Sign In

By signing in or creating an account, you agree with Associated Broadcasting Company's Terms & Conditions and Privacy Policy.

JNU New Rules: ವಿದ್ಯಾರ್ಥಿಗಳು ಧರಣಿ ಮಾಡಿದ್ರೆ 20 ಸಾವಿರ ರೂ, ದಂಡ, ಹಿಂಸಾಚಾರ ಮಾಡಿದ್ರೆ ಪ್ರವೇಶ ರದ್ದು

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(JNU) ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರ ಪ್ರಕಾರ ಕಾಲೇಜಿನ ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಯು ಧರಣಿ ಮಾಡಿದರೆ 20 ಸಾವಿರ ರೂ. ಅಥವಾ 30 ಸಾವಿರ ರೂ. ದಂಡ ತೆರಬೇಕಾಗುತ್ತದೆ.

JNU New Rules: ವಿದ್ಯಾರ್ಥಿಗಳು ಧರಣಿ ಮಾಡಿದ್ರೆ 20 ಸಾವಿರ ರೂ, ದಂಡ, ಹಿಂಸಾಚಾರ ಮಾಡಿದ್ರೆ ಪ್ರವೇಶ ರದ್ದು
ಜೆಎನ್​ಯು
Follow us
ನಯನಾ ರಾಜೀವ್
|

Updated on: Mar 02, 2023 | 8:38 AM

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(JNU) ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅದರ ಪ್ರಕಾರ ಕಾಲೇಜಿನ ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಯು ಧರಣಿ ಮಾಡಿದರೆ 20 ಸಾವಿರ ರೂ. ಅಥವಾ 30 ಸಾವಿರ ರೂ. ದಂಡ ತೆರಬೇಕಾಗುತ್ತದೆ. ಹಿಂಸಾಚಾರದಲ್ಲಿ ಪಾಲ್ಗೊಂಡರೆ ಪ್ರವೇಶ ರದ್ದುಪಡಿಸಲಾಗುತ್ತದೆ ಎಂದು ಹೇಳಲಾಗಿದೆ. ಜೆಎನ್‌ಯು ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸರಿಯಾದ ನಡವಳಿಕೆಯ 10-ಪುಟದ ನಿಯಮಗಳು ಪ್ರತಿಭಟನೆ ಮತ್ತು ಫೋರ್ಜರಿಯಂತಹ ವಿವಿಧ ಕೃತ್ಯಗಳಿಗೆ ಶಿಕ್ಷೆಯನ್ನು ಸೂಚಿಸುತ್ತವೆ.

ಈ ನಿಯಮಗಳು ಫೆಬ್ರವರಿ 3 ರಿಂದ ಜಾರಿಗೆ ಬಂದಿವೆ, ಶಿಸ್ತು ಮತ್ತು ನಡವಳಿಕೆಯ ನಿಯಮಗಳು ಎಂದು ಕರೆಯಲಾಗಿದೆ. ಈ ನಿಯಮಗಳು ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ. 10 ಪುಟಗಳ ನಿಯಮದಲ್ಲಿ 17 ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಮತ್ತಷ್ಟು ಓದಿ: ಜೆಎನ್​ಯುನಲ್ಲಿ ಪೆರಿಯಾರ್, ಕಾರ್ಲ್​ ಮಾರ್ಕ್ಸ್​ ಭಾವಚಿತ್ರಗಳ ಧ್ವಂಸ: ವಿದ್ಯಾರ್ಥಿಗಳ ಈ ನಡೆಗೆ ಸ್ಟಾಲಿನ್ ಪ್ರತಿಕ್ರಿಯೆ

ಜೂಜು, ಹಾಸ್ಟೆಲ್ ಕೊಠಡಿಗಳನ್ನು ಅನಧಿಕೃತವಾಗಿ ಆಕ್ರಮಿಸಿಕೊಳ್ಳುವುದು, ನಿಂದನೀಯ ಭಾಷೆಗಳ ಬಳಕೆ, ಫೋರ್ಜರಿ ಪ್ರಕರಣಗಳು ಕೂಡ ಸೇರಿವೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇಬ್ಬರನ್ನೂ ಒಳಗೊಂಡಿರುವ ವಿಷಯಗಳನ್ನು ವಿಶ್ವವಿದ್ಯಾಲಯಕ್ಕೆ ಹಾಗೂ ಕೇಂದ್ರ ಮಟ್ಟದ ಕುಂದುಕೊರತೆ ಪರಿಹಾರ ಸಮಿತಿಗೆ ತಿಳಿಸಬಹುದು.

ಲೈಂಗಿಕ ಕಿರುಕುಳ, ರಾಗಿಂಗ್ ಹಾಗೂ ಕೋಮುಸೌಹಾರ್ದತೆಗೆ ಧಕ್ಕೆ ತರುವ ವಿಚಾರಗಳು ಪ್ರಾಕ್ಟರ್ ಕಚೇರಿಯ ವ್ಯಾಪ್ತಿಗೆ ಬರಲಿವೆ. ವಾಸ್ತವವಾಗಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದಲ್ಲಿ ಹಲವು ಪ್ರತಿಭಟನೆಗಳು ನಡೆದವು. ಈ ಕಾರಣಗಳಿಂದಾಗಿ ಹೊಸ ನಿಯಮಗಳನ್ನು ಜಾರಿಗೆ ತರುವುದು ವಿಶ್ವವಿದ್ಯಾಲಯಕ್ಕೆ ಅನಿವಾರ್ಯವಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಮಗಳ ಸಾಧನೆ ಕಂಡು ಮೂಕವಿಸ್ಮಿತನಾದ ತಂದೆಗೆ ಕಾಲೇಜು ಸಿಬ್ಬಂದಿಯಿಂದ ಸನ್ಮಾನ
ಮಗಳ ಸಾಧನೆ ಕಂಡು ಮೂಕವಿಸ್ಮಿತನಾದ ತಂದೆಗೆ ಕಾಲೇಜು ಸಿಬ್ಬಂದಿಯಿಂದ ಸನ್ಮಾನ
ಮುಂದಿನ ಹೋರಾಟ ಹೇಗೆ ಅಂತ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ: ಅಶೋಕ
ಮುಂದಿನ ಹೋರಾಟ ಹೇಗೆ ಅಂತ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ: ಅಶೋಕ
ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಫಸ್ಟ್: ಪರೀಕ್ಷೆ ತಯಾರಿ ಹೇಗಿತ್ತು?
ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಫಸ್ಟ್: ಪರೀಕ್ಷೆ ತಯಾರಿ ಹೇಗಿತ್ತು?
ಮೂರನೇ ಪರೀಕ್ಷೆ ಫಲಿತಾಂಶ ನಂತರವೇ ಪಾಸ್/ ಫೇಲ್ ಮಾರ್ಕ್ಸ್ ಕಾರ್ಡ್: ಸಚಿವ
ಮೂರನೇ ಪರೀಕ್ಷೆ ಫಲಿತಾಂಶ ನಂತರವೇ ಪಾಸ್/ ಫೇಲ್ ಮಾರ್ಕ್ಸ್ ಕಾರ್ಡ್: ಸಚಿವ
ವಾಟರ್ ಬಾಟಲ್ ಆರೋಗ್ಯಕ್ಕೆ ಮಾರಕ: ಆರೋಗ್ಯ ಸಚಿವರ ಸುದ್ದಿಗೋಷ್ಠಿ ಲೈವ್​
ವಾಟರ್ ಬಾಟಲ್ ಆರೋಗ್ಯಕ್ಕೆ ಮಾರಕ: ಆರೋಗ್ಯ ಸಚಿವರ ಸುದ್ದಿಗೋಷ್ಠಿ ಲೈವ್​
ದ್ವಿತೀಯ ಪಿಯು ಫಲಿತಾಂಶ: ಲಾರಿ ಡ್ರೈವರ್​ ಪುತ್ರಿ ಕರ್ನಾಟಕಕ್ಕೆ ಫಸ್ಟ್
ದ್ವಿತೀಯ ಪಿಯು ಫಲಿತಾಂಶ: ಲಾರಿ ಡ್ರೈವರ್​ ಪುತ್ರಿ ಕರ್ನಾಟಕಕ್ಕೆ ಫಸ್ಟ್
ಸರ್ಕಾರೀ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನ: ಸಚಿವ
ಸರ್ಕಾರೀ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನ: ಸಚಿವ