ಜ್ಯೋತಿಷಿಯ ಮನೆಯಲ್ಲಿ ಲಕ್ಷಾಂತರ ರೂ ದೋಚಿದ ಕಳ್ಳರು Instagram ​​ನಲ್ಲಿ ತಮ್ಮ ಸಾಹಸದ ರೀಲ್ ಪೋಸ್ಟ್ ಮಾಡಿದರು! ಆ ಮೇಲೆ ಏನಾಯಿತು?

|

Updated on: Oct 06, 2023 | 11:43 AM

ಜ್ಯೋತಿಷಿ ತರುಣ್ ಶರ್ಮಾ ಅವರು ಕಳ್ಳತನದ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದು, ಕಳ್ಳರ ಕುಕೃತ್ಯವನ್ನು ಸೆರೆಹಿಡಿದಿದ್ದ ಸಿಸಿಟಿವಿ ದೃಶ್ಯಗಳನ್ನು ಸಹ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಸಾಕ್ಷ್ಯಗಳ ಹೊರತಾಗಿಯೂ, ಪೊಲೀಸರಿಗೆ ಆರಂಭದಲ್ಲಿ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಆರೋಪಿಗಳ ಪೈಕಿ ಒಬ್ಬ ತಾವು ಕದ್ದ ನಗದನ್ನು ಪ್ರದರ್ಶಿಸಲು Instagram ವೀಡಿಯೊ ಮಾಡಿ, ರೀಲ್​ ಅಪ್​ಲೋಡ್​ ಮಾಡಿದ್ದಾನೆ.

ಜ್ಯೋತಿಷಿಯ ಮನೆಯಲ್ಲಿ ಲಕ್ಷಾಂತರ ರೂ ದೋಚಿದ ಕಳ್ಳರು Instagram ​​ನಲ್ಲಿ ತಮ್ಮ ಸಾಹಸದ ರೀಲ್ ಪೋಸ್ಟ್ ಮಾಡಿದರು! ಆ ಮೇಲೆ ಏನಾಯಿತು?
ಕಳ್ಳರು ಇನ್ಸ್​ಟಾಗ್ರಾಮ್​​ನಲ್ಲಿ ತಮ್ಮ ಸಾಹಸದ ರೀಲ್ ಪೋಸ್ಟ್ ಮಾಡಿದರು! ಆ ಮೇಲೆ ಏನಾಯಿತು?
Follow us on

ಕಾನ್ಪುರ, ಅಕ್ಟೋಬರ್​​ 6: ಕಳ್ಳತನಕ್ಕೆ ಹೋಗಿದ್ದಾಗ ಆ ಮನೆಯ ಹಾಸಿಗೆಯ ಮೇಲೆ ಹಣದ ರಾಶಿ ಬಿದ್ದಿತ್ತು, ಅದನ್ನೆಲ್ಲಾ ವಿಡಿಯೊ ಮಾಡುತ್ತಿದ್ದ ಕಳ್ಳರ ಗ್ಯಾಂಗಿನ ಒಬ್ಬ ಕ್ಯಾಮರಾ ಆಪರೇಟ್ ತನ್ನ ಕೈಯಲ್ಲಿ 500 ರೂಪಾಯಿ ಕರೆನ್ಸಿ ನೋಟು (Rs 500 currency note) ಹಿಡಿದು ಜೂಮ್ ಹಾಕಿದ್ದ! ಮುಂದೆ ಕಳ್ಳರ ಗ್ಯಾಂಗ್​​ ಆ ಜ್ಯೋತಿಷಿಯ ಮನೆ ದೋಚಿದ್ದನ್ನು ಇನ್ಸ್​ಟಾಗ್ರಾಮ್​​ನಲ್ಲಿ ( Instagram video) ತಮ್ಮದೂ ಒಂದು ಸಾಹಸವೆಂಬಂತೆ ರೀಲ್ ಮಾಡಿ, ಪೋಸ್ಟ್ ಮಾಡಿದ್ದರು! ಅಷ್ಟೇ.. ಮುಂದೆ ಅದನ್ನು ಡಿಜಿಟಲ್ ಟ್ರ್ಯಾಕಿಂಗ್ ಮೂಲಕ ಪೊಲೀಸರು ಕಳ್ಳರ ಪೈಕಿ ಒಬ್ಬನನ್ನು ಯಶಸ್ವಿಯಾಗಿ ಗುರುತಿಸಿ ಬಂಧಿಸಿದ್ದಾರೆ, ಶಂಕಿತರಿಂದ ಅಂದಾಜು 2 ಲಕ್ಷ ರೂಪಾಯಿ ನಗದು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ!

ಕಾನ್ಪುರದ ಜ್ಯೋತಿಷಿಯೊಬ್ಬರ ನಿವಾಸದಿಂದ ಗಣನೀಯ ಪ್ರಮಾಣದ ಹಣವನ್ನು ಕದ್ದ ಕಳ್ಳರು ಕದ್ದ ಹಣವನ್ನು ರೀಲ್ ಮಾಡಿ ಪ್ರದರ್ಶಿಸುತ್ತಾ ಇನ್‌ಸ್ಟಾಗ್ರಾಮ್ ವೀಡಿಯೊವನ್ನು ಅಪ್​ಲೋಡ್​ ಮಾಡಿದ್ದಾರೆ. ಜ್ಯೋತಿಷಿ ತರುಣ್ ಶರ್ಮಾ ಅವರು ಕಳ್ಳತನದ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದು, ಕಳ್ಳರ ಕುಕೃತ್ಯವನ್ನು ಸೆರೆಹಿಡಿದಿದ್ದ ಸಿಸಿಟಿವಿ ದೃಶ್ಯಗಳನ್ನು (CCTV footage) ಸಹ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ (Kanpur News).

ಈ ಸಾಕ್ಷ್ಯಗಳ ಹೊರತಾಗಿಯೂ, ಪೊಲೀಸರಿಗೆ ಆರಂಭದಲ್ಲಿ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಆರೋಪಿಗಳ ಪೈಕಿ ಒಬ್ಬ ತಾವು ಕದ್ದ ನಗದನ್ನು ಪ್ರದರ್ಶಿಸಲು Instagram ವೀಡಿಯೊ ಮಾಡಿ, ರೀಲ್​ ಅಪ್​ಲೋಡ್​ ಮಾಡಿದ್ದಾನೆ.

Also read: ಕ್ರೂರ-ಅತಿ ದಾರುಣ: ಹತ್ತಾರು ಕೋತಿಗಳಿಗೆ ವಿಷವಿಕ್ಕಿ ಕೊಂದ ಮನುಷ್ಯರು! ಗ್ರಾನೈಟ್ ಬಿಸಿನೆಸ್​ ಕಾರಣವಾಯ್ತಾ?

ಹಾಸಿಗೆಯ ಮೇಲೆ ಹಣದ ರಾಶಿ ಬಿದ್ದಿದ್ದರಿಂದ ಕ್ಯಾಮರಾ ಆಪರೇಟ್ ಮಾಡುತ್ತಿದ್ದ ವ್ಯಕ್ತಿಯ ಕೈಯಲ್ಲಿ 500 ರೂಪಾಯಿ ಕರೆನ್ಸಿ ನೋಟುಗಳನ್ನು ಹಿಡಿದಿದ್ದ. ಡಿಜಿಟಲ್ ಟ್ರ್ಯಾಕಿಂಗ್ ಮೂಲಕ, ಪೊಲೀಸರು ಕಳ್ಳರಲ್ಲಿ ಒಬ್ಬನನ್ನು ಯಶಸ್ವಿಯಾಗಿ ಗುರುತಿಸಿ ಬಂಧಿಸಿದ್ದಾರೆ, ಶಂಕಿತರಿಂದ ಅಂದಾಜು 2 ಲಕ್ಷ ರೂಪಾಯಿ ನಗದು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:40 am, Fri, 6 October 23