ಜ್ಯೋತಿಷಿಯ ಮನೆಯಲ್ಲಿ ಲಕ್ಷಾಂತರ ರೂ ದೋಚಿದ ಕಳ್ಳರು Instagram ನಲ್ಲಿ ತಮ್ಮ ಸಾಹಸದ ರೀಲ್ ಪೋಸ್ಟ್ ಮಾಡಿದರು! ಆ ಮೇಲೆ ಏನಾಯಿತು?
ಜ್ಯೋತಿಷಿ ತರುಣ್ ಶರ್ಮಾ ಅವರು ಕಳ್ಳತನದ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದು, ಕಳ್ಳರ ಕುಕೃತ್ಯವನ್ನು ಸೆರೆಹಿಡಿದಿದ್ದ ಸಿಸಿಟಿವಿ ದೃಶ್ಯಗಳನ್ನು ಸಹ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಸಾಕ್ಷ್ಯಗಳ ಹೊರತಾಗಿಯೂ, ಪೊಲೀಸರಿಗೆ ಆರಂಭದಲ್ಲಿ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಆರೋಪಿಗಳ ಪೈಕಿ ಒಬ್ಬ ತಾವು ಕದ್ದ ನಗದನ್ನು ಪ್ರದರ್ಶಿಸಲು Instagram ವೀಡಿಯೊ ಮಾಡಿ, ರೀಲ್ ಅಪ್ಲೋಡ್ ಮಾಡಿದ್ದಾನೆ.
ಕಾನ್ಪುರ, ಅಕ್ಟೋಬರ್ 6: ಕಳ್ಳತನಕ್ಕೆ ಹೋಗಿದ್ದಾಗ ಆ ಮನೆಯ ಹಾಸಿಗೆಯ ಮೇಲೆ ಹಣದ ರಾಶಿ ಬಿದ್ದಿತ್ತು, ಅದನ್ನೆಲ್ಲಾ ವಿಡಿಯೊ ಮಾಡುತ್ತಿದ್ದ ಕಳ್ಳರ ಗ್ಯಾಂಗಿನ ಒಬ್ಬ ಕ್ಯಾಮರಾ ಆಪರೇಟ್ ತನ್ನ ಕೈಯಲ್ಲಿ 500 ರೂಪಾಯಿ ಕರೆನ್ಸಿ ನೋಟು (Rs 500 currency note) ಹಿಡಿದು ಜೂಮ್ ಹಾಕಿದ್ದ! ಮುಂದೆ ಕಳ್ಳರ ಗ್ಯಾಂಗ್ ಆ ಜ್ಯೋತಿಷಿಯ ಮನೆ ದೋಚಿದ್ದನ್ನು ಇನ್ಸ್ಟಾಗ್ರಾಮ್ನಲ್ಲಿ ( Instagram video) ತಮ್ಮದೂ ಒಂದು ಸಾಹಸವೆಂಬಂತೆ ರೀಲ್ ಮಾಡಿ, ಪೋಸ್ಟ್ ಮಾಡಿದ್ದರು! ಅಷ್ಟೇ.. ಮುಂದೆ ಅದನ್ನು ಡಿಜಿಟಲ್ ಟ್ರ್ಯಾಕಿಂಗ್ ಮೂಲಕ ಪೊಲೀಸರು ಕಳ್ಳರ ಪೈಕಿ ಒಬ್ಬನನ್ನು ಯಶಸ್ವಿಯಾಗಿ ಗುರುತಿಸಿ ಬಂಧಿಸಿದ್ದಾರೆ, ಶಂಕಿತರಿಂದ ಅಂದಾಜು 2 ಲಕ್ಷ ರೂಪಾಯಿ ನಗದು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ!
ಕಾನ್ಪುರದ ಜ್ಯೋತಿಷಿಯೊಬ್ಬರ ನಿವಾಸದಿಂದ ಗಣನೀಯ ಪ್ರಮಾಣದ ಹಣವನ್ನು ಕದ್ದ ಕಳ್ಳರು ಕದ್ದ ಹಣವನ್ನು ರೀಲ್ ಮಾಡಿ ಪ್ರದರ್ಶಿಸುತ್ತಾ ಇನ್‌ಸ್ಟಾಗ್ರಾಮ್ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ. ಜ್ಯೋತಿಷಿ ತರುಣ್ ಶರ್ಮಾ ಅವರು ಕಳ್ಳತನದ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದು, ಕಳ್ಳರ ಕುಕೃತ್ಯವನ್ನು ಸೆರೆಹಿಡಿದಿದ್ದ ಸಿಸಿಟಿವಿ ದೃಶ್ಯಗಳನ್ನು (CCTV footage) ಸಹ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ (Kanpur News).
UP Kanpur : Thief spread bundles of stolen notes on the bed, posted video on Instagram.
-The police caught the accused thief through surveillance, after which around ₹ 200,000 cash and two phones were also recovered from him.https://t.co/Y2xlYc76og
— Mohd. Mobassir مبشر 🇮🇳 (@03_mobassir) October 5, 2023
ಈ ಸಾಕ್ಷ್ಯಗಳ ಹೊರತಾಗಿಯೂ, ಪೊಲೀಸರಿಗೆ ಆರಂಭದಲ್ಲಿ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಆರೋಪಿಗಳ ಪೈಕಿ ಒಬ್ಬ ತಾವು ಕದ್ದ ನಗದನ್ನು ಪ್ರದರ್ಶಿಸಲು Instagram ವೀಡಿಯೊ ಮಾಡಿ, ರೀಲ್ ಅಪ್ಲೋಡ್ ಮಾಡಿದ್ದಾನೆ.
Also read: ಕ್ರೂರ-ಅತಿ ದಾರುಣ: ಹತ್ತಾರು ಕೋತಿಗಳಿಗೆ ವಿಷವಿಕ್ಕಿ ಕೊಂದ ಮನುಷ್ಯರು! ಗ್ರಾನೈಟ್ ಬಿಸಿನೆಸ್ ಕಾರಣವಾಯ್ತಾ?
ಹಾಸಿಗೆಯ ಮೇಲೆ ಹಣದ ರಾಶಿ ಬಿದ್ದಿದ್ದರಿಂದ ಕ್ಯಾಮರಾ ಆಪರೇಟ್ ಮಾಡುತ್ತಿದ್ದ ವ್ಯಕ್ತಿಯ ಕೈಯಲ್ಲಿ 500 ರೂಪಾಯಿ ಕರೆನ್ಸಿ ನೋಟುಗಳನ್ನು ಹಿಡಿದಿದ್ದ. ಡಿಜಿಟಲ್ ಟ್ರ್ಯಾಕಿಂಗ್ ಮೂಲಕ, ಪೊಲೀಸರು ಕಳ್ಳರಲ್ಲಿ ಒಬ್ಬನನ್ನು ಯಶಸ್ವಿಯಾಗಿ ಗುರುತಿಸಿ ಬಂಧಿಸಿದ್ದಾರೆ, ಶಂಕಿತರಿಂದ ಅಂದಾಜು 2 ಲಕ್ಷ ರೂಪಾಯಿ ನಗದು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:40 am, Fri, 6 October 23