ಕರ್ನಾಟಕದ ಶಿವಮೊಗ್ಗದಲ್ಲಿರುವ ಐಸಿಸ್ (ISIS) ಮಾಡ್ಯೂಲ್‌ನ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಶನಿವಾರ ಮಧ್ಯಪ್ರದೇಶ (Madhya pradesh) ಮತ್ತು ಮಹಾರಾಷ್ಟ್ರದ (Maharashtra) ಐದು ಸ್ಥಳಗಳಲ್ಲಿ ಶೋಧ ನಡೆಸಿದೆ. ಸುಳಿವುಗಳನ್ನು ಆಧರಿಸಿ ಕೇಂದ್ರ ತನಿಖಾ ಸಂಸ್ಥೆಯು ಶಂಕಿತರಾದ ತಲ್ಹಾ ಖಾನ್ ನ ಪುಣೆಯಲ್ಲಿರುವ ಮನೆ ಮತ್ತು ಅಕ್ರಮ್ ಖಾನ್ನ ಸಿಯೋನಿಯಲ್ಲಿರುವ (ಮಧ್ಯಪ್ರದೇಶ) ಮನೆಯನ್ನು ಶೋಧಿಸಿದೆ.
ದೆಹಲಿಯ ಓಖ್ಲಾದಲ್ಲಿ ಕಾಶ್ಮೀರಿ ದಂಪತಿ ಜಹಾನ್‌ಝೈಬ್ ಸಮಿ ವಾನಿ ಮತ್ತು ಅವರ ಪತ್ನಿ ಹಿನಾ ಬಶೀರ್ ಬೀಗ್ ಅವರನ್ನು ಬಂಧಿಸಿದ ನಂತರ ದೆಹಲಿ ಪೊಲೀಸ್ ವಿಶೇಷ ಸೆಲ್ ಆರಂಭದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿತು. ಇವರಿಬ್ಬರೂ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ಐಎಸ್‌ಕೆಪಿ) ನಂಟು ಹೊಂದಿದ್ದರು ಎಂದು ಕಂಡುಬಂದಿದೆ. ತನಿಖೆಯ ಸಮಯದಲ್ಲಿ, ಎನ್‌ಐಎ ಮತ್ತೊಂದು ಪ್ರಕರಣದಲ್ಲಿ ಈಗಾಗಲೇ ತಿಹಾರ್ ಜೈಲಿನಲ್ಲಿರುವ ಅಬ್ದುಲ್ಲಾ ಬಸಿತ್ ಎಂಬ ಇನ್ನೊಬ್ಬ ಆರೋಪಿಯ ಪಾತ್ರವನ್ನು ಪತ್ತೆ ಮಾಡಿದೆ.
ಶಂಕಿತ ಅಬ್ದುಲ್ ಅಜೀಜ್ ಸಲಾಫಿ ಮತ್ತು ಶೋಬ್ ಖಾನ್ನ ವಸತಿ ಮತ್ತು ವಾಣಿಜ್ಯ ಆವರಣಗಳನ್ನು ಒಳಗೊಂಡಿರುವ ಸಿಯೋನಿಯ ಇತರ ಮೂರು ಸ್ಥಳಗಳಲ್ಲಿ ಶೋಧ ನಡೆಸಿರುವುದಾಗಿ ಎನ್ಐಎ ತಿಳಿಸಿದೆ.
ಮೊಹಮ್ಮದ್ ಶಾರಿಕ್, ಮಾಜ್ ಮುನೀರ್ ಖಾನ್, ಯಾಸಿನ್ ಮತ್ತು ಇತರರು ಗೋದಾಮುಗಳು, ಹಾರ್ಡ್‌ವೇರ್ ಅಂಗಡಿಗಳು, ವಾಹನಗಳು, ಮದ್ಯದ ಅಂಗಡಿಗಳು ಮತ್ತು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಇತರ ಆಸ್ತಿಗಳು ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳನ್ನು ಗುರಿಯಾಗಿಸಿಕೊಂಡು 25 ಕ್ಕೂ ಹೆಚ್ಚು ಬೆಂಕಿ ಮತ್ತು ವಿಧ್ವಂಸಕ ಕೃತ್ಯಗಳನ್ನು ಎಸಗಿದ್ದಾರೆ ಎಂದು ಎನ್‌ಐಎ ತನಿಖೆಯು ಕಂಡುಹಿಡಿದಿದೆ. ಮೂವರು ಅಣಕು IED ಸ್ಫೋಟವನ್ನು ಸಹ ನಡೆಸಿದ್ದು, ಆನ್‌ಲೈನ್ ಹ್ಯಾಂಡ್ಲರ್‌ನಿಂದ ಕ್ರಿಪ್ಟೋಕರೆನ್ಸಿಗಳ ಮೂಲಕ ಹಣವನ್ನು ಪಡೆದಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿದೆ.
ಎನ್‌ಐಎ ಪ್ರಕಾರ, ಶಾರಿಕ್ ಕಳೆದ ವರ್ಷ ನವೆಂಬರ್ 19 ರಂದು ಇವರು ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ಐಇಡಿ ಸ್ಫೋಟ ನಡೆಸಲು ಯೋಜಿಸಿದ್ದರು. ಆದರೆ ಅದು ಗುರಿ ತಲುಪುವ ಮುನ್ನ ಮಾರ್ಗದಲ್ಲೇ ಸ್ಫೋಟವಾಗಿತ್ತು. 40 ವರ್ಷದ ಸಿಯೋನಿ ಜಮಾ ಮಸೀದಿಯ ಧರ್ಮಗುರು ಅಬ್ದುಲ್ ಸಲಫಿ ಮತ್ತು ಆಟೋಮೊಬೈಲ್ ಬಿಡಿಭಾಗಗಳ ಮಾರಾಟಗಾರ ಶೋಬ್ (26) ಪಾತ್ರವನ್ನು ಎನ್‌ಐಎ ಕಂಡುಹಿಡಿದಿದೆ. ಇವರು ಚುನಾವಣೆಯಲ್ಲಿ ಮತ ಚಲಾಯಿಸುವುದು ಮುಸ್ಲಿಮರಿಗೆ ಪಾಪದ ವಿಷಯ ಎಂಬಂತಹ ‘ವಿನಾಶಕಾರಿ’ ವಿಚಾರಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ.
ಮೌಲಾನಾ ಅಜೀಜ್ ಸಲಾಫಿ ನೇತೃತ್ವದ ಮತ್ತೊಂದು ಗುಂಪು ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ದಕ್ಷಿಣದ ಹಲವು ರಾಜ್ಯಗಳಲ್ಲಿ ಯೂಟ್ಯೂಬ್‌ನಲ್ಲಿ ಪ್ರಚೋದನಕಾರಿ ಭಾಷಣಗಳ ಮೂಲಕ ಮುಸ್ಲಿಂ ಯುವಕರನ್ನು ಆಮೂಲಾಗ್ರಗೊಳಿಸುವಲ್ಲಿ ತೊಡಗಿದೆ ಎಂದು ಎನ್‌ಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಶೋಧದ ವೇಳೆ ವಶಪಡಿಸಿಕೊಂಡ ದಾಖಲೆಗಳ ಪ್ರಕಾರ, ಆಮೂಲಾಗ್ರ ಗುಂಪು ಅಫ್ಘಾನಿಸ್ತಾನ ಸೇರಿದಂತೆ ವಿವಿಧ ಜಿಹಾದಿ ಥಿಯೇಟರ್‌ಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಮತ್ತು ಘಟನೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂದು ಕಂಡುಬಂದಿದೆ.
ಇಂತಹ ಸುಳ್ಳು ಪ್ರಚಾರದ ಪ್ರಸಾರಕ್ಕಾಗಿ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಿದ್ದರು. ಅಂತಹ ಪ್ರಯತ್ನಗಳ ಮುಂದುವರಿಕೆಯಾಗಿ, ಅಜೀಜ್ ಸಲಫಿ ಬಂಧಿತ ಆರೋಪಿ ಕರ್ನಾಟಕದ ಮಾಜ್ ಮುನೀರ್ ಅಹ್ಮದ್ ಜೊತೆ ಸಂಪರ್ಕದಲ್ಲಿದ್ದರು. ಅಹ್ಮದ್ ಪ್ರಯೋಗ ಸ್ಫೋಟಕ್ಕೆ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದ ಎಂದು ಎನ್ಐಎ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ