‘ಪಾಕ್ ಮಣಿಸಿದ ತಂಡವನ್ನು ಹಗುರವಾಗಿ ಪರಿಗಣಿಸಬೇಡಿ’; ರೋಹಿತ್ ಪಡೆಗೆ ಸಲಹೆ ನೀಡಿದ ಗವಾಸ್ಕರ್
T20 World Cup 2022: ಪಾಕಿಸ್ತಾನವನ್ನು ಸೋಲಿಸಿದ ನಂತರ ಜಿಂಬಾಬ್ವೆ ಆಟಗಾರರ ಆತ್ಮವಿಶ್ವಾಸ ಹೆಚ್ಚಾಗಿದೆ. ಹಾಗಾಗಿ ಜಿಂಬಾಬ್ವೆ ತಂಡ ತಮ್ಮ ವಿರುದ್ಧ ಆಡುವಾಗ ಟೀಂ ಇಂಡಿಯಾ ಹೆಚ್ಚು ಎಚ್ಚರಿಕೆಯಿಂದ ಆಡಬೇಕು ಎಂದು ಗವಾಸ್ಕರ್ ಕಿವಿಮಾತು ಹೇಳಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ (T20 World Cup 2022) ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ. ಹೀಗಾಗಿ ಈ ಬಾರಿಯ ವಿಶ್ವಕಪ್ ಅನ್ನು ಟೀಂ ಇಂಡಿಯಾ (Team India) ಗೆಲ್ಲಬಹುದು ಎಂಬ ವಿಶ್ವಾಸದಲ್ಲಿ ಅಭಿಮಾನಿಗಳು ಬೀಗುತ್ತಿದ್ದಾರೆ. ಪಾಕಿಸ್ತಾನ ವಿರುದ್ಧದ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದರೆ, ನೆದರ್ಲೆಂಡ್ಸ್ ವಿರುದ್ಧದ ಎರಡನೇ ಪಂದ್ಯದಲ್ಲೂ ಟೀಂ ಇಂಡಿಯಾ 56 ರನ್ಗಳ ಅಂತರದಿಂದ ಗೆಲುವು ಸಾಧಿಸಿತು. ಸದ್ಯ ಟೀಂ ಇಂಡಿಯಾದ ಪರ ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿರುವುದು ತಂಡ ನಿರಾಳವಾಗಿರುವುದಕ್ಕೆ ಕಾರಣವಾಗಿದೆ. ಆದರೆ ಈ ಸಂತಸದಲ್ಲಿ ಟೀಂ ಇಂಡಿಯಾ ಮೈಮರೆಯುವುದು ಬೇಡ ಎಂದು ತಂಡದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ (Sunil Gavaskar ) ರೋಹಿತ್ ಪಡೆಗೆ ಸಲಹೆ ನೀಡಿದ್ದಾರೆ.
ಸೂಪರ್ 12 ಸುತ್ತಿನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಜಿಂಬಾಬ್ವೆ ಒಂದು ರನ್‌ನಿಂದ ಸೋಲಿಸಿದಾಗಿನಿಂದ, ಪಾಕಿಸ್ತಾನದ ಆಟಗಾರರು ಭಾರೀ ಟೀಕೆಗೆ ಒಳಗಾಗಿದ್ದಾರೆ. ಹಾಗೆಯೇ ಅಭಿಮಾನಿಗಳು ಜಿಂಬಾಬ್ವೆಯ ಆಟಗಾರರನ್ನು ಶ್ಲಾಘಿಸುತ್ತಿದ್ದಾರೆ. ಸದ್ಯ ಟೀಂ ಇಂಡಿಯಾ ಆಟಗಾರರು ಉತ್ತಮ ಫಾರ್ಮ್‌ನಲ್ಲಿರುವ ಕಾರಣ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ತಂಡಕ್ಕೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: T20 World Cup 2022: ಟೀಂ ಇಂಡಿಯಾದ ಗೆಲುವಿಗಾಗಿ ಪ್ರಾರ್ಥಿಸುತ್ತಿರುವ ಪಾಕಿಸ್ತಾನ ತಂಡ..!
ಆತ್ಮವಿಶ್ವಾಸ ಹೆಚ್ಚಾಗಿದೆ
ಪಾಕಿಸ್ತಾನವನ್ನು ಸೋಲಿಸಿದ ನಂತರ ಜಿಂಬಾಬ್ವೆ ಆಟಗಾರರ ಆತ್ಮವಿಶ್ವಾಸ ಹೆಚ್ಚಾಗಿದೆ. ಹಾಗಾಗಿ ಜಿಂಬಾಬ್ವೆ ತಂಡ ತಮ್ಮ ವಿರುದ್ಧ ಆಡುವಾಗ ಟೀಂ ಇಂಡಿಯಾ ಹೆಚ್ಚು ಎಚ್ಚರಿಕೆಯಿಂದ ಆಡಬೇಕು ಎಂದು ಗವಾಸ್ಕರ್ ಕಿವಿಮಾತು ಹೇಳಿದ್ದಾರೆ. ಅಲ್ಲದೆ ಮುಂದಿನ ಪಂದ್ಯಗಳನ್ನು ಗೆಲ್ಲುವುದು ಪಾಕಿಸ್ತಾನಕ್ಕೆ ಅಷ್ಟು ಸುಲಭದ ಮಾತಾಗಿಲ್ಲ. ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಿಜವಾದ ಶಕ್ತಿ ಗೊತ್ತಾಗಲಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾ
ಇನ್ನು ಆಡಿರುವ ಎರಡು ಪಂದ್ಯಗಳಲ್ಲಿ ಎರಡನ್ನೂ ಗೆದ್ದಿರುವ ರೋಹಿತ್ ಪಡೆ ಎರಡನೇ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ. ಎರಡು ಪಂದ್ಯಗಳಿಂದ ತಲಾ ಎರಡೆರಡು ಅಂಕ ಗಳಿಸಿರುವ ಟೀಂ ಇಂಡಿಯಾ, +1.425 ನೆಟ್ ರನ್ರೇಟ್ ಜೊತೆಗೆ ಒಟ್ಟು 4 ಅಂಕಗಳಿಸಿ ಟೇಬಲ್ ಟಾಪರ್ ಆಗಿದೆ.ಉಳಿದಂತೆ 3 ಅಂಕ ಹೊಂದಿರುವ ಸೌತ್ ಆಫ್ರಿಕಾ ತಂಡ 2ನೇ ಸ್ಥಾನ ಪಡೆದುಕೊಂಡಿದೆ. ಆದರೆ ಆಫ್ರಿಕಾ ಪಡೆಯ ನೆಟ್ ರನ್ರೇಟ್ ಟೀಂ ಇಂಡಿಯಾಕ್ಕಿಂತ ಉತ್ತಮವಾಗಿದ್ದು, +5.200 ನೆಟ್ ರನ್ ರೇಟ್ ಹೊಂದಿದೆ. 3ನೇ ಸ್ಥಾನದಲ್ಲಿ 3 ಅಂಕಗಳಿಸಿರುವ ಜಿಂಬಾಬ್ವೆ ಇದ್ದರೆ, ನಾಲ್ಕನೇ ಸ್ಥಾನದಲ್ಲಿ 2 ಅಂಕಗಳಿಸಿರುವ ಬಾಂಗ್ಲಾದೇಶ ತಂಡವಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:00 pm, Sat, 29 October 22