ಲಂಚ ಕೇಳಿದ ಜಗತಿಯಾಲ್ ಸರ್ಕಾರಿ ನೌಕರನಿಗೆ ಜನ ಹೇಗೆ ಸತ್ಕಾರ ಮಾಡಿದರು ನೋಡಿ!

|

Updated on: Dec 12, 2023 | 5:54 PM

ಇತ್ತೀಚೆಗೆ ಔರಂಗಾಬಾದ್‌ನಲ್ಲಿ ಅಲ್ಲಿನ ಅಧಿಕಾರಿಯೊಬ್ಬರು ಲಂಚ ನೀಡುವಂತೆ ಸರಪಂಚ ಒಬ್ಬರನ್ನು ಕೇಳಿದಾಗ ಆ ಸರಪಂಚ್​​ ಸರ್ಕಾರಿ ಕಛೇರಿಯ ಮುಂದೆ ಕರೆನ್ಸಿ ನೋಟುಗಳ ಹಾರ ಹಾಕಿಕೊಂಡು ಪ್ರತಿಭಟನೆ ನಡೆಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಬಹುದು.

ಲಂಚ ಕೇಳಿದ ಜಗತಿಯಾಲ್ ಸರ್ಕಾರಿ ನೌಕರನಿಗೆ ಜನ ಹೇಗೆ ಸತ್ಕಾರ ಮಾಡಿದರು ನೋಡಿ!
ಲಂಚ ಕೇಳಿದ ಜಗತಿಯಾಲ್ ಸರ್ಕಾರಿ ನೌಕರನಿಗೆ ಜನರಿಂದ ವಿಭಿನ್ನ ಸತ್ಕಾರ
Follow us on

ಲಂಚ… ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ರೂಢಿಯಾಗಿಬಿಟ್ಟಿದೆ. ಸರ್ಕಾರಿ ನೌಕರರು ತಾವು ನಿರ್ವಹಿಸುವ ಕರ್ತವ್ಯಕ್ಕೆ ಹಣ ವಸೂಲಿ ಮಾಡುವ ಮೂಲಕ ಕಾನೂನಿಗೆ ವಿರುದ್ಧವಾಗಿ ವರ್ತಿಸುತ್ತಾರೆ. ಆದರೆ ಇನ್ನು ಕೆಲವರು ಇರುತ್ತಾರೆ ಎಷ್ಟೋ ಒಂದಷ್ಟು ತಮ್ಮ ಕೈಲಾದ ಮಟ್ಟಿಗೆ ಕೊಟ್ಟು ತಮ್ಮ ಕೆಲಸವನ್ನು ಪೂರ್ಣಗೊಳಿಸೋಣ ಎಂಬಂತೆ ವರ್ತಿಸುತ್ತಾರೆ. ಆದರೆ ಇನ್ನೂ ಕೆಲವರು ಇರುತ್ತಾರೆ ತಮ್ಮನ್ನು ಲಂಚ (Bribe) ಕೇಳಿದವರಿಗೆ ಜನ್ಮ ಜಾಲಾಡಿಬಿಡುತ್ತಾರೆ. ಇತ್ತೀಚೆಗೆ ಲಂಚ ಕೇಳಿದ ಅಧಿಕಾರಿಯೊಬ್ಬರನ್ನು (Jagtial Government Employee) ನಿನ್ನೆ ಸೋಮವಾರ ಸಕಲ ಸರ್ಕಾರಿ ಗೌರವಗಳೊಂದಿಗೆ (Currency Garland ) ಸತ್ಕರಿಸಿದ್ದಾರೆ. ಅಂದರೆ ಇನ್ನೆಂದಿಗೂ ಆ ನೌಕರ ಲಂಚ ಕೇಳದಂತೆ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿವರಗಳಿಗೆ ಹೋದರೆ… ಮೀನುಗಾರರ ಸೊಸೈಟಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲೆಯ ಅಧಿಕಾರಿಯೊಬ್ಬರ ಕೊರಳಿಗೆ ಕರೆನ್ಸಿ ನೋಟುಗಳಿಂದ ಹಾರ ಹಾಕಿ, ಆತನ ಭ್ರಷ್ಟಾಚಾರವನ್ನು ಜಗಜ್ಜಾಹೀರುಗೊಳಿಸಿದ್ದಾರೆ. ಒಂದೆಡೆ ಸಾರ್ವಜನಿಕವಾಗಿ ಕರೆ ಮಾಡಿ, ಜಿಲ್ಲಾಧಿಕಾರಿಗೆ ದೂರು ನೀಡುತ್ತಲೇ ಮತ್ತೊಂದೆಡೆ ಆ ಭ್ರಷ್ಟ ಅಧಿಕಾರಿಯ ಕೊರಳಿಗೆ ಕರೆನ್ಸಿ ನೋಟುಗಳ ಹಾರ ಹಾಕಿರುವುದು ಇದೀಗ ಸಂಚಲನ ಮೂಡಿಸಿದೆ. ಘಟನೆಯ ವಿವರವೇನೆಂದರೆ… ಜಗತಿಯಾಲ್ ಜಿಲ್ಲಾ ಕೇಂದ್ರದ ಮೀನುಗಾರಿಕಾ ಇಲಾಖೆ ಅಧಿಕಾರಿ ದಮ್‌ದಾರ್ ಸೊಸೈಟಿಗಳನ್ನು ಸ್ಥಾಪಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ನಿತ್ಯ ಅಧಿಕಾರಿಯ ಕಚೇರಿಗೆ ಅಂಡಲೆದಾಡುತ್ತಿದ್ದಾಗಿ ಮೀನುಗಾರಿಕಾ ಸಂಘಗಳ ಪ್ರತಿನಿಧಿಗಳು ಆರೋಪಿಸಿದ್ದಾರೆ.

ಸೊಸೈಟಿಗಳನ್ನು ಸ್ಥಾಪಿಸಲು ಲಂಚ ನೀಡುವಂತೆ ಮೀನುಗಾರಿಕಾ ಇಲಾಖೆ ಅಧಿಕಾರಿ ದಾಮೋದರ್ ಒತ್ತಾಯಿಸಿದ್ದಾರೆ. ಅದರಿಂದಾಗಿ ಬೇರೆ ದಾರಿ ಕಾಣದೆ ಆ ಅಧಿಕಾರಿಯ ಕುತ್ತಿಗೆಗೆ ಕರೆನ್ಸಿ ನೋಟುಗಳ ಹಾರ ಹಾಕಬೇಕಾಯಿತು. ಮೊದಲು ಅಧಿಕಾರಿ ಕಚೇರಿಯಲ್ಲಿ ಜಮಾಯಿಸಿದ ಮೀನುಗಾರರು ಕಚೇರಿಯಿಂದ ಆತನನ್ನು ಹೊರಗೆಳೆದು ಆತನ ಕೊರಳಿಗೆ ಕರೆನ್ಸಿ ನೋಟುಗಳಿದ್ದ ಹಾರ ಹಾಕಿದೆವು ಎಂದು ಸಂಘಗಳ ಪ್ರತಿನಿಧಿಗಳು ಅಲವತ್ತುಕೊಂಡಿದ್ದಾರೆ. ಅಧಿಕಾರಿಯ ಕಚೇರಿಯಲ್ಲಿ ಮೀನುಗಾರರು ಹೀಗೆ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗಷ್ಟೇ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಅಲ್ಲಿನ ಅಧಿಕಾರಿ ಲಂಚ ನೀಡುವಂತೆ ಸರಪಂಚರೊಬ್ಬರನ್ನು ಕೇಳಿದಾಗ ಆ ಸರಪಂಚ್​​ ಸರ್ಕಾರಿ ಕಛೇರಿಯ ಮುಂದೆ ಕರೆನ್ಸಿ ನೋಟುಗಳ ಹಾರ ಹಾಕಿಕೊಂಡು ಪ್ರತಿಭಟನೆ ನಡೆಸಿದ್ದರು. ಆ ಘಟನೆ ಉನ್ನತ ಮಟ್ಟದ ತನಿಖೆ, ಚರ್ಚೆಗೆ ಕಾರಣವಾಗಿತ್ತು ಎಂಬುದನ್ನು ಸ್ಮರಿಸಬಹುದು.

ಪ್ರಸ್ತುತ ಪ್ರಕರಣದಲ್ಲಿ ಮೀನುಗಾರಿಕಾ ಇಲಾಖೆ ಅಧಿಕಾರಿ ದಮ್‌ದಾರ್ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಜಿಲ್ಲಾಧಿಕಾರಿ ಯಾಸ್ಮಿನ್ ಭಾಷಾ ಘೋಷಿಸಿದ್ದಾರೆ. ಅಧಿಕಾರಿಯಿಂದ ವಿವರಣೆ ಪಡೆದ ನಂತರ ಇಲಾಖಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ