ಚೆನ್ನೈ: 2020ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದ ಅಭಿಯಾನವನ್ನು ಪ್ರಾರಂಭಿಸುವ ಕೆಲವೇ ಗಂಟೆಗಳ ಮೊದಲು, ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಹೊಸ ಸಂಸತ್ತು ಯೋಜನೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಆರ್ಥಿಕತೆಯು ತೀವ್ರ ಸಂಕಷ್ಟವನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಇಂತಹ ಬೃಹತ್ ಯೋಜನೆಯ ಅಗತ್ಯವೇನಿತ್ತು ಎಂದು ಹಿರಿಯ ನಟ ಮತ್ತು ಮಕ್ಕಳ್ ನೀಧಿ ಮಾಯಂ (ಎಂಎನ್ಎಂ) ಸಂಸ್ಥಾಪಕ ಕಮಲ್ ಹಾಸನ್ ಭಾನುವಾರ ಪ್ರಶ್ನಿಸಿದರು.
ಕಮಲ್ ಹಾಸನ್ ಟ್ವೀಟ್: ಡಿ 10ರಂದು ₹ 1,000 ಕೋಟಿ ಅಂದಾಜುವೆಚ್ಚದ ಹೊಸ ಸಂಸತ್ತು ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಭಾರತದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿರುವ ಈ ಸಂದರ್ಭದಲ್ಲಿ ಹೊಸ ಸಂಸತ್ತಿನ ಅವಶ್ಯಕತೆ ಏನಿತ್ತು ಎಂದು ಹಾಸನ್ ಶನಿವಾರ ಟ್ವೀಟ್ನಲ್ಲಿ ಕೇಳಿದ್ದರು.
ಮೇ 2021 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಈ ಬಾರಿ ಸ್ಪರ್ಧಿಸುವ ಸಾಧ್ಯತೆಯಿದೆ. ತಮಿಳುನಾಡಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ರಾಜ್ಯದ ಅಭಿವೃದ್ದಿಗಾಗಿ ದುಡಿಯುತ್ತೇವೆ ಎಂದು ತಮ್ಮ ಪಕ್ಷದ ಬಗ್ಗೆ ಕಮಲ್ ಹಾಸನ್ ತಿಳಿಸಿದರು.
ಹೊಸ ಸಂಸತ್ ಭವನ ನಿರ್ಮಾಣ ವಿರೋಧಿಸಿದ ಕಾಂಗ್ರೆಸ್ ದ್ವಂದ್ವ ನಿಲುವು ಬಯಲಾಯ್ತು; ಏನಿದೆ ಆ ಪತ್ರದಲ್ಲಿ?