AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2022: ಟೀಂ ಇಂಡಿಯಾದ ಗೆಲುವಿಗಾಗಿ ಪ್ರಾರ್ಥಿಸುತ್ತಿರುವ ಪಾಕಿಸ್ತಾನ ತಂಡ..!

T20 World Cup 2022: ಒಂದು ವೇಳೆ ಸೂಪರ್ 12 ಸುತ್ತಿನಲ್ಲಿ ಭಾರತ ಸೋತರೆ, ಪಾಕಿಸ್ತಾನ ಸೆಮಿಸ್‌ ರೇಸ್‌ನಿಂದ ಹೊರಗುಳಿಯುತ್ತದೆ. ಅದಕ್ಕಾಗಿಯೇ ಪಾಕಿಸ್ತಾನದ ಅಭಿಮಾನಿಗಳು ಈಗ ಭಾರತದ ಗೆಲುವಿಗಾಗಿ ಕಾದುಕುಳಿತಿದ್ದಾರೆ.

T20 World Cup 2022: ಟೀಂ ಇಂಡಿಯಾದ ಗೆಲುವಿಗಾಗಿ ಪ್ರಾರ್ಥಿಸುತ್ತಿರುವ ಪಾಕಿಸ್ತಾನ ತಂಡ..!
ಪಾಕಿಸ್ತಾನ ತಂಡ
TV9 Web
| Updated By: ಪೃಥ್ವಿಶಂಕರ|

Updated on:Oct 29, 2022 | 11:19 AM

Share

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಪಾಕಿಸ್ತಾನದ (Pakistan) ಪಯಣ ಬಹುತೇಕ ಮುಗಿದಂತೆ ತೋರುತ್ತಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಎದುರು ಸೋಲು ಕಂಡಿದ್ದ ಪಾಕಿಸ್ತಾನ ತನ್ನ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಹೀನಾಯ ಸೋಲು ಅನುಭವಿಸಿತ್ತು. ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಬಾಬರ್ ಸೇನೆ ಕೇವಲ 1 ರನ್ ಅಂತರದಲ್ಲಿ ಸೋಲನುಭವಿಸಿತು. ಇದರಿಂದ ಪಾಕಿಸ್ತಾನದ ಸೆಮಿಸ್‌ ಅವಕಾಶ ಕಠಿಣವಾಗಿದೆ. ಬಾಬರ್ (Babar Azam) ಸೇನೆ ಸೆಮಿಫೈನಲ್ ತಲುಪಬೇಕಾದರೆ ಉಳಿದ ಎಲ್ಲ ಪಂದ್ಯಗಳನ್ನು ಗೆಲ್ಲುವುದು ಮಾತ್ರವಲ್ಲದೆ ಇತರ ತಂಡಗಳ ಗೆಲುವಿನ ಮೇಲೂ ಅವಲಂಬಿತವಾಗಿದೆ.

ಗುಂಪು-2ರ ಆರು ತಂಡಗಳ ಪೈಕಿ ಭಾರತ 2 ಗೆಲುವಿನೊಂದಿಗೆ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಬಲಿಷ್ಠವಾಗಿ ಬೇರೂರಿದ್ದರೆ, ಪಾಕಿಸ್ತಾನ 5ನೇ ಸ್ಥಾನದಲ್ಲಿದ್ದು, ಐರ್ಲೆಂಡ್ 6ನೇ ಸ್ಥಾನದಲ್ಲಿದೆ. ಸದ್ಯ ಪಾಕಿಸ್ತಾನ ತಂಡ ಸತತ ಎರಡು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಮುಂದೆ ಆಡಲಿರುವ 3 ಪಂದ್ಯಗಳು ಪಾಕಿಸ್ತಾನದ ಪಾಲಿಗೆ ನಿರ್ಣಾಯಕವಾಗಲಿವೆ. ಈ ಪಂದ್ಯಗಳನ್ನು ಗೆಲ್ಲುವುದರೊಂದಿಗೆ ಬಾಬರ್ ಪಡೆ ನೆಟ್ ರನ್​ರೇಟ್​ ಮೇಲು ಹೆಚ್ಚು ಗಮನಹರಿಸಬೇಕಿದೆ. 2021 ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಸ್ಥಿತಿಯೂ ಹೀಗೆ ಇತ್ತು. ಆಗ ಕೊಹ್ಲಿ ಪಡೆಯ ಸ್ಥಿತಿ ನೋಡಿ ನಗೆ ಬೀರಿದ ಪಾಕಿಸ್ತಾನಿಗಳು ಈಗ ಟೀಂ ಇಂಡಿಯಾ ಗೆಲ್ಲಲಿ ಎಂದು ದೇವರ ಬಳಿ ಮೊರೆ ಇಡುತ್ತಿದ್ದಾರೆ.

ಇದನ್ನೂ ಓದಿ: ‘ನಿವೃತ್ತಿಯ ಬಳಿಕ ಭಾರತ- ಪಾಕ್ ಪಂದ್ಯವನ್ನು ಲೈವ್ ನೋಡುವುದೇ ನನ್ನ ಜೀವನದ ಹೆಬ್ಬಯಕೆ’; ಆಸೀಸ್ ನಾಯಕ

ಪಾಕಿಸ್ತಾನ ಸೆಮಿಸ್ ತಲುಪಬೇಕೆಂದರೆ

ಒಂದು ವೇಳೆ ಪಾಕಿಸ್ತಾನ ಸೆಮಿ ತಲುಪಬೇಕಾದರೆ ಉಳಿದ ಮೂರು ಪಂದ್ಯಗಳನ್ನು ಉತ್ತಮ ರನ್ ರೇಟ್‌ನೊಂದಿಗೆ ಗೆಲ್ಲಲೇಬೇಕು. ಹಾಗೆಯೇ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು ಸೋಲಿಸಬೇಕು. ಮತ್ತು ಜಿಂಬಾಬ್ವೆ ತನ್ನ ಮುಂದಿನ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋಲಲೇಬೇಕು. ಅದೇ ಸಮಯದಲ್ಲಿ ಬಾಂಗ್ಲಾದೇಶ ಇನ್ನೊಂದು ಪಂದ್ಯದಲ್ಲಿ ಸೋಲಬೇಕು. ಅಂದರೆ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ಈ ಮೂರು ತಂಡಗಳನ್ನು ಭಾರತ ಸೋಲಿಸಬೇಕು.

ಒಂದು ವೇಳೆ ಸೂಪರ್ 12 ಸುತ್ತಿನಲ್ಲಿ ಭಾರತ ಸೋತರೆ, ಪಾಕಿಸ್ತಾನ ಸೆಮಿಸ್‌ ರೇಸ್‌ನಿಂದ ಹೊರಗುಳಿಯುತ್ತದೆ. ಅದಕ್ಕಾಗಿಯೇ ಪಾಕಿಸ್ತಾನದ ಅಭಿಮಾನಿಗಳು ಈಗ ಭಾರತದ ಗೆಲುವಿಗಾಗಿ ಕಾದುಕುಳಿತಿದ್ದಾರೆ. ಭಾರತ, ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾಗಳು ತಮ್ಮ ಉಳಿದ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದರೆ ಆರು ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುತ್ತವೆ. ಪಾಕಿಸ್ತಾನಕ್ಕೆ ಗರಿಷ್ಠ ಆರು ಅಂಕ ಗಳಿಸುವ ಅವಕಾಶವಿರುವುದರಿಂದ ತಂಡ ಉತ್ತಮ ರನ್ ರೇಟ್ ಹೊಂದುವುದು ಅನಿವಾರ್ಯವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:14 am, Sat, 29 October 22