ಪರೀಕ್ಷೆಗೆ ಒಂದು ದಿನ ಮೊದಲು ಫ್ಲೈಓವರ್​ನಿಂದ ಕೆಳಗೆ ಹಾರಿದ ಜಾಮಿಯಾ ವಿದ್ಯಾರ್ಥಿ

|

Updated on: May 06, 2024 | 8:01 AM

ಜಾಮಿಯಾ-ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ನರ್ಸಿಂಗ್​ ವಿದ್ಯಾರ್ಥಿ ಮೇಲ್ಸೇತುವೆಯಿಂದ ಹಾರಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಆತ ಬಿಎಸ್​ಸಿ ನರ್ಸಿಂಗ್​ 5ನೇ ಸೆಮಿಸ್ಟರ್​ ವಿದ್ಯಾರ್ಥಿಯಾಗಿದ್ದ.

ಪರೀಕ್ಷೆಗೆ ಒಂದು ದಿನ ಮೊದಲು ಫ್ಲೈಓವರ್​ನಿಂದ ಕೆಳಗೆ ಹಾರಿದ ಜಾಮಿಯಾ ವಿದ್ಯಾರ್ಥಿ
ಪೊಲೀಸ್​
Image Credit source: India Today
Follow us on

ಪರೀಕ್ಷೆಗೆ ಒಂದು ದಿನ ಬಾಕಿ ಇರುವಾಗ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ನರ್ಸಿಂಗ್​ ವಿದ್ಯಾರ್ಥಿಯೊಬ್ಬ ಫ್ಲೈಓವರ್​ನಿಂದ ಕೆಳಗೆ ಹಾರಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಬಿಕೆ ಪೊಲೀಸ್​ ಠಾಣೆಯ ಮೋಟಾರ್​ ಸೈಕಲ್ ಗಸ್ತು ತಿರುಗುತ್ತಿದ್ದಾಗ ವಿದ್ಯಾರ್ಥಿ ಸೇತುವೆಯಿಂದ ಕೆಳಗೆ ಬಿದ್ದಿರುವುದು ಕಂಡಿದೆ. ಲಲಿತ್​ ಹೋಟೆಲ್ ಬಳಿಕ ರಂಜಿತ್ ಸಿಂಗ್ ಮೇಲ್ಸೇತುವೆಯಲ್ಲಿ ಘಟನೆ ನಡೆದಿದೆ.

ವಿದ್ಯಾರ್ಥಿ ಮೊದಲು ಬ್ಯಾಗ್​ ಅನ್ನು ಕೆಳಗೆ ಎಸೆದು ಬಳಿಕ ಅಲ್ಲಿಂದ ಜಿಗಿದಿದ್ದಾನೆ ಎಂದು ಪೊಲೀಸ್​ ತನಿಖೆಯಿಂದ ತಿಳಿದುಬಂದಿದೆ. ವಿದ್ಯಾರ್ಥಿಯನ್ನು ಲೇಡಿ ಹಾರ್ಡಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ಗಾಯಗೊಂಡ ವಿದ್ಯಾರ್ಥಿಯನ್ನು 25 ವರ್ಷದ ಮೊಹಮ್ಮದ್ ಚಂದ್ ಎಂದು ಗುರುತಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಮೊಹಮ್ಮದ್ ರಂಜಿತ್ ಸಿಂಗ್ ಫ್ಲೈಓವರ್​ ಬಳಿ ಬಂದಿದ್ದ, ಮೊದಲು ಬ್ಯಾಗ್​ ಅನ್ನು ಹೋಟೆಲ್​ ಲಲಿತ್ ಕಡೆ ಎಸೆದಿದ್ದಾನೆ. ಬಳಿಕ ತಾನು ಜಿಗಿದಿದ್ದಾನೆ.

ಮತ್ತಷ್ಟು ಓದಿ: ಕೋಟಾ: ನೀಟ್​ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮತ್ತೋರ್ವ ವಿದ್ಯಾರ್ಥಿ ಆತ್ಮಹತ್ಯೆ

ಆತ ಬಿಹಾರದ ವೈಶಾಲಿ ಜಿಲ್ಲೆಯವನು ಪಟೇಲ್​ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಕುಟುಂಬಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿರುವುದರ ಹಿಂದಿನ ಕಾರಣ ಇನ್ನೂ ಬಹಿರಂಗವಾಗಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ