ಪಾಕಿಸ್ತಾನ ಈ ವಾರ, ಟೀಂ ಇಂಡಿಯಾ ಮುಂದಿನ ವಾರ..! ಟಿ20 ವಿಶ್ವಕಪ್ ಭವಿಷ್ಯ ನುಡಿದ ಶೋಯೆಬ್ ಅಖ್ತರ್

T20 World Cup 2022: ಟಿ20 ವಿಶ್ವಕಪ್​ಗೆ ಪಾಕಿಸ್ತಾನ ಆಯ್ಕೆ ಮಾಡಿರುವ ತಂಡವನ್ನು ನೋಡಿದರೆ ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ಹೊರಬೀಳುವಂತಿದೆ ಎಂದು ಅಖ್ತರ್ ಭವಿಷ್ಯ ನುಡಿದಿದ್ದರು.

ಪಾಕಿಸ್ತಾನ ಈ ವಾರ, ಟೀಂ ಇಂಡಿಯಾ ಮುಂದಿನ ವಾರ..! ಟಿ20 ವಿಶ್ವಕಪ್ ಭವಿಷ್ಯ ನುಡಿದ ಶೋಯೆಬ್ ಅಖ್ತರ್
ಭಾರತ- ಪಾಕ್ ಕ್ರಿಕೆಟಿಗರ ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on:Oct 28, 2022 | 3:47 PM

ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಪಾಕಿಸ್ತಾನ ತಂಡದ ಸತತ ಎರಡು ಸೋಲುಗಳು ಆ ತಂಡದ ಅಭಿಮಾನಿಗಳ ಮತ್ತು ಮಾಜಿ ಕ್ರಿಕೆಟಿಗರ ನಿದ್ದೆಗೆಡಿಸಿದೆ. ಟಿ20 ವಿಶ್ವಕಪ್​ನ ಫೈನಲಿಸ್ಟ್ ತಂಡದಗಳಲ್ಲಿ ಒಂದು ಎಂದು ಬಿಂಬಿತವಾಗಿದ್ದ ಪಾಕ್ ತಂಡ ಸೂಪರ್ 12 ಸುತ್ತಿನಿಂದಲೇ ಟೂರ್ನಿಯಿಂದ ಹೊರಬೀಳುವುದು ಖಚಿತವಾಗಿದೆ. ಅಲ್ಲದೆ ಉರಿಯುವ ಗಾಯಕ್ಕೆ ತುಪ್ಪು ಸುರಿದಂತೆ ಇತ್ತ ಟೀಂ ಇಂಡಿಯಾ (Team India) ಸತತ ಎರಡು ಗೆಲುವುಗಳನ್ನು ಸಾಧಿಸಿರುವುದು ಪಾಕ್ ತಂಡದ ಅಭಿಮಾನಿಗಳು ಹೊಟ್ಟೆ ಕಿವುಚಿಕೊಳ್ಳುವಂತೆ ಮಾಡಿದೆ. ಇದಕ್ಕೆ ಆ ತಂಡದ ಮಾಜಿ ಕ್ರಿಕೆಟಿಗರು ಹೊರತಾಗಿಲ್ಲ. ಜಿಂಬಾಬ್ವೆ ವಿರುದ್ಧದ ಸೋಲಿನ ನಂತರ ಪಾಕ್ ತಂಡದ ಲೆಜೆಂಡರಿ ಬೌಲರ್ ಶೋಯೆಬ್ ಅಖ್ತರ್ (Shoaib Akhtar) ಹೇಳಿರುವ ಹೇಳಿಕೆಯೊಂದು ಸಖತ್ ವೈರಲ್ ಆಗುತ್ತಿದ್ದು, ಇದರಲ್ಲಿ ಅವರು ಈ ವಾರ ಪಾಕಿಸ್ತಾನ ತಂಡ ತನ್ನ ದೇಶಕ್ಕೆ ಮರಳಲಿದೆ. ಹಾಗೆಯೇ ಮುಂದಿನ ವಾರ ಟೀಂ ಇಂಡಿಯಾ ಕೂಡ ಟಿ20 ವಿಶ್ವಕಪ್​ನಿಂದ ಗಂಟುಮೂಟೆ ಕಟ್ಟಲಿದೆ ಎಂದು ಹೇಳಿಕೊಂಡಿದ್ದಾರೆ.

ರಾವಲ್ಪಿಂಡಿ ಎಕ್ಸ್​ಪ್ರೆಸ್ ಎಂದೇ ಖ್ಯಾತರಾಗಿರುವ ಶೋಯೆಬ್ ಅಖ್ತರ್ ಎರಡು ತಿಂಗಳ ಹಿಂದೆ, ಟಿ20 ವಿಶ್ವಕಪ್​ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿರುವ ತಂಡವನ್ನು ನೋಡಿದರೆ ಮೊದಲ ಸುತ್ತಿನಲ್ಲೇ ಟೂರ್ನಿಯಿಂದ ಹೊರಬೀಳುವಂತಿದೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಅದೇ ಸಂಭವಿಸಿದ್ದು, ಈಗ ಅಖ್ತರ್ ಮತ್ತೊಂದು ಬಾಂಬ್ ಹಾಕಿದ್ದು, ಅದರಲ್ಲಿ ಟೀಂ ಇಂಡಿಯಾದ ಪ್ರಯಾಣವೂ ಫೈನಲ್ ತಲುಪುವುದಿಲ್ಲ ಎಂಬ ಬಾಂಬ್ ಸಿಡಿಸಿದ್ದಾರೆ.

ಇದನ್ನೂ ಓದಿ: ಪಾಕ್​ ತಂಡವನ್ನು ಮಣಿಸಿದ ಜಿಂಬಾಬ್ವೆ ಕ್ರಿಕೆಟಿಗರ ತಿಂಗಳ ಆದಾಯ ಎಷ್ಟು ಗೊತ್ತಾ?

ಸೆಮಿಫೈನಲ್​​ನಲ್ಲಿ ಭಾರತ ಸೋಲಲಿದೆ- ಅಖ್ತರ್

ಟಿ20 ವಿಶ್ವಕಪ್‌ನಲ್ಲಿ ಗುರುವಾರ ನಡೆದ ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಒಂದು ರನ್‌ನಿಂದ ಸೋತಿದೆ. ಈ ಸೋಲಿನ ನಂತರ, ಶೋಯೆಬ್ ಅಖ್ತರ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಪಾಕ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದಲ್ಲದೆ, ಭಾರತವನ್ನು ಗುರಿಯಾಗಿಸಿಕೊಂಡಿದ್ದಾರೆ. ಇದರಲ್ಲಿ ಅವರು ಪಾಕಿಸ್ತಾನ ತಂಡ ಈ ವಾರ ಮತ್ತು ಭಾರತ ಮುಂದಿನ ವಾರ ತವರಿಗೆ ಮರಳಲಿದೆ. ಟೀಂ ಇಂಡಿಯಾ ಏನು ತೀಸ್ ಮಾರ್ ಖಾನ್ ಅಲ್ಲ. ಹೀಗಾಗಿ ಅವರೂ ಸಹ ಸೆಮಿಫೈನಲ್​ನಲ್ಲಿ ಸೋತು ಮನೆಗೆ ತೆರಳಲಿದ್ದಾರೆ ಎಂದಿದ್ದಾರೆ.

ಭವಿಷ್ಯ ನುಡಿದಿದ್ದ ಅಖ್ತರ್

ಟಿ20 ವಿಶ್ವಕಪ್‌ಗೆ ಪಿಸಿಬಿ ತಂಡವನ್ನು ಪ್ರಕಟಿಸಿದ ದಿನವೇ ಪಾಕಿಸ್ತಾನ ಮೊದಲ ಸುತ್ತಿನಲ್ಲಿಯೇ ಹೊರಗುಳಿಯಲಿದೆ ಎಂದು ಅಖ್ತರ್ ಹೇಳಿದ್ದರು. ನೀವು ಇಂತಹ ತಂಡವನ್ನು ಆಯ್ಕೆ ಮಾಡಿ, ಈ ಆಟಗಾರರೊಂದಿಗೆ ಹೋದರೆ ಆಸ್ಟ್ರೇಲಿಯಾದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ. ಅಲ್ಲದೆ ಈ ಮಧ್ಯಮ ಕ್ರಮಾಂಕವನ್ನು ಕಟ್ಟಿಕೊಂಡು ನೀವು ಹೇಗೆ ಪಂದ್ಯ ಗೆಲ್ಲುತ್ತಿರಿ? ಹೀಗಾಗಿ ಪಾಕಿಸ್ತಾನ ಮೊದಲ ಸುತ್ತಿನಲ್ಲೇ ಹೊರಬೀಳಬಹುದು ಎಂಬ ಭಯ ನನಗಿದೆ ಎಂದು ಅಖ್ತರ್ ಈ ಹಿಂದೆಯೇ ಹೇಳಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Fri, 28 October 22