾಕ್ ಮಣಿಸಿದ ತಂಡವನ್ನು ಹಗುರವಾಗಿ ಪರಿಗಣಿಸಬೇಡಿ’; ರೋಹಿತ್ ಪಡೆಗೆ ಸಲಹೆ ನೀಡಿದ ಗವಾಸ್ಕರ್

ಗಾವಸ್ಕರ್ ಸರ್ ಥಾಮಸ್ ಕಪ್ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ನಾನು ಅವರ ಬಗ್ಗೆ ನನ್ನ ಪೋಷಕರು ಮತ್ತು ಬಂಧುಗಳಿಂದ ಕೇಳಿದ್ದೇನೆ. ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರರೊಂದಿಗೆ ಗವಾಸ್ಕರ್ ಏನು ಚರ್ಚಿಸಿದ್ದಾರೆ ಎಂದು ಕೇಳಿದಾಗ, ವಿಮಲ್ ಅವರು ಯುವಕರಿಗೆ ಕೆಲವು ಸಲಹೆಗಳನ್ನು ನೀಡಿದರು, ತರಬೇತಿಯ ಅತ್ಯುತ್ತಮ ಫಲಿತಾಂಶ ಪಡೆಯಬೇಕಾದರೆ ಪ್ರತಿದಿನ ಪ್ರಯತ್ನ ಅಗತ್ಯ ಎಂದು ಹೇಳಿದ್ದಾರೆ.

Published On - 10:32 am, Sat, 4 February 23