ಇದು ‘ಮೋದಿ ಕಿ ಗ್ಯಾರಂಟಿ’; ಪ್ರಧಾನಿ ನರೇಂದ್ರ ಮೋದಿ ಭೇಟಿಗಾಗಿ ಧನ್ಯವಾದ ಸಲ್ಲಿಸಿದ ಭೂತಾನ್ ಪಿಎಂ

|

Updated on: Mar 23, 2024 | 7:30 PM

ನಮ್ಮನ್ನು ಭೇಟಿ ಮಾಡಿದ್ದಕ್ಕಾಗಿ ನನ್ನ ಸಹೋದರ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಅವರ ಬಿಡುವಿಲ್ಲದ ವೇಳಾಪಟ್ಟಿಯಾಗಲೀ ಅಥವಾ ಪ್ರತಿಕೂಲ ಹವಾಮಾನವಾಗಲೀ ನಮ್ಮನ್ನು ಭೇಟಿ ಮಾಡುವ ಭರವಸೆಯನ್ನು ಪೂರೈಸುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಇದು ಮೋದಿ ಕಿ ಗ್ಯಾರಂಟಿ ಸಂಗತಿ ಎಂದು ಭೂತಾನ್ ಪಿಎಂ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದಿದ್ದಾರೆ.

ಇದು ‘ಮೋದಿ ಕಿ ಗ್ಯಾರಂಟಿ’; ಪ್ರಧಾನಿ ನರೇಂದ್ರ ಮೋದಿ ಭೇಟಿಗಾಗಿ ಧನ್ಯವಾದ ಸಲ್ಲಿಸಿದ ಭೂತಾನ್ ಪಿಎಂ
ಭೂತಾನ್ ಪ್ರಧಾನಿ ಜತೆ ಮೋದಿ
Follow us on

ಥಿಂಪು ಮಾರ್ಚ್ 23: ಪ್ರತಿಕೂಲ ಹವಾಮಾನ ಮತ್ತು ಲೋಕಸಭೆ ಚುನಾವಣೆಗೆ ಮುನ್ನ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ತಮ್ಮ ದೇಶಕ್ಕೆ ಭೇಟಿ ನೀಡಿದ್ದಕ್ಕಾಗಿ ಭೂತಾನ್ ಪ್ರಧಾನಿ ತ್ಶೆರಿಂಗ್ ಟೊಬ್ಗೇ (Tshering Tobgay)ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ರಾಜ್ಯ ಪ್ರವಾಸದ ಭರವಸೆಯನ್ನು ಈಡೇರಿಸುವುದು ಮೋದಿ ಕಿ ಗ್ಯಾರಂಟಿ ಎಂದು ಅವರು ಹೇಳಿದರು.

ನಮ್ಮನ್ನು ಭೇಟಿ ಮಾಡಿದ್ದಕ್ಕಾಗಿ ನನ್ನ ಸಹೋದರ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಅವರ ಬಿಡುವಿಲ್ಲದ ವೇಳಾಪಟ್ಟಿಯಾಗಲೀ ಅಥವಾ ಪ್ರತಿಕೂಲ ಹವಾಮಾನವಾಗಲೀ ನಮ್ಮನ್ನು ಭೇಟಿ ಮಾಡುವ ಭರವಸೆಯನ್ನು ಪೂರೈಸುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಇದು ಮೋದಿ ಕಿ ಗ್ಯಾರಂಟಿ ಸಂಗತಿ!” ಎಂದ ಪ್ರಧಾನಿ ಮೋದಿಯವರು ತಮ್ಮ ಭೇಟಿಯನ್ನು ಮುಗಿಸಿ ಭಾರತಕ್ಕೆ ಹೊರಟ ನಂತರ X ನ ಪೋಸ್ಟ್‌ನಲ್ಲಿ ಟೊಬ್ಗೇ ಹೇಳಿದ್ದಾರೆ.

ಟೊಬ್ಗೇ ಟ್ವೀಟ್


ಪಾರೋ ವಿಮಾನ ನಿಲ್ದಾಣದ ಮೇಲೆ ಪ್ರತಿಕೂಲ ಹವಾಮಾನದಿಂದಾಗಿ ತಮ್ಮ ಭೇಟಿಯನ್ನು ಮುಂದೂಡಿದ ಒಂದು ದಿನದ ನಂತರ ಪ್ರಧಾನಿ ಮೋದಿ ಭೂತಾನ್‌ಗೆ ಪ್ರಯಾಣ ಬೆಳೆಸಿದರು. ಶುಕ್ರವಾರ ಬೆಳಗ್ಗೆ ಪ್ರಧಾನಿ ಮೋದಿ ಅವರು ತಮ್ಮ ರಾಜ್ಯ ಭೇಟಿಯ ಸಂದರ್ಭದಲ್ಲಿ ಆತಿಥ್ಯ ನೀಡಿದ ಭೂತಾನ್ ಕಿಂಗ್ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್‌ಚುಕ್ ಮತ್ತು ಪಿಎಂ ಟೋಬ್‌ಗೇ ಅವರಿಗೆ ಧನ್ಯವಾದ ಅರ್ಪಿಸಿದರು.

ಮೋದಿ ಟ್ವೀಟ್


ವಿಶೇಷ ಸೂಚಕವಾಗಿ,  ತೊಬ್ಗೇ ಅವರ ಜತೆ ಭೂತಾನ್ ರಾಜರು  ಪಾರೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯನ್ನು ಬೀಳ್ಕೊಡಲು ಬಂದಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿ, “ನಾನು ದೆಹಲಿಗೆ ಹೊರಡುವಾಗ ವಿಮಾನ ನಿಲ್ದಾಣಕ್ಕೆ ಬಂದಿರುವ ಹಿಸ್ ಮೆಜೆಸ್ಟಿ ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್‌ಗೈಲ್ ವಾಂಗ್‌ಚುಕ್ ಅವರ ವಿಶೇಷ ಉಪಸ್ಥಿತಿಯಿಂದ ನನ್ನನ್ನು ಗೌರವಿಸಲಾಗಿದೆ” ಎಂದು ಹೇಳಿದ್ದಾರೆ.

ಭೂತಾನ್‌ಗೆ ತನ್ನ ರಾಜ್ಯ ಭೇಟಿ ಬಹಳ ವಿಶೇಷವಾದದ್ದು ಎಂದು ವಿವರಿಸಿದ ಪ್ರಧಾನಿ ಮೋದಿ, ಭಾರತ ಯಾವಾಗಲೂ ಭೂತಾನ್‌ಗೆ ವಿಶ್ವಾಸಾರ್ಹ ಸ್ನೇಹಿತ ಮತ್ತು ಪಾಲುದಾರ ಎಂದು ಹೇಳಿದರು.

ಇದನ್ನೂ ಓದಿ: ಬಂಧನ, ಇಡಿ ಕಸ್ಟಡಿ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೊರೆ ಹೋದ ಅರವಿಂದ್ ಕೇಜ್ರಿವಾಲ್

” ಸನ್ಮಾನ್ಯ ರಾಜ, ಪ್ರಧಾನಿ ತೋಬ್ಗೇ ಮತ್ತು ಭೂತಾನ್‌ನ ಇತರ ಪ್ರತಿಷ್ಠಿತ ಜನರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ನಮ್ಮ ಮಾತುಕತೆಗಳು ಭಾರತ-ಭೂತಾನ್ ಸ್ನೇಹಕ್ಕೆ ಇನ್ನಷ್ಟು ಚೈತನ್ಯವನ್ನು ನೀಡುತ್ತವೆ. ನಾನು ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋವನ್ನು ನೀಡಿದ್ದಕ್ಕಾಗಿ ಕೃತಜ್ಞನಾಗಿದ್ದೇನೆ. ಭೂತಾನ್‌ನ ಅದ್ಭುತ ಜನರಿಗೆ ಅವರ ಪ್ರೀತಿ ಮತ್ತು ಆತಿಥ್ಯಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಭಾರತವು ಯಾವಾಗಲೂ ಭೂತಾನ್‌ಗೆ ವಿಶ್ವಾಸಾರ್ಹ ಸ್ನೇಹಿತ ಮತ್ತು ಪಾಲುದಾರನಾಗಿರಲಿದೆ” ಎಂದು ಮೋದಿ ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:30 pm, Sat, 23 March 24