Delhi Chalo | ರೈತರ ಪ್ರತಿಭಟನೆಗೆ ಪಂಜಾಬ್, ಹರ್ಯಾಣದ ಗೃಹಿಣಿಯರ ಬೆಂಬಲ

ಟಿಕರಿ ಮತ್ತು ಸಿಂಘು ಗಡಿಭಾಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವಾಗ ಮಹಿಳೆಯರು ಮನೆ ಮತ್ತು ಹೊಲಗಳನ್ನು ಸಂಭಾಳಿಸುವ ಜತೆಗೆ ಪ್ರತಿಭಟನೆಗಳಲ್ಲಿ ಭಾಗಿಯಾಗಿ ಬೆಂಬಲ ನೀಡುತ್ತಿದ್ದಾರೆ.

Delhi Chalo | ರೈತರ ಪ್ರತಿಭಟನೆಗೆ ಪಂಜಾಬ್, ಹರ್ಯಾಣದ ಗೃಹಿಣಿಯರ ಬೆಂಬಲ
Follow us
ರಶ್ಮಿ ಕಲ್ಲಕಟ್ಟ
| Updated By: guruganesh bhat

Updated on:Dec 14, 2020 | 11:20 AM

ನವದೆಹಲಿ: ಹರ್ಯಾಣ ಮತ್ತು ಪಂಜಾಬ್​​ನಿಂದ ನೂರಾರು ಮಹಿಳೆಯರು ದೆಹಲಿಗೆ ಬಂದಿದ್ದು ರೈತರ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.

ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನು ವಿರುದ್ಧ ತಮ್ಮ ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸುತ್ತಿರುವಾಗ ಅವರಿಗೆ ಬೆಂಬಲ ನೀಡಲು ಮಹಿಳೆಯರು ದೆಹಲಿಗೆ ಬಂದಿದ್ದಾರೆ. ಗೃಹಿಣಿಯರು, ರೈತ ಮಹಿಳೆಯರು ತಮ್ಮ ಗ್ರಾಮಗಳಿಂದ ದೆಹಲಿಗೆ ಬಂದಿದ್ದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಕೃಷಿಕರನ್ನು ಲಿಂಗದ ಆಧಾರದ ಮೇಲೆ ವ್ಯಾಖ್ಯಾನಿಸಲು ಆಗುವುದಿಲ್ಲ. ಗಂಡಸು ಅಥವಾ ಹೆಂಗಸು ಹೊಲದಲ್ಲಿ ದುಡಿದರೆ ಲಿಂಗದ ಆಧಾರದ ಮೇಲೆ ಬೆಳೆ ಬೆಳೆಯುವುದಿಲ್ಲ. ಹಲವಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಿರುವಾಗ ನಾವು ಯಾಕೆ ಮನೆಯಲ್ಲಿ ಕುಳಿತಿರಬೇಕು ಎಂದು ಲುಧಿಯಾನದಿಂದ ಬಂದ 53ರ ಹರೆಯದ ರೈತ ಮಹಿಳೆ ಪ್ರಶ್ನಿಸುತ್ತಾರೆ.

ಮನ್​​ದೀಪ್ ಅವರು ಸಿಂಘು ಗಡಿಭಾಗಕ್ಕೆ ಬಸ್ ಮೂಲಕ ಬಂದಿದ್ದಾರೆ. ಕಳೆದ ಎರಡು ವಾರಗಳಿಂದ ರೈತರು ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಆ ಪ್ರತಿಭಟನೆಯಲ್ಲಿ ಒಂದು ರಾತ್ರಿ ಭಾಗಿಯಾಗಿ ಮನೆಗೆ ಮರಳಿದ್ದಾರೆ. ನಾವು ನಮ್ಮ ಮನೆ ಮತ್ತು ಪ್ರತಿಭಟನೆ ಎರಡನ್ನೂ ಸಂಭಾಳಿಸಬೇಕು. ನಾನು ಇಲ್ಲಿಗೆ ಬರುವ ಮುನ್ನ ಗಿಡಗಳಿಗೆ ನೀರುಣಿಸಿ ಬಂದಿದ್ದೆ. ನಾನು ಹಿಂತಿರುಗುವವರೆಗೆ ಅದು ಸಾಕಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Delhi Chalo: 6ನೇ ಸುತ್ತಿನ ಸಭೆ ರದ್ದು, ಸಂಜೆ ಮುಂದಿನ ನಡೆ ಪ್ರಕಟಿಸಲಿರುವ ಪಂಜಾಬ್ ರೈತರು

ಟಿಕರಿ ಮತ್ತು ಸಿಂಘು ಗಡಿಭಾಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವಾಗ ಮಹಿಳೆಯರು ಮನೆ ಮತ್ತು ಹೊಲಗಳನ್ನು ಸಂಭಾಳಿಸುವ ಜತೆಗೆ ಪ್ರತಿಭಟನೆಗಳಲ್ಲಿ ಭಾಗಿಯಾಗಿ ಬೆಂಬಲ ನೀಡುತ್ತಿದ್ದಾರೆ.

ಮನ್​​ದೀಪ್ ಅವರೊಂದಿಗೆ ಲುಧಿಯಾನದಿಂದ ಸಿಂಘು ಗಡಿಭಾಗಕ್ಕೆ ಬರಲು ಐದು ಗಂಟೆಗಳ ಬಸ್ ಪ್ರಯಾಣದಲ್ಲಿ ಜತೆಯಾದವರು ಸುಖ್ವಿಂದರ್ ಕೌರ್.

ನಮ್ಮ ಕುಟುಂಬದವರು ಪ್ರತಿಭಟನೆ ನಡೆಸುತ್ತಿರುವಾಗ ಮನೆಯಲ್ಲಿ ಕುಳಿತುಕೊಳ್ಳಲು ನನ್ನಿಂದಾಗದು. ರಾತ್ರಿ ನನಗೆ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ನನ್ನ ಸಹೋದರು ಇಲ್ಲಿ ಹೋರಾಡುತ್ತಿರುವಾಗ ನಾನು ಮನೆಯಲ್ಲಿ ಹೇಗೆ ಕುಳಿತುಕೊಳ್ಳಲಿ? ನಾನು ಇಲ್ಲಿಗೆ ಬಂದ ನಂತರವೇ ಸರಿಯಾಗಿ ನಿದ್ದೆ ಮಾಡಿದ್ದು ಅಂತಾರೆ 68ರ ಹರೆಯದ ಸುಖ್ವಿಂದರ್ ಕೌರ್.

ಸುಖ್ವಿಂದರ್, ಮನ್​​ದೀಪ್ ಸೇರಿದಂತೆ ಹಲವಾರು ಮಹಿಳೆಯರು ಸರ್ಕಾರೇತರ ಸಂಸ್ಥೆ ಖಾಲ್ಸಾ ಏಡ್ ಸಿದ್ಧಪಡಿಸಿರುವ ವಾಟರ್ ಪ್ರೂಫ್ ಟೆಂಟ್​ನಲ್ಲಿ ಮಲಗಿದ್ದಾರೆ.

ನಾವು ಹಳ್ಳಿಯ ಗೃಹಿಣಿಯರು. ಜಗತ್ತಿನ ಬಗ್ಗೆ ನಮಗೆ ಜಾಸ್ತಿ ಗೊತ್ತಿಲ್ಲ. ಆದರೆ ಇಲ್ಲಿಗೆ ಬಂದ ನಂತರ ಈ ಹೋರಾಟ ಎಷ್ಟು ದೊಡ್ಡದು ಎಂಬುದು ತಿಳಿಯಿತು. ಅದೆಷ್ಟೇ ದಿನ ಮುಂದುವರಿಯಲಿ ನಾವು ಅದಕ್ಕೆ ಸಿದ್ಧರಾಗಿಯೇ ಬಂದಿದ್ದೇವೆ. ನಮಗೆ ಇಲ್ಲಿ ದೊರಕುವ ಸಹಾಯ ನೋಡಿದರೆ ಇಡೀ ದೇಶವೇ ನಮ್ಮ ಜತೆ ಇದೆ ಎಂದು ಅನಿಸುತ್ತಿದೆ. ಆಸ್ಟ್ರೇಲಿಯಾ, ಕೆನಡಾ ಮತ್ತು ಅಮೆರಿಕದವರು ಕೂಡಾ ನಮ್ಮ ಜತೆ ಇದ್ದಾರೆ ತಿಳಿಯಿತು. ಇಲ್ಲಿ ವೈದ್ಯಕೀಯ ಸವಲತ್ತು ಇದೆ. ಆದರೆ ಶೌಚಾಲಯಕ್ಕೆ ಹೋಗಬೇಕಾದರೆ ಸ್ವಲ್ಪ ದೂರ ಹೋಗಬೇಕು. ಇದರಿಂದಾಗಿಯೇ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿ ಮತ್ತೆ ಮನೆಗೆ ಮರಳುತ್ತಿದ್ದಾರೆ ಎಂದು ಸುಖ್ವಿಂದರ್ ಹೇಳಿದ್ದಾರೆ.

Delhi Chalo: ಕೇಂದ್ರ ಸರ್ಕಾರಕ್ಕೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದ ಪಂಜಾಬ್ ರೈತರು

Published On - 3:12 pm, Sun, 13 December 20

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!