ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 46 ಮತ್ತು ಟೆಸ್ಟ್‌ನಲ್ಲಿ 27 ಶತಕಗಳನ್ನು ಬಾರಿಸಿದ್ದಾರೆ. ಮುಂದಿನ ಐದು-ಆರು ವರ್ಷಗಳ ಕಾಲ ಅವರು ಆಡಿದರೆ, ಶತಕಗಳ ಶತಕ ಸಿಡಿಸುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಒಂದು ವರ್ಷದಲ್ಲಿ ಅವರು 6 ಶತಕಗಳ ಸರಾಸರಿ ಹೊಂದಿದ್ದಾರೆ. ಹಾಗಾಗಿ 40 ವರ್ಷದವರೆಗೆ ಆಡಿದ್ರೆ ಅವರು ಸುಲಭವಾಗಿ ಮುಂದಿನ 26 ಶತಕಗಳನ್ನು ಗಳಿಸಬಹುದು ಎಂದು ಲಿಟಲ್ ಮಾಸ್ಟರ್ ಅಭಿಪ್ರಾಯಪಟ್ಟಿದ್ದಾರೆ.