ಸಾಂವಿಧಾನಿಕ ನಿಬಂಧನೆಗಳನ್ನು ಹೆಚ್ಚು ದುರುಪಯೋಗಪಡಿಸಿಕೊಂಡ ಪಕ್ಷ ಕಾಂಗ್ರೆಸ್: ಮೋದಿ ವಾಗ್ದಾಳಿ

|

Updated on: Feb 09, 2023 | 5:44 PM

Narendra Modi: ಪ್ರತಿಪಕ್ಷದ ಸಂಸದರು ಪ್ರಧಾನಿಗೆ ಬಿಲಿಯನೇರ್ ಗೌತಮ್ ಅದಾನಿಯೊಂದಿಗೆ ಸಂಬಂಧವಿದೆ ಘೋಷಣೆಗಳನ್ನು ಕೂಗುತ್ತಿದ್ದಂತೆ ಮಾತು ಮುಂದುವರಿಸಿದ ಮೋದಿ ಇದಷ್ಟೇ ಅಲ್ಲ, ಒಬ್ಬ ಪ್ರಧಾನಿ 'ಆರ್ಟಿಕಲ್ 356' ಅನ್ನು 50 ಬಾರಿ ಬಳಸಿ ಅರ್ಧಶತಕ ಬಾರಿಸಿದ್ದಾರೆ. ಅವರ ಹೆಸರು ಶ್ರೀಮತಿ ಇಂದಿರಾ ಗಾಂಧಿ ಎಂದಿದ್ದಾರೆ.

ಸಾಂವಿಧಾನಿಕ ನಿಬಂಧನೆಗಳನ್ನು ಹೆಚ್ಚು ದುರುಪಯೋಗಪಡಿಸಿಕೊಂಡ ಪಕ್ಷ ಕಾಂಗ್ರೆಸ್: ಮೋದಿ ವಾಗ್ದಾಳಿ
ನರೇಂದ್ರ ಮೋದಿ
Follow us on

ರಾಜ್ಯ ಸರ್ಕಾರಗಳಿಗೆ ಕೇಂದ್ರ ಕಿರುಕುಳ ನೀಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಸುದೀರ್ಘ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿರುವುದರಿಂದ ಫೆಡರಲಿಸಂನ (federalism) ಮಹತ್ವವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಸಹಕಾರಿ-ಸ್ಪರ್ಧಾತ್ಮಕ ಫೆಡರಲಿಸಂಗೆ ಸರ್ಕಾರವು ಪದೇ ಪದೇ ಒತ್ತು ನೀಡಿದೆ ಎಂದು ಹೇಳಿದ್ದಾರೆ. ನಾವು, ನಮ್ಮ ನೀತಿಗಳಲ್ಲಿ, ರಾಷ್ಟ್ರೀಯ ಪ್ರಗತಿಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದು ಪ್ರಾದೇಶಿಕ ಆಕಾಂಕ್ಷೆಗಳನ್ನು ಸಹ ಪರಿಹರಿಸಿದ್ದೇವೆ. “ನಮ್ಮ ನೀತಿಯಲ್ಲಿ ರಾಷ್ಟ್ರೀಯ ಪ್ರಗತಿ ಮತ್ತು ಪ್ರಾದೇಶಿಕ ಮಹತ್ವಾಕಾಂಕ್ಷೆಯ ಪರಿಪೂರ್ಣ ಸಂಯೋಜನೆಯು ಗೋಚರಿಸುತ್ತದೆ ಎಂದಿದ್ದಾರೆ ಮೋದಿ.

356 ನೇ ವಿಧಿಯ ಅಡಿಯಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ರಾಜ್ಯಗಳ ಮೇಲೆ ಹಿಡಿತ ಸಾಧಿಸಿದ ಇತಿಹಾಸಕ್ಕಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಸಾಂವಿಧಾನಿಕ ನಿಬಂಧನೆಗಳನ್ನು ಹೆಚ್ಚು ದುರುಪಯೋಗಪಡಿಸಿಕೊಂಡ ಮತ್ತು ಚುನಾಯಿತ ರಾಜ್ಯ ಸರ್ಕಾರಗಳನ್ನು ಇಚ್ಛೆಯಂತೆ ಉರುಳಿಸಿದ ಹಳೆಯ ಪಕ್ಷ ಇದು ಎಂದಿದ್ದಾರೆ.

ಪ್ರತಿಪಕ್ಷದ ಸಂಸದರು ಪ್ರಧಾನಿಗೆ ಬಿಲಿಯನೇರ್ ಗೌತಮ್ ಅದಾನಿಯೊಂದಿಗೆ ಸಂಬಂಧವಿದೆ ಘೋಷಣೆಗಳನ್ನು ಕೂಗುತ್ತಿದ್ದಂತೆ ಮಾತು ಮುಂದುವರಿಸಿದ ಮೋದಿ ಇದಷ್ಟೇ ಅಲ್ಲ, ಒಬ್ಬ ಪ್ರಧಾನಿ ‘ಆರ್ಟಿಕಲ್ 356’ ಅನ್ನು 50 ಬಾರಿ ಬಳಸಿ ಅರ್ಧಶತಕ ಬಾರಿಸಿದ್ದಾರೆ. ಅವರ ಹೆಸರು ಶ್ರೀಮತಿ ಇಂದಿರಾ ಗಾಂಧಿ ಎಂದಿದ್ದಾರೆ.

ನೆಹರು ನೇತೃತ್ವದ ಸರ್ಕಾರವು ಕೇರಳದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಮೊದಲ ಕಮ್ಯುನಿಸ್ಟ್ ಸರ್ಕಾರವನ್ನು ಹೇಗೆ ವಜಾಗೊಳಿಸಿತು ಎಂಬುದನ್ನು ನೆನಪಿಸುವ ಮೂಲಕ ಎಡಪಕ್ಷ- ಕಾಂಗ್ರೆಸ್ ಮೈತ್ರಿ ಬಗ್ಗೆ ಮೋದಿ ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: Narendra Modi: ರೈಲ್ವೆ ನಿಲ್ದಾಣಗಳಲ್ಲಿ ರೂಫ್ ಪ್ಲಾಜಾ; ರೈಲ್ವೆ ಸಚಿವರಿಗೆ ಮೋದಿ ಕೊಟ್ಟ ಸಖತ್ ಪ್ಲಾನ್!

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ಮೋದಿಯವರು ತಮ್ಮ ಉತ್ತರವನ್ನು ಪ್ರಾರಂಭಿಸುತ್ತಿದ್ದಂತೆ, ಪ್ರತಿಪಕ್ಷಗಳ ಸಂಸದರು ರಾಜ್ಯಸಭೆಯಲ್ಲಿ “ಮೋದಿ-ಅದಾನಿ ಭಾಯಿ-ಭಾಯ್” ಘೋಷಣೆಗಳನ್ನು ಕೂಗಿದ್ದಾರೆ.. ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಈ ಸದನದಲ್ಲಿ ಏನು ಹೇಳಲಾಗಿದೆ ಎಂಬುದನ್ನು ದೇಶವು ಎಚ್ಚರಿಕೆಯಿಂದ ಕೇಳುತ್ತದೆ. ಕೆಲವು ಸಂಸದರು ಈ ಸದನಕ್ಕೆ ಅಪಖ್ಯಾತಿ ತರುತ್ತಿದ್ದಾರೆ” ಎಂದಿದ್ದಾರೆ.

ಅಡುಗೆ ಅನಿಲ ಪಡೆಯುವ ಕಾಯುವ ಅವಧಿಯನ್ನು ತೆಗೆದುಹಾಕುವುದರಿಂದ ಹಿಡಿದು ಎಲ್ಲರಿಗೂ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ವಿದ್ಯುತ್ ಸಂಪರ್ಕ ಮೊದಲಾದ ತಮ್ಮ ಸರ್ಕಾರದ ಸಾಧನೆಗಳನ್ನು ತಮ್ಮ 90 ನಿಮಿಷಗಳ ಭಾಷಣದಲ್ಲಿ, ಮೋದಿ ವಿವರಿಸಿದ್ದಾರೆ.

“ಕಳೆದ 3-4 ವರ್ಷಗಳಲ್ಲಿ ಸುಮಾರು 11 ಕೋಟಿ ಮನೆಗಳು ನಲ್ಲಿ ನೀರಿನ ಸಂಪರ್ಕ ಪಡೆದಿವೆ. ಸಾಮಾನ್ಯ ಜನರ ಸಬಲೀಕರಣದ ಕುರಿತು ಮಾತನಾಡುತ್ತಾ, ನಾವು ಜನ್ ಧನ್ ಖಾತೆ ಆಂದೋಲನವನ್ನು ಪ್ರಾರಂಭಿಸಿದ್ದೇವೆ. ಕಳೆದ 9 ವರ್ಷಗಳಲ್ಲಿ ದೇಶಾದ್ಯಂತ 48 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ