AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Narendra Modi: ರೈಲ್ವೆ ನಿಲ್ದಾಣಗಳಲ್ಲಿ ರೂಫ್ ಪ್ಲಾಜಾ; ರೈಲ್ವೆ ಸಚಿವರಿಗೆ ಮೋದಿ ಕೊಟ್ಟ ಸಖತ್ ಪ್ಲಾನ್!

ಸಾಮಾನ್ಯವಾಗಿ ನಗರದ ಮಧ್ಯ ಭಾಗದಲ್ಲಿ ಅಂಗಡಿ-ಮುಂಗಟ್ಟುಗಳಿಗೆ ಜಾಗೆಯ ತೊಂದರೆಯಿರುತ್ತದೆ. ರೂಫ್ ಪ್ಲಾಜಾ ಆ ತೊಂದರೆಯನ್ನು ನಿವಾರಿಸಿ ಅನೇಕ ವ್ಯಾಪಾರಸ್ಥರಿಗೆ ಸಹಾಯ ಮಾಡುತ್ತದೆ. ರೈಲ್ವೆ ನಿಲ್ದಾಣ ಬರಿ ಪ್ರಯಾಣಿಕರಿಗೆ ಮಾತ್ರ ಸೀಮಿತವಾಗಬಾರದು, ಸಾಮಾನ್ಯ ಜನರಿಗೂ ಉಪಯೋಗವಾಗಬೇಕು

Narendra Modi: ರೈಲ್ವೆ ನಿಲ್ದಾಣಗಳಲ್ಲಿ ರೂಫ್ ಪ್ಲಾಜಾ; ರೈಲ್ವೆ ಸಚಿವರಿಗೆ ಮೋದಿ ಕೊಟ್ಟ ಸಖತ್ ಪ್ಲಾನ್!
ರೈಲ್ವೆ ನಿಲ್ದಾಣಗಳಲ್ಲಿ ರೂಫ್ ಟಾಪ್ ಪ್ಲಾಜಾImage Credit source: Business League
TV9 Web
| Updated By: Digi Tech Desk|

Updated on:Feb 09, 2023 | 4:58 PM

Share

ಭಾರತದ ಭವಿಷ್ಯದ ಕುರಿತು ಯೋಚಿಸಿ ಅಭಿವೃದ್ಧಿ ಯೋಜನೆಗಳನ್ನು ಭಾರತೀಯರಿಗೆ ನೀಡುವುದು ಪ್ರಧಾನಿ ಮೋದಿಯವರ ಮಂತ್ರವಾಗಿದೆ. ಇದೀಗ ಇಂತಹ ಒಂದು ವಿಶಿಷ್ಟ ರೈಲ್ವೇ ಅಭಿವೃದ್ಧಿ ಯೋಜನೆ ಭಾರತೀಯರಿಗೆ ಸಿಗಲಿದೆ.

ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ (Ashwin Vaishnav), ಮೋದಿ ನೀಡಿರುವ ರೈಲು ನಿಲ್ದಾಣಗಳ ಮೇಲಿನ ರೂಫ್ ಪ್ಲಾಜಾ ಕಲ್ಪನೆಯನ್ನು ಹಂಚಿಕೊಂಡಿದ್ದಾರೆ. ಈ ಯೋಜನೆ ಮುಂದಿನ 50 ವರ್ಷಗಳವರೆಗೆ ರೈಲ್ವೇ ಮೂಲಸೌಕರ್ಯವನ್ನು ಪರಿವರ್ತಿಸುತ್ತದೆ. “ಪ್ರಧಾನಿಯವರು ನಮಗೆ 50 ರೈಲ್ವೆ ಸ್ಟೇಷನ್​ ಗಳನ್ನು ಅಭಿವೃದ್ಧಿಗೊಳಿಸಲು ಟಾರ್ಗೆಟ್ ನೀಡಿದ್ದರು. ನಾವು ಅವರ ಆದೇಶದಂತೆ 50 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಯೋಜನೆಗಳನ್ನು ಮೋದಿಯವರ ಬಳಿ ಸಮಾಲೋಚನೆ ನಡೆಸಿದೆವು. ಸುಮಾರು 2 ಗಂಟೆಗಳ ಕಾಲ ಅಭಿವೃದ್ಧಿ ಯೋಜನೆಯನ್ನು ಪ್ರಧಾನಿಯವರಿಗೆ ತಿಳಿಸಿದ ನಂತರವೂ ಅವರು ಆ ಯೋಜನೆ ನೋಡಿ ಸಂತೋಷ ಪಡಲಿಲ್ಲ. ನಂತರ ಆ ದಿನ ರಾತ್ರಿ ನನಗೆ ಕರೆ ಮಾಡಿ ನೀವು ಮಾಡಿರು ಯೋಜನೆ ಇಂದಿಗೆ ಪರಿಪೂರ್ಣವಾಗಿದೆ. ಆದರೆ ಭಾರತದ ಭವಿಷ್ಯವನ್ನು ನೋಡಿದರೆ ಈ ಯೋಜನೆಯಲ್ಲಿ ಸುಧಾರಣೆ ಬೇಕಾಗುತ್ತದೆ ಎಂದರು.” ಎಂದು ಅಶ್ವಿನ್ ವೈಷ್ಣವ್ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಅದಾನಿ ಟೋಪಿ ಹಾಕಿದ್ದು ಹೀಗೆ ಎಂದು ವ್ಯಂಗ್ಯದ ಟ್ವೀಟ್ ಮೂಲಕ ಕುಟುಕಿದ ಮಹುವಾ ಮೊಯಿತ್ರಾ

“ನಂತರ ಮೋದಿಯವರೇ ಒಂದು ಉಪಾಯವನ್ನೂ ನೀಡಿದರು. ರೈಲ್ವೆ ನಿಲ್ದಾಣಗಳ ಮೇಲೆ ರೂಫ್ ಪ್ಲಾಜಾ ಮಾಡಬಹುದು. ಇದರಿಂದ ನಗರ ಅಭಿವೃದ್ಧಿಯೂ ಆಗುತ್ತದೆ, ಜೊತೆಗೆ ಅನಗತ್ಯವಾಗಿ ನಿಲ್ದಾಣದ ಜಾಗವು ವ್ಯರ್ಥವಾಗುವುದಿಲ್ಲ. ಸಾಮಾನ್ಯವಾಗಿ ನಗರದ ಮಧ್ಯ ಭಾಗದಲ್ಲಿ ಅಂಗಡಿ-ಮುಂಗಟ್ಟುಗಳಿಗೆ ಜಾಗೆಯ ತೊಂದರೆಯಿರುತ್ತದೆ. ರೂಫ್ ಪ್ಲಾಜಾ ಆ ತೊಂದರೆಯನ್ನು ನಿವಾರಿಸಿ ಅನೇಕ ವ್ಯಾಪಾರಸ್ಥರಿಗೆ ಸಹಾಯ ಮಾಡುತ್ತದೆ. ರೈಲ್ವೆ ನಿಲ್ದಾಣ ಬರಿ ಪ್ರಯಾಣಿಕರಿಗೆ ಮಾತ್ರ ಸೀಮಿತವಾಗಬಾರದು, ಸಾಮಾನ್ಯ ಜನರಿಗೂ ಉಪಯೋಗವಾಗಬೇಕು ಎಂದು ಮೋದಿ ಅವರು ಒಂದು ಉತ್ತಮ ಉಪಾಯ ನೀಡಿದ್ದಾರೆ” ಎಂದು ಅಶ್ವಿನ್ ವೈಷ್ಣವ್ ಹೇಳಿದ್ದಾರೆ

Published On - 4:42 pm, Thu, 9 February 23

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ