ಪ್ರಾದೇಶಿಕ ವಿಮಾನಗಳ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಬೆನ್ನಲ್ಲೇ ಅಂತಾರಾಷ್ಟ್ರೀಯ ವಿಮಾನಗಳ ಓಡಾಟವನ್ನೂ ಪುನಾರಂಭಿಸುವುದಾಗಿ ತಿಳಿಸಿದೆ. ಜೂನ್ ಇಲ್ಲವೇ ಜುಲೈನಲ್ಲಿ ಭಾರತದಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟ ಪುನಾರಂಭಗೊಳ್ಳುವ ಸಾಧ್ಯತೆ ಇದೆ.
ಕೊರೊನಾ ಕೂಪದಲ್ಲಿ ಭಾರತ:
ಭಾರತದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕಿಲ್ಲರ್ ಕೊರೊನಾ ಕಬಂದಬಾಹುಗಳನ್ನ ಚಾಚುತ್ತಲೇ ಇದೆ. ಈಗಾಗ್ಲೇ ಭಾರತದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ 25 ಸಾವಿರದ ಗಡಿ ದಾಟಿದ್ದು, ಇದುವರೆಗೂ ಸುಮಾರು 51 ಸಾವಿರ ಜನ ಗುಣಮುಖರಾಗಿದ್ದಾರೆ. ಈವರೆಗೂ 3 ಸಾವಿರದ 700 ಜನ ಕೊರೊನಾಗೆ ಬಲಿಯಾಗಿದ್ದಾರೆ.
ವಲಸೆ ಕಾರ್ಮಿಕರಿಂದ ದರೋಡೆ:
ಒಂದ್ಕಡೆ ಭಾರತದಲ್ಲಿ ಕಾರ್ಮಿಕರ ಮಹಾವಲಸೆ ಶುರುವಾಗಿದ್ದರೆ, ಇನ್ನೊಂದ್ಕಡೆ ಕಾರ್ಮಿಕರು ರೈಲು ನಿಲ್ದಾಣಗಳಲ್ಲಿ ದರೋಡೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗ್ತಿವೆ. ಹೀಗೆ ಉತ್ತರ ಪ್ರದೇಶದಲ್ಲಿ ವಲಸೆ ಕಾರ್ಮಿಕರು ನಿಲ್ದಾಣದಲ್ಲಿದ್ದ ವಾಟರ್ ಬಾಟಲ್ಗಳನ್ನ ಕದ್ದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.