Valentine’s Day 2023: ಸ್ಟ್ರಾಬೆರಿ ಕೇಕ್ ತಯಾರಿಸಿ ನಿಮ್ಮ ಪ್ರೀತಿ ಪಾತ್ರರಿಗೆ ಹೀಗೆ ಪ್ರಪೋಸ್ ಮಾಡಿ
ಪ್ರೇಮಿಗಳ ದಿನದಂದು ಮನೆಯಲ್ಲಿಯೇ ಅತ್ಯಂತ ಸರಳವಾಗಿ ಹಾಗೂ ಆರೋಗ್ಯವಾಗಿ ಸ್ಟ್ರಾಬೆರಿ ಕೇಕ್ನೊಂದಿಗೆ ಆಚರಿಸಿ. ಕೇವಲ 10 ರಿಂದ 15 ನಿಮಿಷಗಳ ಒಳಗಾಗಿ ನೀವು ಈ ರುಚಿಕರ ಕೇಕ್ನ್ನು ತಯಾರಿಸಬಹುದಾಗಿದೆ.
ಈ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ನಿಮ್ಮ ಪ್ರೀತಿ ಪಾತ್ರರಿಗಾಗಿ ಮನೆಯಲ್ಲಿಯೇ ರುಚಿಯಾದ ಸ್ಟ್ರಾಬೆರಿ ಕೇಕ್ ತಯಾರಿಸಿ ಕ್ಯಾಂಡಲ್ ಲೈಟ್ನೊಂದಿಗೆ ಸವಿಯಿರಿ. ಅಡುಗೆಮನೆಯಲ್ಲಿ ಸುಲಭವಾಗಿ ದೊರೆಯುವ ಕೆಲವು ಪದಾರ್ಥಗಳನ್ನು ಬಳಸಿ ಈ ವಿಶೇಷ ಪಾಕವಿಧಾನವನ್ನು ತಯಾರಿಸಬಹುದಾಗಿದೆ. ಪ್ರೇಮಿಗಳ ದಿನದಂದು ಮನೆಯಲ್ಲಿಯೇ ಅತ್ಯಂತ ಸರಳವಾಗಿ ಹಾಗೂ ಆರೋಗ್ಯವಾಗಿ ಸ್ಟ್ರಾಬೆರಿ ಕೇಕ್ನೊಂದಿಗೆ ಆಚರಿಸಿ. ಕೇವಲ 10 ರಿಂದ 15 ನಿಮಿಷಗಳ ಒಳಗಾಗಿ ನೀವು ಈ ರುಚಿಕರ ಕೇಕ್ನ್ನು ತಯಾರಿಸಬಹುದಾಗಿದೆ.
ಸ್ಟ್ರಾಬೆರಿ ಕೇಕ್ ರೆಸಿಪಿ:
ಸ್ಟ್ರಾಬೆರಿ ಕೇಕ್ಗೆ ಬೇಕಾಗುವ ಸಾಮಾಗ್ರಿಗಳು:
500 ಗ್ರಾಂ ಸ್ಟ್ರಾಬೆರಿ 1 ಕಪ್ ಸೂರ್ಯಕಾಂತಿ ಎಣ್ಣೆ 1 ಕಪ್ ಮೊಸರು 1/4 ಕಪ್ ಮೈದಾ ಹಿಟ್ಟು 1 ಚಿಟಿಕೆ ಉಪ್ಪು 1 ಕಪ್ ಸಕ್ಕರೆ 2 ಮೊಟ್ಟೆ 1/4 ಕಪ್ ನಿಂಬೆ ರಸ 1 ಚಮಚ ವೆನಿಲ್ಲಾ ಎಸೆನ್ಸ್ 4 ಚಮಚ ಬೇಕಿಂಗ್ ಪೌಡರ್
ಸ್ಟ್ರಾಬೆರಿ ಕೇಕ್ ಮಾಡುವ ವಿಧಾನ:
ಹಂತ 1:
ಮೊದಲಿಗೆ , ಸ್ಟ್ರಾಬೆರಿಗಳನ್ನು ತೊಳೆದು ಸ್ವಚ್ಛಗೊಳಿಸಿ. ನಂತರ ಕೆಲವೊಂದಿಷ್ಟು ಸ್ಟ್ರಾಬೆರಿಗಳನ್ನು ತೆಗೆದುಕೊಂಡು ಚಿಕ್ಕ ಚಿಕ್ಕದಾಗಿ ಕತ್ತರಿಸಿ. ಉಳಿದಿರುವ ಸ್ಟ್ರಾಬೆರಿಗಳನ್ನು ಒಂದೇ ಸಮನಾಗಿ ಅಲಂಕಾರಕ್ಕೆ ಬೇಕಾಗುವ ರೀತಿಯಲ್ಲಿ ಕತ್ತರಿಸಿ. ಹಂತ 2: ಒಂದು ಬೌಲ್ನಲ್ಲಿ ಮೊಟ್ಟೆ, ಬೆಣ್ಣೆ, ಸಕ್ಕರೆ, ವೆನಿಲ್ಲಾ ಎಸೆನ್ಸ್, ಅಡುಗೆ ಸೋಡಾ, ಬೇಕಿಂಗ್ ಪೌಡರ್ ಮತ್ತು ಮೈದಾಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಮೊಸರು ಸೇರಿಸಿ.
ಇದನ್ನೂ ಓದಿ: ಈ ವರ್ಷ ವ್ಯಾಲೆಂಟೈನ್ಸ್ ಡೇಗೆ ಏನು ಗಿಫ್ಟ್ ಕೊಡುವುದು ಎಂದು ಯೋಚಿಸುತ್ತಿದ್ದೀರಾ? ಟಾಪ್ ಗಿಫ್ಟ್ ಐಡಿಯಾಗಳು ಇಲ್ಲಿವೆ
ಹಂತ 3:
ಕೇಕ್ ಟಿನ್ ಅಥವಾ ಅಗಲವಾದ ಚಿಕ್ಕ ಪಾತ್ರೆಯ ಒಳಭಾಗದಲ್ಲಿ ಎಣ್ಣೆಯನ್ನು ಹರಡಿ. ನಂತರ ಈಗಾಗಲೇ ಮಾಡಿಟ್ಟ ಮಿಶ್ರಣವನ್ನು ಪಾತ್ರೆಯ ಒಳಗೆ ಚೆನ್ನಾಗಿ ಹರಡಿ. ನಂತರ ಇದರ ಮೇಲೆ ಚಿಕ್ಕ ಚಿಕ್ಕದಾಗಿ ತುಂಡರಿಸಿಟ್ಟ ಸ್ಟ್ರಾಬೆರಿಗಳನ್ನು ಅದರ ಮೇಲೆ ಹರಡಿ.
ಹಂತ 4:
ಓವನ್ 200 ಡಿಗ್ರಿ ಸೆಲ್ಸಿಯಸ್ನಲ್ಲಿ ಪೂರ್ವಭಾವಿಯಾಗಿ ಕಾಯಿಸಿ. ಅಥವಾ ನೀವು ಕುಕ್ಕರ್ನಲ್ಲಿ ಕೇಕ್ ತಯಾರಿಸಬಹುದು. ಕುಕ್ಕರಿನಲ್ಲಿ ಸುಮಾರು ಒಂದು ಲೀಟರ್ ನೀರು ಹಾಕಿ ಬಿಸಿ ಮಾಡಿ. ನೀರು ಕುದಿಯುತ್ತಿರುವಾಗ ಕೇಕ್ ಮಿಶ್ರಣದ ಟಿನ್ನ್ನು ಕುಕ್ಕರ್ ಒಳಗಡೆ ಇಡಿ. ಪಾತ್ರೆಯ ತಳದಲ್ಲಿ ಇಡ್ಲಿ ಪಾತ್ರೆ ಇಡುವ ತಟ್ಟೆ ಅಥವಾ ಒಂದು ಚಿಕ್ಕ ಕಪ್ ಇಟ್ಟು ಮುಚ್ಚಳ ಮುಚ್ಚಿ. ಮಧ್ಯಮ ಉರಿಯಲ್ಲಿ ಸುಮಾರು ಮೂವತ್ತು ನಿಮಿಷ ಬೇಯಿಸಿ.
ಹಂತ 5:
ಮೂವತ್ತು ನಿಮಿಷಗಳ ನಂತರ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ತಣಿದ ನಂತರ ಹಾಲಿನ ಕೆನೆ ಮತ್ತು ಉಳಿದ ಸ್ಟ್ರಾಬೆರಿಗಳಿಂದ ಅಲಂಕರಿಸಿ. ಈಗ ನೀವು ನಿಮ್ಮ ಸಂಗಾತಿಯೊಂದಿಗೆ ವಿಶೇಷ ದಿನದಂದು ಸವಿಯಿರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:24 pm, Sat, 4 February 23