Dharmendra Pradhan: ಜೆಎನ್​​ಯು ಸಂಸ್ಥೆಯಷ್ಟೇ ಅಲ್ಲ, ಅದೊಂದು ಸಂಸ್ಕೃತಿ; ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್

ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಕೇವಲ ಒಂದು ಸಂಸ್ಥೆಯಷ್ಟೇ ಅಲ್ಲ, ಅದೊಂದು ಸಂಸ್ಕೃತಿ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬಣ್ಣಿಸಿದರು. ಶುಕ್ರವಾರ ಜೆಎನ್​ಯು ಆರನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Dharmendra Pradhan: ಜೆಎನ್​​ಯು ಸಂಸ್ಥೆಯಷ್ಟೇ ಅಲ್ಲ, ಅದೊಂದು ಸಂಸ್ಕೃತಿ; ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
ಜೆಎನ್​ಯು ಘಟಿಕೋತ್ಸವದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್

Updated on: Mar 10, 2023 | 10:01 PM

ನವದೆಹಲಿ: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ (JNU) ಕೇವಲ ಒಂದು ಸಂಸ್ಥೆಯಷ್ಟೇ ಅಲ್ಲ, ಅದೊಂದು ಸಂಸ್ಕೃತಿ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಬಣ್ಣಿಸಿದರು. ಶುಕ್ರವಾರ ಜೆಎನ್​ಯು ಆರನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೆಎನ್​ಯು ಪ್ರಪಂಚದ ವೈವಿಧ್ಯಮಯ ಅಂಶಗಳನ್ನೊಳಗೊಂಡಿರುವ ವಿಶ್ವವಿದ್ಯಾಲಯವಾಗಿದೆ. ಈ ವಿಶ್ವವಿದ್ಯಾಲಯದಲ್ಲಿ ತೇರ್ಗಡೆಯಾಗಿ ಹೊರ ಹೋಗುವ ವಿದ್ಯಾರ್ಥಿಗಳು ಸಾಮಾಜಿಕ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಜೆಎನ್​ಯು ವೈವಿಧ್ಯ, ಸೂಕ್ಷ್ಮ ಸಂವೇದನೆ, ಒಳಗೊಳ್ಳುವಿಕೆ, ಸಮಾನತೆ, ಗುಣಮಟ್ಟ ಹಾಗೂ ಕೈಗೆಟಕುವ ದರದ ಶಿಕ್ಷಣದ ಪ್ರತಿಧ್ವನಿಯಾಗಿದೆ ಎಂದರು. ಇಲ್ಲಿ ಭಿನ್ನಾಭಿಪ್ರಾಯಕ್ಕೆ ಮನ್ನಣೆ ಇದೆ. ಇದು ಭಾರತದ ಡಿಎನ್​ಎ ಆಗಿದೆ. ಭಿನ್ನಾಭಿಪ್ರಾಯ ಮತ್ತು ಸಂವಾದಕ್ಕೆ ಸದಾ ಅವಕಾಶ ನೀಡುವ ಸಂಸ್ಥೆ ಇದು ಎಂದು ಸಚಿವರು ಬಣ್ಣಿಸಿದರು.

ದೇಶದ ಪ್ರಜಾಪ್ರಭುತ್ವದ ಮೂಲದ ಬಗ್ಗೆ ಜೆಎನ್​​ಯು ಸಂಶೋಧನೆ ನಡೆಸಬೇಕು. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮಾತ್ರವಲ್ಲ, ಪ್ರಜಾಪ್ರಭುತ್ವದ ತಾಯಿ. 130 ಕೋಟಿ ಭಾರತೀಯರು ಜೆಎನ್​ಯು ವಿದ್ಯಾರ್ಥಿಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಜೆಎನ್​ಯು ವಿದ್ಯಾರ್ಥಿಗಳು ಜಗತ್ತಿನ ನಾಗರಿಕರಾಗುವವರು. ಎಲ್ಲಾ ರೀತಿಯ ಹಿನ್ನೆಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡಲು ಒಂದೇ ಅವಕಾಶವನ್ನು ನೀಡುವುದಕ್ಕೆ ಜೆಎನ್​ಯು ಮಾದರಿಯಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು.

ವಿದ್ಯಾರ್ಥಿಯ ಬೆಳವಣಿಗೆಗಾಗಿ ಹಿರಿಯರು, ಶಿಕ್ಷಕರು ಮತ್ತು ಗೆಳೆಯರು ಎಲ್ಲರೂ ಒಗ್ಗೂಡುವಂಥ ಒಂದು ವಿಶಿಷ್ಟ ಸಂಸ್ಕೃತಿಯನ್ನು ಜೆಎನ್‌ಯು ಹುಟ್ಟುಹಾಕಿದೆ. ಬಹು ವೈವಿಧ್ಯತೆಯಿಂದಲೇ ಜಗತ್ತಿನಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆ ಇದು ಎಂದು ಅವರು ತಿಳಿಸಿದರು.

ಇದನ್ನೂ ಓದಿ: JNU New Rules: ವಿದ್ಯಾರ್ಥಿಗಳು ಧರಣಿ ಮಾಡಿದ್ರೆ 20 ಸಾವಿರ ರೂ, ದಂಡ, ಹಿಂಸಾಚಾರ ಮಾಡಿದ್ರೆ ಪ್ರವೇಶ ರದ್ದು

ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಿ, ಜೆಎನ್​​ಯು ಯುವ ಸಂಸ್ಥೆಯಾಗಿದ್ದು, ಭಾರತದ ಸಾಂಸ್ಕೃತಿಕ ಏಕತೆಯ ಜೀವಂತ ಪ್ರತಿಬಿಂಬವಾಗಿದೆ ಎಂದರು. ಪ್ರಸ್ತುತ ಜೆಎನ್​ಯುನಲ್ಲಿ ಮಹಿಳಾ ಸಂಶೋಧಕರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ಸಾಮಾಜಿಕ ಬದಲಾವಣೆಯ ಪ್ರಮುಖ ಸೂಚಕವಾಗಿದೆ. ಮಹಾತ್ಮ ಗಾಂಧಿಯವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲೇ ಜೆಎನ್‌ಯು ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದು ಅರ್ಥಪೂರ್ಣ ಮತ್ತು ಐತಿಹಾಸಿಕ ಎಂದು ಮುರ್ಮು ಹೇಳಿದರು.

ಈ ವಿಶ್ವವಿದ್ಯಾಲಯದಲ್ಲಿ ಭಾರತದ ಎಲ್ಲ ಭಾಗದ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ ಮತ್ತು ಕ್ಯಾಂಪಸ್‌ನಲ್ಲಿ ಒಟ್ಟಿಗೇ ವಾಸಿಸುತ್ತಾರೆ. ಇದು ದೇಶದ ಬಗ್ಗೆ ಮತ್ತು ಪ್ರಪಂಚದ ಕುರಿತಾದ ಅವರ ದೃಷ್ಟಿಕೋನವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ವಿಶ್ವವಿದ್ಯಾಲಯವು ವೈವಿಧ್ಯತೆಯ ಜತೆಗೆ ಭಾರತದ ಸಾಂಸ್ಕೃತಿಕ ಏಕತೆಯ ಜೀವಂತ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us