Jharkhand: ಹೋಳಿಯಂದು ಪೊಲೀಸ್ ಠಾಣೆಯಲ್ಲೇ ಎಣ್ಣೆ ಪಾರ್ಟಿ, ಬಣ್ಣ ಹಚ್ಚಿಕೊಂಡು, ಬಾಟಲಿ ಹಿಡಿದು ತೂರಾಡಿದ ಐವರು ಪೊಲೀಸರ ಅಮಾನತು

|

Updated on: Mar 10, 2023 | 8:26 AM

ಹೋಳಿ ಹಬ್ಬದಂದು ಪೊಲೀಸ್ ಠಾಣೆಯಲ್ಲೇ ಮದ್ಯಪಾನ ಮಾಡಿ, ಬಣ್ಣ ಹಚ್ಚಿಕೊಂಡು ತೂರಾಡಿದ್ದ ಐವರು ಪೊಲೀಸರನ್ನು ಅಮಾನತುಗೊಳಿಸಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

Jharkhand: ಹೋಳಿಯಂದು ಪೊಲೀಸ್ ಠಾಣೆಯಲ್ಲೇ ಎಣ್ಣೆ ಪಾರ್ಟಿ, ಬಣ್ಣ ಹಚ್ಚಿಕೊಂಡು, ಬಾಟಲಿ ಹಿಡಿದು ತೂರಾಡಿದ ಐವರು ಪೊಲೀಸರ ಅಮಾನತು
ಅಮಾನತುಗೊಂಡ ಪೊಲೀಸರು
Image Credit source: India Today
Follow us on

ಹೋಳಿ ಹಬ್ಬದಂದು ಪೊಲೀಸ್ ಠಾಣೆಯಲ್ಲೇ ಮದ್ಯಪಾನ ಮಾಡಿ, ಬಣ್ಣ ಹಚ್ಚಿಕೊಂಡು ತೂರಾಡಿದ್ದ ಐವರು ಪೊಲೀಸರನ್ನು ಅಮಾನತುಗೊಳಿಸಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ, ಮಹಾಗಾಮಾ ಪೊಲೀಸ್ ಠಾಣೆಯೊಳಗೆ ಹೋಳಿ ಆಚರಿಸುವಾಗ ಮದ್ಯ ಸೇವಿಸಿ ನೃತ್ಯ ಮಾಡಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರನ್ನು ಅಮಾನತುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ವೀಡಿಯೊದಲ್ಲಿ, ಕೆಲವು ಪೊಲೀಸರು ಹೋಳಿ ಹಾಡಿಗೆ ಡ್ಯಾನ್ಸ್ ಮಾಡುವುದನ್ನು ಕಂಡುಬಂದಿತ್ತು. ಮದ್ಯ ಸೇವಿಸಿ ಪರಸ್ಪರ ಬಣ್ಣಗಳನ್ನು ಹಚ್ಚಿಕೊಳ್ಳುತ್ತಾರೆ. ವ್ಯಕ್ತಿಯೊಬ್ಬ ಮದ್ಯದ ಲೋಟವನ್ನು ತಲೆಯ ಮೇಲೆ ಇಟ್ಟು ಡ್ಯಾನ್ಸ್ ಮಾಡುತ್ತಿರುವುದು ಕೂಡ ಕಂಡು ಬಂದಿದೆ. ಅವರಲ್ಲಿ ಕೆಲವರು ಸಮವಸ್ತ್ರದಲ್ಲಿದ್ದರು.

ಮತ್ತಷ್ಟು ಓದಿ: Bengaluru News: ಹಣಕೀಳಲು ವ್ಯಕ್ತಿಯೊಬ್ಬರ ಬ್ಯಾಗ್​ನಲ್ಲಿ ಗಾಂಜಾ ಇಟ್ಟ ಇಬ್ಬರು ಕಾನ್ಸ್​ಟೆಬಲ್​ಗಳು ಅಮಾನತು

ಪೊಲೀಸ್ ವರಿಷ್ಠಾಧಿಕಾರಿ ನಾಥು ಸಿಂಗ್ ಮೀನಾ ಅವರು ಘಟನೆಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ಜಾರಿಗೆ ಬರುವಂತೆ ಐವರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ. ಅಮಾನತುಗೊಂಡಿರುವ ಪೊಲೀಸರಲ್ಲಿ ಇಬ್ಬರು ಎಎಸ್‌ಐಗಳು ಮತ್ತು ಮೂವರು ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ. ಅವರೆಂದರೆ ಬಿಪಿನ್ ಬಿಹಾರಿ ರೈ, ರಾಧಾ ಕೃಷ್ಣ ಸಿಂಗ್, ಸತ್ಯೇಂದ್ರ ನಾರಾಯಣ ಸಿಂಗ್, ಕೃಷ್ಣ ಕುಮಾರ್ ಸಿಂಗ್ ಮತ್ತು ಪ್ಯಾರೆ ಮೋಹನ್ ಸಿಂಗ್.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published On - 8:25 am, Fri, 10 March 23