AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಟ್ರೋಲ್​ ಸ್ಟೇಷನ್​ನ ಮಹಿಳಾ ಉದ್ಯೋಗಿಯ ಮೇಲೆ ಮರ್ಸಿಡೀಝ್​ನಿಂದ ಹಣ ಎಸೆದ ವ್ಯಕ್ತಿಯ ಬಗ್ಗೆ ನೆಟ್ಟಿಗರ ಆಕ್ರೋಶ

Insult : ಎದುರಿಗಿರುವ ವ್ಯಕ್ತಿ ತಮಗಿಂತ ಕಡಿಮೆ ಎನ್ನುವುದು ಗೊತ್ತಾದಾಗ ಜನ ಹೀಗೆ ಕೀಳಾಗಿ ನೋಡುತ್ತಾರೆ. ಅಂಥವರು ಕ್ಷಮೆಗೆ ಅನರ್ಹ ಎಂದಿದ್ದಾರೆ ಒಬ್ಬರು. ಇವನ ಒಳಮನಸ್ಸಿನಲ್ಲಿರುವುದು ಹೇಗೆ ಪ್ರಕಟವಾಗಿದೆ ನೋಡಿ ಎಂದಿದ್ದಾರೆ ಮತ್ತೊಬ್ಬರು.

ಪೆಟ್ರೋಲ್​ ಸ್ಟೇಷನ್​ನ ಮಹಿಳಾ ಉದ್ಯೋಗಿಯ ಮೇಲೆ ಮರ್ಸಿಡೀಝ್​ನಿಂದ ಹಣ ಎಸೆದ ವ್ಯಕ್ತಿಯ ಬಗ್ಗೆ ನೆಟ್ಟಿಗರ ಆಕ್ರೋಶ
ಮರ್ಸಿಡೀಝ್​ ಬೆಂಝ್​ನಲ್ಲಿ ಬಂದ ವ್ಯಕ್ತಿ ಪೆಟ್ರೋಲ್ ಸ್ಟೇಷನ್​ನ ಮಹಿಳಾ ಉದ್ಯೋಗಿಯೆದುರು ಹಣ ತೂರಿದಾಗ ಅವಮಾನದಿಂದ ದುಃಖಿಸುತ್ತಿರುವುದು
ಶ್ರೀದೇವಿ ಕಳಸದ
|

Updated on:Feb 06, 2023 | 10:09 AM

Share

Viral News : ಬಡವನೇ ಆಗಿರಲಿ ಬಲ್ಲಿದನೇ ಆಗಿರಲಿ ಸಾರ್ವಜನಿಕ ವಲಯದಲ್ಲಿ ಆತ ಸಾಮಾನ್ಯ ಮನುಷ್ಯನೇ. ಅವನ ನಡೆವಳಿಕೆಗಳು ಸಾರ್ವಜನಿಕ ನಿಯಮಗಳಿಗೆ ತಕ್ಕಂತೆ ಇರಬೇಕು. ಇತರರ ಘನತೆಗೆ ತೊಂದರೆ ಉಂಟು ಮಾಡದಂತೆ ಆತ ವರ್ತಿಸಬೇಕು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮರ್ಸಿಡೀಝ್​ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಪೆಟ್ರೋಲ್ ಹಾಕಿಸಿಕೊಂಡ ನಂತರ ಮಹಿಳಾ ಉದ್ಯೋಗಿಯೆದುರು ಹಣ ಎಸೆದು ಹೋಗುತ್ತಾನೆ. ಆಕೆ ಅವಮಾನಿತಳಾಗಿ ಕಣ್ಣೀರಾಗುತ್ತಾಳೆ. ನೆಟ್ಟಿಗರು ಈ ವಿಡಿಯೋ ನೋಡಿ ಕುಪಿತಗೊಂಡಿದ್ದಾರೆ.

ಐಷಾರಾಮಿ ಕಾರಿನೊಳಗೆ ಬಂದ ಈ ವ್ಯಕ್ತಿ ಪೆಟ್ರೋಲ್ ಹಾಕಿಸಿಕೊಂಡ ಮೇಲೆ ಗೌರವದಿಂದ ಹಣವನ್ನು ಪಾವತಿಸಬೇಕಿತ್ತು. ಆದರೆ ಹೀಗೆ ದರ್ಪದಿಂದ ವರ್ತಿಸಿದ್ದು ಎಂಥವರನ್ನು ನೋವಿಗೆ ತಳ್ಳುತ್ತದೆ. ಮತ್ತೊಂದು ಕಾರು ಪೆಟ್ರೋಲಿಗೆಂದು ಬಂದು ನಿಂತಾಗ ಮಹಿಳಾ ಉದ್ಯೋಗಿ ಇತ್ತ ತಿರುಗಿ ಕಣ್ಣೀರು ಒರೆಸಿಕೊಳ್ಳುತ್ತಾಳೆ. 50 ಸೆಕೆಂಡುಗಳ ಈ ವಿಡಿಯೋ ಅನ್ನು ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಇದು ಯಾರ ಮನಸ್ಸನ್ನೂ ಕಲಕುವಂತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ಈ ಇಲಿ ತನ್ನ ಸಂಗಾತಿಗಾಗಿ ವಜ್ರದ ನೆಕ್ಲೇಸ್​ ಕದ್ದೊಯ್ದಿತೆ? ನೆಟ್ಟಿಗರಲ್ಲಿ ಭಾರೀ ಚರ್ಚೆ

ಈ ದೃಶ್ಯವನ್ನು ನೋಡಿದ ನೆಟ್ಟಿಗರು, ಈತನ ದುರಹಂಕಾರೀ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಪೆಟ್ರೋಲ್​ ಬಂಕ್​ನಲ್ಲಿ ಇವರ ಕಾರು ಪ್ರವೇಶಿಸಿದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆಕೆ ಹೀಗೆ ಕಣ್ಣೀರು ಒರೆಸಿಕೊಳ್ಳುವುದನ್ನು ನೋಡಿದಾಗ ಬಹಳ ಸಂಕಟವಾಗುತ್ತದೆ ಯಾವ ವ್ಯಕ್ತಿಯನ್ನೂ ಹೀಗೆ ನಡೆಸಿಕೊಳ್ಳಬಾರದು, ಅದರಲ್ಲೂ ಹೆಣ್ಣುಮಕ್ಕಳನ್ನು ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ : ಅಪ್ಪನ ಮೊಬೈಲ್​ನಿಂದ ರೂ. 80,000 ವೆಚ್ಚದ ಫುಡ್​ ಆರ್ಡರ್ ಮಾಡಿದ 6 ವರ್ಷದ ಮಗ

ಎದುರಿಗಿರುವ ವ್ಯಕ್ತಿ ತಮಗಿಂತ ಕಡಿಮೆ ಎನ್ನುವುದು ಗೊತ್ತಾದಾಗ ಜನ ಹೀಗೆ ಅವರನ್ನು ಕೀಳಾಗಿ ನೋಡುವುದು ಕ್ಷಮೆಗೆ ಅನರ್ಹ ಎಂದಿದ್ದಾರೆ ಒಬ್ಬರು. ಇವನ ಒಳಮನಸ್ಸಿನಲ್ಲಿರುವುದು ಹೇಗೆ ಪ್ರಕಟವಾಗಿದೆ ನೋಡಿ ಎಂದಿದ್ದಾರೆ ಮತ್ತೊಬ್ಬರು. ಅಕಾರಣವಾಗಿ ಹೀಗೆ ವರ್ತಿಸಿದ್ದಾನೆ ಈತ, ಗೌರವದಿಂದ ವರ್ತಿಸಲು ಹಣ ತೇರಬೇಕಿರಲಿಲ್ಲ ಹಾಗೆ ಯಾವುದೇ ತ್ಯಾಗವನ್ನೂ ಮಾಡಬೇಕಿರಲಿಲ್ಲ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : ಕುರುಡುತನ ಕಣ್ಣಿಗೆ, ಕಂಠಕ್ಕಲ್ಲ; ‘ಕಚ್ಚೆ ಧಾಗೆ’ಯ ಈ ಹಾಡು ನೆನಪಿದೆಯೇ? ಬಾಲಕನ ಕಂಠಸಿರಿಯಲ್ಲಿ ಕೇಳಿ

ಈ ಮಹಿಳೆಯನ್ನು ಅಪ್ಪಿಕೊಂಡು ಸಾಂತ್ವನ ಹೇಳಬೇಕೆನ್ನಿಸುತ್ತಿದೆ ಎಂದಿದ್ದಾರೆ ಹಲವರು. ಈತನ ಕರ್ಮ ಈತನನ್ನು ಖಂಡಿತ ಹಿಂಬಾಲಿಸುತ್ತದೆ ಎಂದು ಶಾಪ ಹಾಕಿದ್ದಾರೆ ಇನ್ನೂ ಕೆಲವರು. ಆದರೆ, ಸ್ಥಳೀಯ ಮಾಧ್ಯಮಗಳು ಈ ಬಗ್ಗೆ ಸಂಬಂಧಿಸಿದ ವ್ಯಕ್ತಿಗೆ ವಿಚಾರಿಸಿದಾಗ, ಹೀಗೆ ಹಣ ಎಸೆಯುವ ಉದ್ದೇಶ ಖಂಡಿತ ಇರಲಿಲ್ಲ. ಈ ಸಂದರ್ಭದಲ್ಲಿ ಬಹಳ ಅವಸರದಲ್ಲಿದ್ದೆ. ಹಾಗಾಗಿ ಹೀಗಾಗಿದೆ ಎಂದಿದ್ದಾನೆ. ನೆಟ್ಟಿಗರು ಈ ಕಾರಣವನ್ನು ಒಪ್ಪುತ್ತಿಲ್ಲ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 8:52 am, Mon, 6 February 23

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್