ಕೊರೊನಾ ಬಗ್ಗೆ ಕನ್ನಡದಲ್ಲೇ ಜಾಗೃತಿ ಮೂಡಿಸಿದ್ದ ಜೂ. ಎನ್​ಟಿಆರ್​ಗೆ ಕೊರೊನಾ ಸೋಂಕು ದೃಢ​

ಇತ್ತೀಚೆಗೆ ಕೊರೊನಾ ವೈರಸ್​ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ವಿಡಿಯೋವೊಂದರಲ್ಲಿ ಕನ್ನಡದಲ್ಲಿ ಮಾತನಾಡಿ, ‘ಮಾತೃ’ಭಾಷಾ ಪ್ರೇಮ ಮೆರೆದು, ಕನ್ನಡಿಗರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದ ತೆಲುಗು ಖ್ಯಾತ ನಟ ಜೂ. ಎನ್​ಟಿಆರ್ ಅವರಿಗೂ ಈಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್​ ಮಾಡಿ ತಿಳಿಸಿರುವ ಜೂ. ಎನ್​ಟಿಆರ್ ನನಗೂ ಕೊರೊನಾ ಬಂದಿದೆ. ಆದರೆ ಅಭಿಮಾನಿಗಳೂ ಅತಂಕಪಡುವುದು ಬೇಡ. ನಾನು ಆರೋಗ್ಯವಾಗಿದ್ದೇನೆ. ನಾನೂ ಮತ್ತು ನನ್ನ ಕುಟುಂಬಸ್ಥರು ಮನೆಯಲ್ಲೇ ಕ್ವಾರೆಂಟೈನ್​ ಆಗಿದ್ದೇವೆ. ವೈದ್ಯರ ನಿಗಾದಲ್ಲಿ ನಾವೆಲ್ಲ ಸಮರ್ಪಕವಾಗಿ ಚಿಕಿತ್ಸೆ […]

ಕೊರೊನಾ ಬಗ್ಗೆ ಕನ್ನಡದಲ್ಲೇ ಜಾಗೃತಿ ಮೂಡಿಸಿದ್ದ ಜೂ. ಎನ್​ಟಿಆರ್​ಗೆ ಕೊರೊನಾ ಸೋಂಕು ದೃಢ​
ಕೊರೊನಾ ಬಗ್ಗೆ ಕನ್ನಡದಲ್ಲೇ ಜಾಗೃತಿ ಮೂಡಿಸಿದ್ದ ಜೂ. ಎನ್​ಟಿಆರ್​ಗೆ ಕೊರೊನಾ ಸೋಂಕು ದೃಢ​
ಸಾಧು ಶ್ರೀನಾಥ್​

Updated on: May 10, 2021 | 3:52 PM

ಇತ್ತೀಚೆಗೆ ಕೊರೊನಾ ವೈರಸ್​ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ವಿಡಿಯೋವೊಂದರಲ್ಲಿ ಕನ್ನಡದಲ್ಲಿ ಮಾತನಾಡಿ, ‘ಮಾತೃ’ಭಾಷಾ ಪ್ರೇಮ ಮೆರೆದು, ಕನ್ನಡಿಗರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದ ತೆಲುಗು ಖ್ಯಾತ ನಟ ಜೂ. ಎನ್​ಟಿಆರ್ ಅವರಿಗೂ ಈಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್​ ಮಾಡಿ ತಿಳಿಸಿರುವ ಜೂ. ಎನ್​ಟಿಆರ್ ನನಗೂ ಕೊರೊನಾ ಬಂದಿದೆ. ಆದರೆ ಅಭಿಮಾನಿಗಳೂ ಅತಂಕಪಡುವುದು ಬೇಡ. ನಾನು ಆರೋಗ್ಯವಾಗಿದ್ದೇನೆ. ನಾನೂ ಮತ್ತು ನನ್ನ ಕುಟುಂಬಸ್ಥರು ಮನೆಯಲ್ಲೇ ಕ್ವಾರೆಂಟೈನ್​ ಆಗಿದ್ದೇವೆ. ವೈದ್ಯರ ನಿಗಾದಲ್ಲಿ ನಾವೆಲ್ಲ ಸಮರ್ಪಕವಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಇತ್ತೀಚೆಗೆ ನಮ್ಮ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ ಮತ್ತು ಜಾಗ್ರತೆ ವಹಿಸಿ ಎಂದು ತಿಳಿಸಿದ್ದಾರೆ. ​

ಜೂ. ಎನ್​ಟಿಆರ್ ಆಂಗ್ಲ ಟ್ವೀಟ್​ ಹೀಗಿದೆ: I’ve tested positive for Covid19. Plz don’t worry,I’m doing absolutely fine. My family & I have isolated ourselves & we’re following all protocols under the supervision of doctors. I request those who’ve come into contact with me over the last few days to pl get tested. Stay safe

​ಇತ್ತೀಚೆಗೆ ಕೊರೊನಾ ವೈರಸ್​ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಜೂ. ಎನ್​ಟಿಆರ್ ನೀಡಿದ್ದ ವಿಡಿಯೋ ಸಂದೇಶ ಹೀಗಿದೆ: ಎಲ್ಲರಿಗೂ ನಮಸ್ಕಾರ. ಕೋವಿಡ್​ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಹಾಗೂ​ ಸ್ಯಾನಿಟೈಸರ್​ ದೊಡ್ಡ ಅಸ್ತ್ರವಾಗಿದೆ. ಸದಾ ಮಾಸ್ಕ್​ ಧರಿಸಿ. ಕೈ ಸ್ವಚ್ಛವಾಗಿಟ್ಟುಕೊಳ್ಳಿ. ಪಬ್ಲಿಕ್​ನಲ್ಲಿ ಓಡಾಡುವಾಗ ಅಂತರ ಕಾಯ್ದುಕೊಳ್ಳಿ. ಮಾಸ್ಕ್​ ಧರಿಸುವುದಾಗಿ ಹಾಗೂ ವ್ಯಾಕ್ಸಿನ್​ ಹಾಕಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿ ಎಂದು ಕೋರಿದ್ದಾರೆ.

ಅಕ್ಟೋಬರ್​ 13ರಂದು ಆರ್​ಆರ್​ಆರ್​ ಚಿತ್ರ ತೆರೆಗೆ ತರುವುದಾಗಿ ರಾಜಮೌಳಿ ಘೋಷಣೆ ಮಾಡಿದ್ದರು. ಈ ವಿಚಾರ ಕೇಳಿ ಅಭಿಮಾನಿಗಳು ಕೂಡ ಸಖತ್​ ಖುಷಿಯಾಗಿದ್ದರು. ಆದರೆ, ಈಗ ಅಭಿಮಾನಿಗಳಿಗೆ ಬ್ಯಾಡ್​ನ್ಯೂಸ್ ಒಂದು ಸಿಕ್ಕಿದೆ. ಆರ್​ಆರ್​ಆರ್​ ಸಿನಿಮಾ ರಿಲೀಸ್​ ದಿನಾಂಕ 2022ಕ್ಕೆ ಮುಂದೂಡಲ್ಪಟ್ಟಿದೆಯಂತೆ. ಆರ್​ಆರ್​ಆರ್​​ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ. 2015ರಲ್ಲಿ ಬಾಹುಬಲಿ ಸಿನಿಮಾ ತೆರೆಕಂಡಿತ್ತು. ಇದಾದ ಎರಡೇ ವರ್ಷಕ್ಕೆ ಬಾಹುಬಲಿ 2 ಸಿನಿಮಾ ತೆರೆಕಂಡಿತ್ತು. ಈ ಸಿನಿಮಾ ತೆರೆಕಂಡು ನಾಲ್ಕು ವರ್ಷಗಳೇ ಕಳೆದಿವೆ. ಈಗ ರಾಜಮೌಳಿ ಅವರ ಮುಂದಿನ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆದರೆ, ಪದೇಪದೇ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಡುತ್ತಿರುವುದು ಅಭಿಮಾನಿಗಳಿಗೆ ಬೇಸರ ಉಂಟಾಗುತ್ತಿದೆ.

(jr ntr tarak tweets to tell he got contracted coronavirus)

Also Read:

ಕೊರೊನಾ ಬಗ್ಗೆ ಕನ್ನಡದಲ್ಲೇ ಜಾಗೃತಿ ಮೂಡಿಸಿದ ಟಾಲಿವುಡ್​ ಸ್ಟಾರ್​ ಜೂ. ಎನ್​ಟಿಆರ್​

ಖ್ಯಾತ ಯುವ ನಟ ಅಲ್ಲು ಅರ್ಜುನ್​ಗೂ ಬಂತು ಕೊರೊನಾ ಸೋಂಕು

Published On - 3:48 pm, Mon, 10 May 21

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us