ಪುಲ್ವಾಮಾದಲ್ಲಿ ಮತ್ತೊಂದು ಮಹಾ ರಕ್ತಪಾತದ ಸಂಚು ವಿಫಲಗೊಳಿಸಿದ ಸೇನೆ

|

Updated on: May 28, 2020 | 2:54 PM

ಶ್ರೀನಗರ:ಪುಲ್ವಾಮಾದಲ್ಲಿ ಮತ್ತೊಂದು ಮಹಾ ರಕ್ತಪಾತದ ಸಂಚು ವಿಫಲವಾಗಿದೆ. ಕಾರಿನಲ್ಲಿ ಇಟ್ಟಿದ್ದ ಭಾರಿ ಪ್ರಮಾಣದ ಸ್ಫೋಟಕಗಳನ್ನು ಕಾರು ಸಮೇತ ಸ್ಫೋಟಕಗಳನ್ನ ಡಿಫ್ಯೂಸ್ ಮಾಡಲಾಗಿದೆ. ಭಾರತೀಯ ಸೇನೆ ಅಯಾನ್ ಗುಂಡ್ ಪ್ರದೇಶದಲ್ಲಿ ಉಗ್ರರು ರೂಪಿಸಿದ್ದ ಸಂಚನ್ನು ಪತ್ತೆ ಹಚ್ಚಿ ಅದನ್ನು ವಿಫಲಗೊಳಿಸಿದೆ. ಸ್ಫೋಟಕ ತುಂಬಿದ ಕಾರಿನೊಂದಿಗೆ ಭಯೋತ್ಪಾದಕರು ಹೋಗುತ್ತಿರುವ ಬಗ್ಗೆ ಪುಲ್ವಾಮಾ ಪೊಲೀಸರಿಗೆ ನಿನ್ನೆ ರಾತ್ರಿ ಮಾಹಿತಿ ಸಿಕ್ಕಿತ್ತು. ಮಾಹಿತಿ ದೊರೆತ ನಂತರ ಕಾರ್ಯಾಚರಣೆ ನಡೆಸಿದರು. ಐಇಡಿ ಸ್ಫೋಟದ ದುರಂತವನ್ನು ಪೊಲೀಸರು, ಸಿಆರ್‌ಪಿಎಫ್ ಮತ್ತು ಸೇನೆ ತಪ್ಪಿಸಿದೆ. #WATCH J&K: […]

ಪುಲ್ವಾಮಾದಲ್ಲಿ ಮತ್ತೊಂದು ಮಹಾ ರಕ್ತಪಾತದ ಸಂಚು ವಿಫಲಗೊಳಿಸಿದ ಸೇನೆ
Follow us on

ಶ್ರೀನಗರ:ಪುಲ್ವಾಮಾದಲ್ಲಿ ಮತ್ತೊಂದು ಮಹಾ ರಕ್ತಪಾತದ ಸಂಚು ವಿಫಲವಾಗಿದೆ. ಕಾರಿನಲ್ಲಿ ಇಟ್ಟಿದ್ದ ಭಾರಿ ಪ್ರಮಾಣದ ಸ್ಫೋಟಕಗಳನ್ನು ಕಾರು ಸಮೇತ ಸ್ಫೋಟಕಗಳನ್ನ ಡಿಫ್ಯೂಸ್ ಮಾಡಲಾಗಿದೆ. ಭಾರತೀಯ ಸೇನೆ ಅಯಾನ್ ಗುಂಡ್ ಪ್ರದೇಶದಲ್ಲಿ ಉಗ್ರರು ರೂಪಿಸಿದ್ದ ಸಂಚನ್ನು ಪತ್ತೆ ಹಚ್ಚಿ ಅದನ್ನು ವಿಫಲಗೊಳಿಸಿದೆ.

ಸ್ಫೋಟಕ ತುಂಬಿದ ಕಾರಿನೊಂದಿಗೆ ಭಯೋತ್ಪಾದಕರು ಹೋಗುತ್ತಿರುವ ಬಗ್ಗೆ ಪುಲ್ವಾಮಾ ಪೊಲೀಸರಿಗೆ ನಿನ್ನೆ ರಾತ್ರಿ ಮಾಹಿತಿ ಸಿಕ್ಕಿತ್ತು. ಮಾಹಿತಿ ದೊರೆತ ನಂತರ ಕಾರ್ಯಾಚರಣೆ ನಡೆಸಿದರು. ಐಇಡಿ ಸ್ಫೋಟದ ದುರಂತವನ್ನು ಪೊಲೀಸರು, ಸಿಆರ್‌ಪಿಎಫ್ ಮತ್ತು ಸೇನೆ ತಪ್ಪಿಸಿದೆ.

Published On - 12:34 pm, Thu, 28 May 20