ಈ ಮಕ್ಕಳ ತಂದೆ ನಾನಲ್ಲ ಎಂದು ಪತಿ ಹೇಳಿದ್ದಕ್ಕೆ ಪತ್ನಿಯೊಬ್ಬಳು ತನ್ನ ನವಜಾತ ಶಿಶುಗಳ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದಿದೆ. ತಾಯಿಯೊಬ್ಬಳು ತನ್ನ ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾಳೆ. ತನ್ನ ಪತಿ ತನ್ನನ್ನು ಮಕ್ಕಳ ತಂದೆ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ ಮಹಿಳೆ ತನ್ನ ನವಜಾತ ಅವಳಿ ಮಕ್ಕಳ ಕತ್ತು ಸೀಳಿದ್ದಾಳೆ ಎಂದು ಹೇಳಲಾಗುತ್ತಿದೆ.
ತನ್ನ ಶಿಶುವನ್ನು ಹೊಲಕ್ಕೆ ಕರೆದೊಯ್ದು ಅಲ್ಲಿ ಹತ್ಯೆ ಮಾಡಿದ್ದಾಳೆ, ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ಪೂಂಚ್‌ನಲ್ಲಿ ನಡೆದ ಈ ಘಟನೆ ನಡೆದಿದೆ. ಎನ್ಡಿಟಿವಿ ವರದಿ ಪ್ರಕಾರ, ಮೂರು ತಿಂಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಬಹಳ ಸಮಯದ ನಂತರ ಮನೆಗೆ ಮರಳಿದ್ದರು, ಸ್ವಲ್ಪವೇ ಸಮಯದ ಬಳಿಕ ಅವಳಿ ಮಕ್ಕಳಿಗೆ ಜನ್ಮ ನೀಡಿದಾಗ ಆತ ಪೊಲೀಸರ ಬಳಿ ಹೋಗಿ ಅಕ್ರಮ ಸಂಬಂಧದಿಂದ ತನ್ನ ಪತ್ನಿ ಮಕ್ಕಳನ್ನು ಪಡೆದಿದ್ದಾಳೆ ಎಂದು ಹೇಳಿದ್ದರು.
ಇದನ್ನು ತಿಳಿದ ಮಹಿಳೆ ಕೂಡಲೇ ನವಜಾತ ಶಿಶುಗಳನ್ನು ಹೊಲಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾಳೆ. ಸ್ಥಳೀಯರು ಆರಂಭದಲ್ಲಿ ವ್ಯಕ್ತಿಯೇ ಕೊಲೆ ಮಾಡಿದ್ದಾನೆ ಎಂದು ಶಂಕಿಸಿದ್ದರು ಆದರೆ ಪೊಲೀಸರು ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆಕೆ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ.
ಮತ್ತಷ್ಟು ಓದಿ: ಕೊಲೆಯತ್ನ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ ಉದ್ಯಮಿಯ ಹತ್ಯೆ
ಆ ಕ್ರೂರ ತಾಯಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಏನೂ ಅರಿಯದ ಮುಗ್ಧ ಕಂದಮ್ಮಗಳು ಸರಿಯಾಗಿ ಕಣ್ಣುಬಿಡುವ ಮುನ್ನವೇ ಶಾಶ್ವತವಾಗಿ ಕಣ್ಮುಚ್ಚಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ