ಕ್ರೂರ-ಅತಿ ದಾರುಣ: ಹತ್ತಾರು ಕೋತಿಗಳಿಗೆ ವಿಷವಿಕ್ಕಿ ಕೊಂದ ಮನುಷ್ಯರು! ಗ್ರಾನೈಟ್ ಬಿಸಿನೆಸ್ ಕಾರಣವಾಯ್ತಾ?
ಪಾಪ.. ಅವು ಮೂಕ ಜೀವಿಗಳು, ನಮ್ಮ ಪೂರ್ವಜರು ಬೇರೆ. ಆದರೆ ಅಅದ್ಯಾವುದನ್ನೂ ಲೆಕ್ಕಸದೆ, ಪರಿಗಣಿಸದೆ ಅವುಗಳಿಂದ ಸಣ್ಣಪುಟ್ಟ ತೊಂದರೆಗಳಾಗುತ್ತಿವೆ ಎಂದು ಬಾಧಿತ ಮನುಜರು ವಿಷವಿಕ್ಕಿ ಕೊಲ್ಲಿಸಿದ್ದಾರೆ. ಆಂಜನೆಯ ಎಂದು ಪೂಜಸಲ್ಪಡುವ ವಾನರರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಮಾಹಿತಿ ಪಡೆದ ಇಲಾಖೆಯ ಅಧಿಕಾರಿಗಳು.. ಈ ಘಟನೆಯ ವಿಚಾರಣೆ ನಡೆದಿದೆ.
ಪೆದ್ದಪಲ್ಲಿ (ತೆಲಂಗಾಣ) ಅಕ್ಟೋಬರ್ 6: ಗ್ರಾನೈಟ್ ವ್ಯಾಪಾರ ವಿಜೃಂಭಿಸುತ್ತಿರುವುದರಿಂದ ದಿನಬೆಳಗಾಗುವಷ್ಟರಲ್ಲಿ ದೊಡ್ಡ ದೊಡ್ಡ ಬೆಟ್ಟಗಳೆ ಕರಗಿ ಮಾಯವಾಗುತ್ತಿವೆ. ಇದರಿಂದ ಆ ಬೆಟ್ಟ ಗುಡ್ಡಗಳಲ್ಲಿ ವಾಸಿಸುವ ಮನುಷ್ಯನ ಪೂರ್ವಜರಿಗೆ ಸಂಚಕಾರ ಬಂದಿದೆ. ವಾನರರು ಹೊಟ್ಟೆಪಾಡಿಗಾಗಿ ಗ್ರಾಮಗಳತ್ತ ವಲಸೆ ಬರುತ್ತಿವೆ. ಈ ಮಧ್ಯೆ ಕೆಲ ಮೂಢರು ಕೋತಿಗಳಿಗೆ ವಿಷವಿಕ್ಕಿ ಸಾಯಿಸುವ (Death) ದುಸ್ಸಾಹಸವನ್ನೂ ಮಾಡುತ್ತಿದ್ದಾರೆ. ಅದೂ ಒಂದಲ್ಲ ಎರಡಲ್ಲ ಹತ್ತಾರು ಕೋತಿಗಳನ್ನು (Homo sapien, monkey) ಸಾಯಿಸಿಬಿಟ್ಟಿದ್ದಾರೆ. ಅದನ್ನು ನೋಡಿ ಸ್ಥಳೀಯರು ಶಾಕ್ ಆಗಿದ್ದಾರೆ. ತಕ್ಷಣ ಸ್ಥಾನಿಉಕ ಸರಪಂಚ್ ಶ್ರಾವಣ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಸಂಬಂಧಿತ ಫಾರೆಸ್ಟ್ ಅಧಿಕಾರಿಗಳಿಗೆ ತಿಳಿಸಿದ್ದು, ಮುಂದಿನ ಕಾರ್ಯಾಚರನೆ ನಡೆದಿದೆ.
ಪಾಪ.. ಅವು ಮೂಕ ಜೀವಿಗಳು, ನಮ್ಮ ಪೂರ್ವಜರು ಬೇರೆ. ಆದರೆ ಅಅದ್ಯಾವುದನ್ನೂ ಲೆಕ್ಕಸದೆ, ಪರಿಗಣಿಸದೆ ಅವುಗಳಿಂದ ಸಣ್ಣಪುಟ್ಟ ತೊಂದರೆಗಳಾಗುತ್ತಿವೆ ಎಂದು ಬಾಧಿತ ಮನುಜರು ವಿಷವಿಕ್ಕಿ ಕೊಲ್ಲಿಸಿದ್ದಾರೆ. ಆಂಜನೇಯ ಎಂದು ಪೂಜಿಸಲ್ಪಡುವ ವಾನರರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಮಾಹಿತಿ ಪಡೆದ ಇಲಾಖೆಯ ಅಧಿಕಾರಿಗಳು.. ಈ ಘಟನೆಯ ವಿಚಾರಣೆ ನಡೆದಿದೆ.
ಈ ದಾರುಣ ಘಟನೆ ಪೆದ್ದಪಲ್ಲಿ (Peddapalli) ಜಿಲ್ಲೆ ಸುಲ್ತಾನಾಬಾದ್ ಮಂಡಲದಲ್ಲಿ (Telangana, Sultanabad) ನಡೆದಿದೆ. ದೊಡ್ಡಪಲ್ಲಿ ಜಿಲ್ಲೆ ಸುಲ್ತಾನಾಬಾದ್ ಮಂಡಲ ದುಬ್ಬಪಳ್ಳಿ ಗ್ರಾಮ ಸಮೀಪವಿರುವ ಸ್ಮಶಾನದ ಬಳಿ ಈ ದಾರುಣ ನಡೆದಿದೆ. ಮೃತ ಕೋತಿಗಳನ್ನು ಸ್ಮಶಾನದ ಸಮೀಪ ಬಿಸಾಕಿ ಹೋಗಿದ್ದಾರೆ. ಹೀಗೆ ಒಟ್ಟು 35 ಕೋತಿಗಳ ಮೃತದೇಹಗಳು ಪತ್ತೆಯಾಗಿವೆ.
ಅಲ್ಲಿಗೆ ಯೋಜನೆ ಪ್ರಕಾರವೇ ಹೀಗೆ ಕೋತಿಗಳ ಮಾರಣಹೋಮ ನಡೆದಿದೆ ಎಂದು ತಿಳಿದುಬಂದಿದೆ. ಈ ವಾನರರು ಹೊಟ್ಟೆ ತುಂಬಿಕೊಳ್ಳಲು ಸುತ್ತಮುತ್ತಲ ಗ್ರಾಮಗಳಿಗೆ ವಲಸೆ ಬರುತ್ತಿದ್ದವಂತೆ. ಗ್ರಾನೈಟ್ ಬ್ಯುಸಿನೆಸ್ ಕಾ್ರಣ ಬೆಟ್ಟಗಳು ಕರುಗುತ್ತಿವೆ. ಮೂಕ ಪ್ರಾಣಿಗಳಿಗೆ ಆಹಾರ-ಆಶ್ರಯ ದುರ್ಲಭವಾಗುತ್ತಿದೆ. ಇದೀಗ ಸತ್ತ ಕೋತಿಗಳನ್ನು ನೋಡಿ ಸ್ಥಳೀಯರು ಆಂದೋಲನ ವ್ಯಕ್ತಪಡಿಸಿದ್ದಾರೆ.
ಫಾರೆಸ್ಟ್ ಅಧಿಕಾರಿಗಳು ಮತ್ತು ಪಶು ವೈದ್ಯಾಧಿಕಾರಿ ತಂಡ ತಕ್ಷಣವೇ ಇಲ್ಲಿಗೆ ಬಂದು ಸ್ಥಳ ಪರೀಕ್ಷೆ- ಶವಪರೀಕ್ಷೆ ಮಾಡಿದ್ದಾರೆ. ವಿಷ ಹಾಕಿ ಕೊಲೆಗೈದ ವ್ಯಕ್ತಿಗಳು ಯಾರು ಎಂದು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಹಿಡಿಯುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸತ್ತ ಕೋತಿಗಳ ಸಾಮೂಹಿಕ ಅಂತ್ಯಕ್ರಿಯೆಯನ್ನು ಸಮೀಪದಲ್ಲೇ ನಡೆಸಿದ್ದು ಭಾರೀ ಪ್ರಮಾಣದಲ್ಲಿ ಸ್ಥಳೀಯರು ಸೇರಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:52 am, Fri, 6 October 23