ಕರ್ನಾಟಕದಲ್ಲಿ ಎರಡು ಕೋಟಿ+ ಗ್ರಾಹಕರ ನೆಲೆಯನ್ನು ದಾಟಿದ Jio

| Updated By:

Updated on: Jul 31, 2020 | 12:17 AM

ಕೇವಲ 3 ವರ್ಷಗಳಲ್ಲಿ, ಜಿಯೋ ಭಾರತೀಯರೆಲ್ಲರನ್ನೂ ಡೇಟಾದ ಶಕ್ತಿಯೊಂದಿಗೆ ಸಶಕ್ತರನ್ನಾಗಿಸುವ ಕೆಲಸ ಮಾಡಿದೆ. ದೇಶದ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ರೂಪಿಸುವಲ್ಲಿ ಜಿಯೋ ಮಹತ್ತರ ಪಾತ್ರ ವಹಿಸಿದೆ. ಜಿಯೋದಿಂದಾಗಿ ಮೊಬೈಲ್ ಡೇಟಾ ಬಳಕೆಯಲ್ಲಿ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನ ಪಡೆದಿದೆ. ರಾಷ್ಟ್ರದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್ ಆದ ಜಿಯೋ ಈಗ ಕರ್ನಾಟಕದಲ್ಲಿ ಎರಡು ಕೋಟಿಗೂ ಹೆಚ್ಚು ಗ್ರಾಹಕರ ನೆಲೆಯನ್ನು ಪಡೆದುಕೊಂಡಿದೆ. ಕರ್ನಾಟಕದಲ್ಲಿನ ನೈಜ 4ಜಿ ಆಪರೇಟರ್ ಆದ ಜಿಯೋ ಟೆಲಿಕಾಂ ಉದ್ಯಮವು ಸಂಖ್ಯೆಗಳ ಕುಗ್ಗುವಿಕೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೂ […]

ಕರ್ನಾಟಕದಲ್ಲಿ ಎರಡು ಕೋಟಿ+ ಗ್ರಾಹಕರ ನೆಲೆಯನ್ನು ದಾಟಿದ Jio
Follow us on

ಕೇವಲ 3 ವರ್ಷಗಳಲ್ಲಿ, ಜಿಯೋ ಭಾರತೀಯರೆಲ್ಲರನ್ನೂ ಡೇಟಾದ ಶಕ್ತಿಯೊಂದಿಗೆ ಸಶಕ್ತರನ್ನಾಗಿಸುವ ಕೆಲಸ ಮಾಡಿದೆ. ದೇಶದ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ರೂಪಿಸುವಲ್ಲಿ ಜಿಯೋ ಮಹತ್ತರ ಪಾತ್ರ ವಹಿಸಿದೆ. ಜಿಯೋದಿಂದಾಗಿ ಮೊಬೈಲ್ ಡೇಟಾ ಬಳಕೆಯಲ್ಲಿ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನ ಪಡೆದಿದೆ. ರಾಷ್ಟ್ರದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್ ಆದ ಜಿಯೋ ಈಗ ಕರ್ನಾಟಕದಲ್ಲಿ ಎರಡು ಕೋಟಿಗೂ ಹೆಚ್ಚು ಗ್ರಾಹಕರ ನೆಲೆಯನ್ನು ಪಡೆದುಕೊಂಡಿದೆ.

ಕರ್ನಾಟಕದಲ್ಲಿನ ನೈಜ 4ಜಿ ಆಪರೇಟರ್ ಆದ ಜಿಯೋ ಟೆಲಿಕಾಂ ಉದ್ಯಮವು ಸಂಖ್ಯೆಗಳ ಕುಗ್ಗುವಿಕೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೂ ನಿರಂತರವಾಗಿ ಬೆಳೆಯುತ್ತಿದೆ. ಜಿಯೋಗೆ ನಿರಂತರ ಗ್ರಾಹಕ ಸೇರ್ಪಡೆ, ಜಿಯೋ ಸೇವೆ ಮತ್ತು ಬ್ರಾಂಡ್‌ನ ಕುರಿತು ಇರುವ ಗ್ರಾಹಕರ ಒಲವು ಅದಕ್ಕೆ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಗ್ರಾಹಕರು ಜಿಯೋನ ವ್ಯಾಪಕವಾದ, ವೇಗವಾದ ಮತ್ತು ಅತಿದೊಡ್ಡದಾದ 4ಜಿ ನೆಟ್‌ವರ್ಕ್​ನ ಬಳಸಿರುವುದರಿಂದ ಸದ್ಯ ಕೊವಿಡ್ ಕಾಲದಲ್ಲೂ ಜಿಯೋಗೆ ಬೇಡಿಕೆ ಇದೆ.

ಜಿಯೋ ಡಿಜಿಟಲ್ ಲೈಫ್​ನ ತ್ವರಿತವಾಗಿ ಸ್ವೀಕರಿಸಿದ ಮತ್ತು ಸುಲಭವಾಗಿ ಕೈಗೆಟುಕುವ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಆನಂದಿಸುತ್ತಿರುವ ಕರ್ನಾಟಕದ ಎಲ್ಲಾ ಚಂದಾದಾರರಿಗೆ ಜಿಯೋ ತನ್ನ ಧನ್ಯವಾದಗಳನ್ನು ಸಮರ್ಪಿಸುತ್ತದೆ.

ಭಾರತವನ್ನು 2ಜಿ ಮುಕ್ತವಾಗಿಸುವ ಮತ್ತು ನೈಜ 4ಜಿ ಸೇವೆಗಳೊಂದಿಗೆ ಭಾರತೀಯರೆಲ್ಲರನ್ನೂ ಸಶಕ್ತರನ್ನಾಗಿಸುವ ಏಕೈಕ ಉದ್ದೇಶದಿಂದ, ಜಿಯೋ ತನ್ನ ಗ್ರಾಹಕರಿಗೆ ಎಲ್ಲ ಟ್ಯಾರಿಫ್ ಪ್ಲಾನ್‌ಗಳಲ್ಲೂ ಮಾರುಕಟ್ಟೆ ದರದ ಹೋಲಿಕೆಯಲ್ಲಿ ಶೇಕಡಾ 25 ರಷ್ಟು ಹೆಚ್ಚಿನ ಮೌಲ್ಯವನ್ನು ನೀಡುತ್ತಿದೆ.

ತನ್ನ ಪ್ರಸ್ತುತ ನೆಟ್‌ವರ್ಕ್‌ ಮತ್ತು ಮೂಲಸೌಕರ್ಯದಲ್ಲಿ ಯೋಜಿತ ಹೆಚ್ಚಳದಿಂದ ಜಿಯೋ ರಾಜ್ಯದ ಪ್ರತಿಯೊಂದು ಮನೆಗೂ ತನ್ನ ಸೇವೆ ತಲುಪುತ್ತದೆಂದು ನಂಬುತ್ತದೆ. ಜೊತೆಗೆ, ಜಿಯೋ ಡಿಜಿಟಲ್ ಲೈಫ್‌ನ ಉಪಯೋಗಗಳನ್ನೂ ನೀಡುತ್ತದೆ. ಅವು ಹೀಗಿವೆ:

1. ಸದೃಢ ಹಾಗೂ ವಿಸ್ತಾರವಾದ 4ಜಿ ನೆಟ್‌ವರ್ಕ್ ಆದ ಜಿಯೋನಲ್ಲಿ ರಾಜ್ಯಾದ್ಯಂತ ತೊಡಕಿಲ್ಲದ ಸಂಪರ್ಕ
2. ಜಿಯೋನ ಅಪರಿಮಿತ ವಾಯ್ಸ್ ಮತ್ತು ಡೇಟಾ ಪ್ರಯೋಜನಗಳು
3. ಜಿಯೋ ಟಿವಿ (ಅತ್ಯಂತ ಜನಪ್ರಿಯವಾದ ಆನ್ ದಿ ಗೋ, ಕ್ಯಾಚ್-ಅಪ್ ಟಿವಿ ಌಪ್), ಜಿಯೋ ಮ್ಯೂಸಿಕ್, ಜಿಯೋ ಸಿನೆಮಾ, ಜಿಯೋ ಸಾವನ್ ಮತ್ತಿತರ ಇನ್​ಹೌಸ್ ಌಪ್‌ಗಳ ಮೂಲಕ ದೊಡ್ಡ ಪ್ರಮಾಣದ ಜಿಯೋ ಪ್ರೀಮಿಯಂ ಕಂಟೆಂಟ್ ಪಡೆದುಕೊಳ್ಳುವ ಅವಕಾಶ
4. ಸರಳ ಮತ್ತು ಅನುಕೂಲಕರ ಆನ್-ಬೋರ್ಡಿಂಗ್ ಪ್ರಕ್ರಿಯೆಯೊಂದಿಗೆ ರಾಜ್ಯಾದ್ಯಂತ ಜಿಯೋ ಸಿಮ್‌ಗಳ ಸುಲಭ ಲಭ್ಯತೆ

ಕೊರೊನಾ ಮಹಾಮಾರಿಯ ಸಮಯದಲ್ಲಿ, ಅಂತರ್ಜಾಲವು ನಾವು ಕೆಲಸಮಾಡುವ ವಿಧಾನವನ್ನು ಬದಲಿಸಿದೆ. ಜೊತೆಗೆ ಶಿಕ್ಷಣ ಕ್ಷೇತ್ರ ಹಾಗೂ ಮನೆಯಿಂದ ಕೆಲಸ ಮಾಡುವ ಅವಕಾಶ ಕಲ್ಪಿಸಿದೆ. ಸರಿಸಾಟಿಯಿಲ್ಲದ ಸಂಪರ್ಕ ಮತ್ತು ಡೇಟಾ ವೇಗದ ಸಹಾಯದಿಂದ ಈ ಸೇವೆಯು ದೊಡ್ಡ ಪಟ್ಟಣಗಳಿಗೆ ಮಾತ್ರ ಸೀಮಿತವಾಗದೆ ಕರ್ನಾಟಕದ ಇತರೆ ಭಾಗಗಳಿಗೂ ತಲುಪುತ್ತಿದೆ.

ಜಿಯೋನ ಅಭೂತಪೂರ್ವ ವ್ಯಾಪ್ತಿ ಮತ್ತು ಉತ್ತಮ ನೆಟ್‌ವರ್ಕ್ ಅನುಭವವು ಗ್ರಾಹಕರು ಡಿಜಿಟಲ್ ತಂತ್ರಜ್ಞಾನವನ್ನು ಬಳಸಲು ಉತ್ತೇಜನೆ ನೀಡುತ್ತಿದೆ. ಜೊತೆಗೆ, ಕಲಿಕೆಯ ಅನೇಕ ಹೊಸ ಮಾರ್ಗಗಳಿಗೆ ಬಾಗಿಲು ತೆರೆದಿದ್ದು ಭವಿಷ್ಯದ ಭರವಸೆಯ ಚಿತ್ರಣವನ್ನು ಕಟ್ಟಿಕೊಡುತ್ತಿದೆ. ಇದರಿಂದ ಗ್ರಾಹಕರಿಗೆ ಮನೆಯಿಂದಲೇ ಕೆಲಸ ಮಾಡಲು, ಕಲಿಯಲು, ಆರೋಗ್ಯದ ಬಗ್ಗೆ ಕಾಳಜಿ ವಹಿಸಲು, ಶಾಪಿಂಗ್ ಮಾಡಲು ಮತ್ತು ವೈಯಕ್ತಿಕ ಹಾಗೂ ವೃತ್ತಿಪರ ಡಿಜಿಟಲ್ ಸಂಪರ್ಕಗಳನ್ನು ಸಾಧಿಸಲು ಅನುವುಮಾಡಿಕೊಟ್ಟಿದೆ.

ಕೊರೊನಾ ಕಾಲದಲ್ಲಿ ಜಿಯೋ ತಂಡ ಯಾವುದೇ ತೊಡಕಿಲ್ಲದಂತೆ ಕೆಲಸ ಮಾಡಿದೆ. ತನ್ನ ಎಲ್ಲ ಗ್ರಾಹಕರಿಗೂ ಉತ್ತಮ ಸಂಪರ್ಕವನ್ನು ಖಚಿತಪಡಿಸಿದೆ. ಟವರ್‌ಗಳಿಗೆ ಇಂಧನ ತುಂಬಿಸುವುದು, ರೀಚಾರ್ಜ್‌ಗಳನ್ನು ಸಕ್ರಿಯಗೊಳಿಸುವುದು ಹೀಗೆ ಅಡಚಣೆಗಳಿಲ್ಲದ ಡೇಟಾ ಸ್ಟ್ರೀಮಿಂಗ್ ಸಾಧ್ಯವಾಗಿಸಲು ಜಿಯೋ ತಂಡ ಯಾವಾಗಲೂ ತಯಾರು.

ಜಿಯೋಫೈಬರ್ ಪ್ರಾರಂಭಿಕ ಹಂತದಲ್ಲಿ ಕರ್ನಾಟಕದ ವಿವಿಧ ನಗರಗಳಲ್ಲಿ 20 ಲಕ್ಷಕ್ಕೂ ಹೆಚ್ಚಿನ ಮನೆಗಳನ್ನು ಸಂಪರ್ಕಿಸಲು ಜಿಯೋ ಯೋಜಿಸಿದೆ. ಜಿಯೋಫೈಬರ್ ಗ್ರಾಹಕರಿಗೆ 1 ಗಿಗಾಬೈಟ್‌ವರೆಗಿನ ವೇಗ (100 ಎಂಬಿಪಿಎಸ್ ವೇಗದಿಂದ ಪ್ರಾರಂಭ) ಮತ್ತು 4ಕೆ ಎಚ್‌ಡಿ ಸೆಟ್‌ ಟಾಪ್ ಬಾಕ್ಸ್ ಮೂಲಕ ಅಂತರ್ಗತವಾಗಿರುವ ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ಸ್ಟಾರ್,  ಜ಼ೀ 5, ಆಲ್ಟ್ ಬಾಲಾಜಿ, ಕಲರ್ಸ್, ಸನ್ ನೆಕ್ಸ್ಟ್, ವೂಟ್ ಮುಂತಾದ ಅನೇಕ ಒಟಿಟಿ ವೇದಿಕೆಗಳ ಕಂಟೆಂಟ್ ಒದಗಿಸುವ ಭರವಸೆ ನೀಡುತ್ತದೆ.

ಲಿವ್ ಲೈಫ್ ಎನ್ನುವುದು ಜಿಯೋನ ಆಶಯ. ಜಿಯೋ ಸೇರಿರಿ ಮತ್ತು ಸ್ಪರ್ಧಾತ್ಮಕ ದರಗಳು ಹಾಗೂ ಕರ್ನಾಟಕದಾದ್ಯಂತ ನೈಜ 4ಜಿ ಸೇವೆಗಳನ್ನು ಆನಂದಿಸಿ. PORT <10-ಅಂಕಿಯ ಮೊಬೈಲ್ ಸಂಖ್ಯೆ> ಎಂದು 1900ಗೆ ಸಂದೇಶ ಕಳುಹಿಸುವ ಮೂಲಕ ನೀವು ಜಿಯೋಗೆ ಪೋರ್ಟ್ ಮಾಡಬಹುದು.

Published On - 5:19 pm, Wed, 29 July 20